ಪ್ರಮುಖ ಸುದ್ದಿ
ಪೋಲಿ ಮೇಷ್ಟ್ರಿಗೆ ಹಳ್ಳಿ ಪಾಠ!
ಚಿಕ್ಕಬಳ್ಳಾಪುರ : ಪರಗೋಡು ಸರ್ಕಾರಿ ಶಾಲೆ ಮುಖ್ಯ ಶಿಕ್ಷಕ ಬಾಬು ಹಳೇ ವಿದ್ಯಾರ್ಥಿನಿ ಜತೆ ಪ್ರಣಯದಲ್ಲಿ ತೊಡಗಿದ್ದನಂತೆ. ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಪೋಲಿ ಬಾಬುನನ್ನು ಪೋಷಕರು ಮತ್ತು ಗ್ರಾಮಸ್ಥರು ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ್ದಾರೆ. ಹಳೇ ವಿದ್ಯಾರ್ಥಿನಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ತನ್ನ ಕರ್ತವ್ಯವನ್ನು ಮರೆತು ಶಾಲಾವಧಿಯಲ್ಲೇ ಪರ ಊರಿಗೆ ತೆರಳಿ ಪ್ರಣಯದಲ್ಲಿ ತೊಡಗಿದ್ದ ಪೋಲಿ ಮೇಷ್ಟ್ರಿಗೆ ಜನರೇ ತಕ್ಕ ಪಾಠ ಮಾಡಿದ್ದಾರೆ. ಬಳಿಕ ಬಾಗೇಪಲ್ಲಿ ಪೊಲೀಸರಿಗೆ ಆರೋಪಿ ಶಿಕ್ಷಕ ಬಾಬುನನ್ನು ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ. ಪೊಲೀಸರ ತನಿಖೆಯಿಂದ ಸತ್ಯಾಸತ್ಯತೆ ಬಯಲಾಗಬೇಕಿದೆ.