ಹೈದ್ರಾಬಾದ್ಃ ನಾಲ್ವರು ಕಾಮುಕರ ಎನ್ ಕೌಂಟರ್ – ದೇಶದಾದ್ಯಂತ ಸಂಭ್ರಮ
ಹೈದ್ರಾಬಾದ್ಃ ನಾಲ್ವರು ಕಾಮುಕರ ಎನ್ ಕೌಂಟರ್ – ದೇಶದಾದ್ಯಂತ ಸಂಭ್ರಮ
ವಿವಿ ಡೆಸ್ಕ್ಃ ಹೈದ್ರಾಬಾದ್ ನಲ್ಲಿ ಪಶುವೈದ್ಯೆಯನ್ನು ಸಾಮೂಹಿಕವಾಗಿ ಅತ್ಯಾಚಾರಗೈದು ಅವಳಿಗೆ ಬೆಂಕಿ ಹಚ್ಷಿ ಹತ್ಯೆಗೈದಿರುವ ಘಟನೆ ಇಡಿ ದೇಶವನ್ನೆ ಬೆಚ್ಚಿಬೀಳುವಂತೆ ಮಾಡಿತ್ತು.
ಈ ಪ್ರಕರಣದ ಆರೋಪಿಗಳಾದ ನಾಲ್ವರು ಕಾಮುಕರನ್ನು ಇಂದು ಶುಕ್ರವಾರ ಬೆಳಗಿನಜಾವದಲ್ಲಿ ಎನ್ ಕೌಂಟರ್ ಮಾಡಲಾಗಿದೆ ಎಂಬ ಸುದ್ದಿ ಸಹ ಅದರಷ್ಟೆ ಇಡಿ ದೇಶವನ್ನು ಆವರಿಸಿದ್ದು, ಎಲ್ಲಡೆ ಸಂಭ್ರಮದ ವಾತಾವರಣ ಸೃಷ್ಟಿ ಮಾಡಿದೆ.
ಅತ್ಯಾಚಾರ ಆರೋಪಿಗಳನ್ನು ಸ್ಥಳ ಮಹಜರು ಮಾಡಲು ಕರೆದುಕೊಂಡು ಹೋದಾಗ ಪೊಲೀಸರ ಗನ್ ಕಸಿದು ಹಲ್ಲೆ ನಡೆಸಲು ಯತ್ನಿಸಿದಾಗ ಅನಿವಾರ್ಯವಾಗಿ ಪೊಲೀಸರು ಆರೋಪಿಗಳ ಮೇಲೆ ಗುಂಡು ಹಾರಿಸಿದ್ದಾರೆ ಎಂದು ತೆಲಂಗಾಣ ಪೊಲೀಸ್ ಮೂಲಗಳು ತಿಳಿಸಿವೆ.
ಏನೇ ಆಗಲಿ ಸಮಾಜಘಾತಕ ಕಾರ್ಯ ಮಾಡುವ ಇಂತಹ ಕ್ರೂರಿ ಆರೋಪಿತರನ್ನು ಎನ್ ಕೌಂಟರ್ ಮಾಡಿರುವದು ನಾಗರಿಕರಲ್ಲಿ ಸಂತಸ ತಂದಿದೆ.
ಹೀಗಾಗಿ ದೇಶದೆಲ್ಲೆಡೆ ಸಂಭ್ರಮಾಚರಣೆ ನಡೆಯುತ್ತಿದೆ.
ತೆಲಂಗಾಣದ ಪೊಲೀಸ್ ಆಯುಕ್ತ ವಿಶ್ವನಾಥ ಸಜ್ಜನ್ ಅವರ ನೇತೃತ್ವದಲ್ಲಿ ನಡೆದ ಎನ್ ಕೌಂಟರ್ ಕಾರ್ಯಕ್ಕೆ ಜನರು ಶಹಭಾಶಗಿರಿ ನೀಡುತ್ತಿದ್ದಾರೆ.
ಎನ್ ಕೌಂಟರ್ ಪ್ರಮುಖ ರೂವಾರಿ ಪೊಲೀಸ್ ಆಯುಕ್ತ ಸಜ್ಜನ್ ಕರ್ನಾಟಕ ದವರು ಎಂದು ಹೇಳಲು ಇನ್ನಷ್ಟು ಹೆಮ್ಮೆ ತರುವಂತದ್ದಾಗಿದೆ. ಒಟ್ಟಾರಿ ಕ್ರೂರಿ ಅತ್ಯಾಚಾರಿಗಳನ್ನು ಖಲಾಸ್ ಮಾಡಿರುವದು ಒಳಿತಾಗಿದೆ. ಮುಂದಿನ ಕಾಮುಕರಿಗೆ ಇದೊಂದು ಎಚ್ಚರಿಕೆಯ ಗಂಟೆಯಾಗಿದೆ.
ಘಟನೆ ನಡೆದ 10 ದಿನಗಳಲ್ಲಿ ಕಾಮುಕರನ್ನು ಹೊಡೆದುರು ಳಿಸಿರುವದು ಮೃತ ಪಶುವೈದ್ಯೆಯ ಆತ್ಮಕ್ಕೆ ಶಾಂತಿ ದೊರಕಿದೆ.
ಈ ಕುರಿತು ಮೃತ ವೈದ್ಯೆಯ ತಂದೆಯವರು ಪ್ರತಿಕ್ರಿಯೆ ನೀಡಿದ್ದಾರೆ.
ದೇಶದಾದ್ಯಂತ ತೆಲಂಗಾಣ ಪೊಲೀಸರಿಗೆ ಜನರು, ಮಹಿಳೆಯರು, ಕಾಲೇಜು ಹುಡುಗಿಯರು ಕೃತಜ್ಞತೆ ಯನ್ನು ಸಲ್ಲಿಸುತ್ತಿದ್ದಾರೆ. ಕೆಲವಡೆ ವಾದ್ಯ, ನೃತ್ಯ ಸಿಹಿ ಹಂಚುವ ಮೂಲಕ ಸಂಭ್ರಮ ವ್ಯಕ್ತಪಡಿಸುತ್ತಿರುವದು ಕಂಡು ಬರುತ್ತಿದೆ.