ಪ್ರಮುಖ ಸುದ್ದಿ

ಯಾದಗಿರಿಃ ಈಶಾನ್ಯ ಶಿಕ್ಷಕರ ಮತಕ್ಷೇತ್ರ ಚುನಾವಣೆ- ಪ್ರತಿಶತ 81.59 ರಷ್ಟು ಮತದಾನ

ಯಾದಗಿರಿಃ ಜಿಲ್ಲೆಯಲ್ಲಿ ಈಶಾನ್ಯ ಕರ್ನಾಟಕ ಶಿಕ್ಷಕರ ಮತಕ್ಷೇತ್ರ ಚುನಾವಣೆ ವ್ಯಾಪ್ತಿಯಲ್ಲಿ ಬರುವ ಮತಗಟ್ಟೆಗಳಲ್ಲಿ ಮತದಾನಕ್ಕೆ ಆಗಮಿಸುವ ಮತದಾರರಿಗೆ ಥರ್ಮಲ್ ಸ್ಕ್ರೀನಿಂಗ್‍ಮಾಡಿ, ಸಾನಿಟೈಸರ್ ನೀಡಿ, ಮಾಸ್ಕ್, ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಾಕ್ಸ್ ಕ್ರಮಾನುಸಾರ ಮತದಾರರಿಗೆ ಮತಗಟ್ಟೆಗಳಲ್ಲಿ ಅವಕಾಶ ಕಲ್ಪಿಸಲಾಗಿತ್ತು.

ಜಿಲ್ಲೆಯಲ್ಲಿ ಈಶಾನ್ಯ ಕರ್ನಾಟಕ ಶಿಕ್ಷಕರ ಮತಕ್ಷೇತ್ರದ ಒಟ್ಟು 7 ಮತಗಟ್ಟೆಗಳಿದ್ದು, ಶಿಕ್ಷಕ ಮತದಾರ ಮಹಿಳೆಯರು 1446 ಮತ್ತು ಪುರುಷರು 515 ಒಟ್ಟು 1961 ಶಿಕ್ಷಕ ಮತದಾರರು ಇದ್ದು, ಜಿಲ್ಲೆಯಲ್ಲಿ ಅಕ್ಟೋಬರ್ 28ರ ಬುಧವಾರ ಶಿಕ್ಷಕ ಮತದಾರರು ಮಹಿಳಾ ಮತದಾರರು 362 ಮತ್ತು ಪುರಷ ಮತದಾರರು 1238 ಮತದಾನ ಮಾಡಿದ್ದು, ಒಟ್ಟಾರೆಯಾಗಿ ಜಿಲ್ಲೆಯಲ್ಲಿ 1600 ಮತದಾನ ಮಾಡುವ ಮೂಲಕ ಪ್ರತಿಶತ 81.59 ರಷ್ಟು ಶಿಕ್ಷಕರು ಮತ ಚಲಾಯಿಸಿದ್ದಾರೆ.

ಜಿಲ್ಲೆಯಲ್ಲಿ ಅಕ್ಟೋಬರ್ 28ರ ಬುಧವಾರ ಬೆಳಿಗ್ಗೆ 8ಗಂಟೆಯಿಂದ ಸಂಜೆ 5ಗಂಟೆಯವರಿಗೆ ಸಮಯನುಸಾರ ಮತದಾನ ನಡೆಯಿತು. ಯಾದಗಿರಿ ತಾಲ್ಲೂಕಿನಲ್ಲಿ ಒಟ್ಟು 451 ಜನ ಮತದಾರರು ಇದ್ದು, ಇದರಲ್ಲಿ ಒಟ್ಟು 363 ಜನ ಶಿಕ್ಷಕರು ತಮ್ಮ ಹಕ್ಕು ಚಲಾಯಿಸಿದರು. ಗುರುಮಠಕಲ್ ತಾಲ್ಲೂಕಿನಲ್ಲಿ ಒಟ್ಟು 176 ಮತದಾರರು ಇದ್ದು, ಇದರಲ್ಲಿ ಒಟ್ಟು 152 ಶಿಕ್ಷಕ ಮತದಾರರು ಮತದಾನ ಮಾಡಿದ್ದಾರೆ.

ಶಹಾಪುರ ತಾಲ್ಲೂಕಿನಲ್ಲಿ ಒಟ್ಟು 682 ಮತದಾರರು ಇದ್ದು, ಇದರಲ್ಲಿ ಒಟ್ಟು 547 ಶಿಕ್ಷಕ ಮತದಾರರು ಮತದಾನ ಮಾಡಿದ್ದಾರೆ. ಸುರಪುರ ತಾಲ್ಲೂಕಿನಲ್ಲಿ ಒಟ್ಟು 402 ಮತದಾರರು ಇದ್ದು, ಇದರಲ್ಲಿ ಒಟ್ಟು 327 ಶಿಕ್ಷಕ ಮತದಾರರು ಮತದಾನ ಮಾಡಿದ್ದಾರೆ, ಹುಣಸಗಿಯಲ್ಲಿ ಒಟ್ಟು 77 ಮತದಾರರು ಇದ್ದು, ಇದರಲ್ಲಿ ಒಟ್ಟು 65 ಶಿಕ್ಷಕ ಮತದಾರರು ಮತದಾನ ಮಾಡಿದ್ದಾರೆ, ಕೆಂಭಾವಿನಲ್ಲಿ ಒಟ್ಟು 105 ಮತದಾರರು ಇದ್ದು, ಇದರಲ್ಲಿ ಒಟ್ಟು 86 ಶಿಕ್ಷಕ ಮತದಾರರು ಮತದಾನ ಮಾಡಿದ್ದಾರೆ, ಕೋಡೆಕಲ್‍ನಲ್ಲಿ ಒಟ್ಟು 68 ಇದ್ದು, ಇದರಲ್ಲಿ ಒಟ್ಟು 60 ಜನ ಶಿಕ್ಷಕರು ಮತ ಚಲಾಯಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button