ಪ್ರಮುಖ ಸುದ್ದಿ
ರಸ್ತೆಗಿಳಿದರೆ ಕಂಡಲ್ಲಿ ಗುಂಡುಃ ತೆಲಂಗಾಣ ಸಿಎಂ ಎಚ್ಚರಿಕೆ
ಹೈದ್ರಾಬಾದ್ಃ ದೇಶದಾದ್ಯಂತ ಕೊರೊನಾ ರೋಗದ ತೀವ್ರತೆ ಹೆಚ್ಚಾಗುತ್ತಿದ್ದು, ಜನರ ರಕ್ಷಣೆಗೆ ಎಲ್ಲಾ ರಾಜ್ಯಗಳು 21 ದಿನಗಳ ಕಾಲ ಲಾಕ್ ಡೌನ್ ಆಗಿವೆ. ಇದನ್ನು ಗಂಭೀರವಾಗಿ ತೆಗೆದುಕೊಳ್ಳದ ಜನತೆ ಉದಾಸೀನತೆ ತೋರುತ್ತಿದ್ದು ರಸ್ತೆಗೆ ಇಳಿದಲ್ಲಿ ಕಂಡಲ್ಲಿ ಗುಂಡು ಹಾರಿಸಲು ಆದೇಶಿಸಲಾಗುವದು ಎಂದು ತೆಲಂಗಾಣ ಸಿಎಂ ಚಂದ್ರಶೇಖರ ರಾವ್ ಎಚ್ಚರಿಕೆ ನೀಡಿದ್ದಾರೆ.
ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ನೀಡಿದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಇಲ್ಲವಾದಲ್ಲಿ ಅನಿವಾರ್ಯ ವಾಗಿ ಕಂಡಲ್ಲಿ ಗುಂಡು ಆದೇಶ ನೀಡಲಾಗುವದು.
ಕೊರೊನಾ ತಡೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೇ ಮದ್ದಾಗಿದ್ದು, ಜನತೆ ಎಚ್ಚೆತ್ತುಕೊಳ್ಳಬೇಕು. ಇದರಿಂದ ನೀವು ನಿಮ್ಮಪರಿವಾರ ಬಡಾವಣೆ ಊರು, ರಾಜ್ಯ ದೇಶದ ರಕ್ಷಣೆ ಅಡಗಿದೆ. ಇಷ್ಟಾದರೂ ತಹಬಂದಿಗೆ ಬಾರದೆ ಹೋದಲ್ಲಿ ಶೂಟ್ ಆಂಡ್ ಸೈಟ್ ಆರ್ಡರದ ಅನಿವಾರ್ಯ ಎಂದಿದ್ದಾರೆ.