ಸಂಸದ ತೇಜಸ್ವಿ ಸೂರ್ಯ ಬರಿ ಮಾತಿಗಲ್ಲ.. ಗಾಯನಕ್ಕೂ ಸೈ..
ಸಂಸದ ತೇಜಸ್ವಿ ಸೂರ್ಯ ಬರಿ ಮಾತುಗಾರರಲ್ಲ ಗಾಯಕರು ಹೌದು.!
ಸಂಸದ ತೇಜಸ್ವಿ ಸೂರ್ಯ ಹಾಡಿಗೊಂದು ಎಲ್ಲೆ ಎಲ್ಲಿದೆ..!
ಬೆಂಗಳೂರಃ ಸಂಸದ ತೇಜಸ್ವಿ ಸೂರ್ಯ ಉತ್ತಮ ಮಾತುಗಾರ ಎಲ್ಲರಿಗೂ ಗೊತ್ತು. ಬಿಜೆಪಿಯಲ್ಲಿ ಚಿಕ್ಕವಯಸ್ಸಿನಲ್ಲಿಯೇ ಸಂಸದರಾಗಿ ಅವರ ಕಾರ್ಯಕ್ಷಮತೆ ಬಗ್ಗೆ ಎಲ್ಲರೂ ಗಮನಿಸಿದ್ದೀರಿ, ಆದರೆ ಅವರೊಲ್ಲಬ್ಬ ಕಲಾವಿದ ಇದ್ದಾನೇ ಎಂಬುದು ಗಣೇಶೋತ್ಸವದಲ್ಲಿ ಅದ್ಬುತ ಗಾಯಕರಾದ ವಿಜಯ ಪ್ರಕಾಶ ಅವರು ಪರಿಚಯಿಸಿದ್ದಾರೆ.
ನಿಜಕ್ಕು ವಿಜಯಪ್ರಕಾಶ ಸರ್ ಗೆ ಬಸವನ ಗುಡಿ ಮಂದಿ ಸೆಲ್ಯೂಟ್ ಹೊಡೆದಿದ್ದಾರೆ. ಕಾರಣವಿಷ್ಟೆ. ಸಂಸದ ತೇಜಸ್ವಿ ಸೂರ್ಯರಿಂದ ಬಾನಿಗೊಂದು ಎಲ್ಲೆ ಎಲ್ಲಿದೆ…ನಿಧಾನಿಸು ನಿಧಾನಿಸು ಎಂದು ಅಣ್ಣಾವ್ರು ಹಾಡನ್ನು ಬಸವನಗುಡಿಯ ೫೮ ನೇ ಗಣೇಶೋತ್ವದಲ್ಲಿ ವೇದಿಕೆ ಮೇಲೆ ಹಾಡುವ ಮೂಲಕ ಅವರ ಕಲಾಭಿರುಚಿಯನ್ನು ಹೊರ ಹಾಕಿದ್ದಾರೆ.
ತೇಜಸ್ವಿಸೂರ್ಯ ಅವರು ಅದ್ಭುತ ಗಾಯಕರೂ ಹೌದು ಅದೆಷ್ಟು ಜನರಿಗೆ ಗೊತ್ತಿತ್ತೋ ಇಲ್ವೋ ಆದರೆ, ಹಾಡುಗಾರ ವಿಜಯಪ್ರಕಾಶ ಅವರು, ಅವರ ಕಲೆಯನ್ನು ಗಣೇಶೋತ್ಸವ ಸಂದರ್ಭ ತೇಜಸ್ವಿಯವರಿಂದ ಬಾನಿಗೊಂದು ಎಲ್ಲೆ ಎಲ್ಲಿದೇ..ಎಂಬ ಹಾಡು ಹಾಡಿಸುವ ಮೂಲಕ ಹೊರಹಾಕಿದರು. ತೇಜಸ್ವಿಯವರೊಳಗಡೆ ಓರ್ವ ಕಲಾವಿದ ಇರುವದು ಕಂಡು ಜನ ಖುಷಿ ಪಟ್ಟರು.