ಪ್ರಮುಖ ಸುದ್ದಿ
ಎರಡು ವೈನ್ಸ್ ಬಂದ್ ಮಾಡಿಸಿದ ದಿಟ್ಟ ಮಹಿಳೆಯರು
ಗದಗಃ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಿರುವದನ್ನು ಖಂಡಿಸಿ ಪ್ರತಿಭಟನಾನಿರತ ಮಹಿಳೆಯರು ಎರಡು ವೈನ್ ಶಾಪ್ ಗಳನ್ನು ಬಂದ್ ಮಾಡಿಸಿದ ಘಟನೆ ತಾಲೂಕಿನ ಹೊಳೆಆಲೂರನಲ್ಲಿ ನಡೆದಿದೆ.
ಕೊರೊನಾ ಹಾವಳಿಯಿಂದಾಗಿ ಜನ ಸಂಕಷ್ಟದಲ್ಲಿದ್ದಾರೆ. ಒಪ್ಪತ್ತಿನ ಊಟಕ್ಕು ಪರಿತಪಿಸುವಂತಾಗಿದೆ. ದಿನಸಿ, ದಿನಬಳಕೆ ವಸ್ತು ಖರೀದಿಗೂ ಹಣವಿಲ್ಲ. ಇಂತಹ ವಿಷಮ ಸ್ಥಿತಿಯಲ್ಲಿ ಮದ್ಯದ ಅಂಗಡಿ ತೆರೆಯಬೇಡಿ ಕೂಡಲೇ ಬಂದ್ ಮಾಡಬೇಕು.
ಅಲ್ಪಸ್ವಲ್ಪ ಕೂಡಿಟ್ಟ ಹಣವನ್ನು ಕುಡಿತದ ಚಟಕ್ಕಾಗಿ ಮನೆಯಲ್ಲಿ ಗಂಡಸರ ಜೊತೆ ಕಾದಾಟ ನಡೆದಿದೆ. ಈಗಲೆ ವೈನ್ಸ್ ಬಂದ್ ಮಾಡಬೇಕು ಇಲ್ಲವಾದಲ್ಲಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಪ್ರತಿಭಟನಾನಿರತ ಮಹಿಳೆಯರು ಬಿಗಿಪಟ್ಟು ಹಿಡಿದಿರುವ ಹಿನ್ನೆಲೆ ಪೊಲೀಸರು ಎಷ್ಟೆ ಸಮಧಾನಿಸಿದರು ಮಹಿಳೆಯರು ಒಪ್ಪದ ಕಾರಣ ಹೊಳೆಆಲೂರಿನಲ್ಲಿದ್ದ ವಿವೇಕ ವೈನ್ಸ್ ಮತ್ತು ಪ್ರಗತಿ ವೈನ್ಸ್ ಶಾಪ್ ಗಳನ್ನು ಬಂದ್ಮಾಡಿಸಲಾಯಿತು.
ಬಂದ್ ಮಾಡಿದ ನಂತರವೇ ಮಹಿಳೆಯರು ಪ್ರತಿಭಟನೆ ಹಿಂತೆಗೆದುಕೊಂಡು ವಾಪಸ್ ಮನೆಗೆ ತೆರಳಿದರು ಎನ್ನಲಾಗಿದೆ.