ಪ್ರಮುಖ ಸುದ್ದಿ

2020 ರವೇಳೆಗೆ ಗ್ರಾಮಗಳಲ್ಲಿ ಉಚಿತ ವೈಫೈ ಸೇವೆ‌ – ಸಚಿವ ಪ್ರಸಾದ

ನವದೆಹಲಿಃ 2020 ಮಾರ್ಚ್ ವೇಳೆಗೆ ಭಾರತದ ಎಲ್ಲಾ‌ ಹಳ್ಳಿಗಳಿಗೆ ಉಚಿತ ವೈಫೈ ಸಂಪರ್ಕ ಕಲ್ಪಿಸಲಾಗುವದು ಎಂದು ಕೇಂದ್ರದ ಮಾಹಿತಿ ತಂತ್ರಜ್ಞಾನ ಮತ್ತು ಟೆಲಿಕಾಂ ಸಚಿವ ರವಿಶಂಕರ ಪ್ರಸಾದ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ 1.3 ಲಕ್ಷ ಗ್ರಾಮ‌ ಪಂಚಾಯತ್ ಗಳನ್ನು ಭಾರತ್ ನೆಟ್ ಆಪ್ಟಿಕಲ್ ಫೈಬರ್ ನೊಂದಿಗೆ ಸರ್ಕಾರ ಈಗಾಗಲೇ ಸಂಪರ್ಕ ಸಾಧಿಸಿದೆ.

ಇದರೊಂದಿಗೆ ಇನ್ನೂ 2.5 ಲಕ್ಷ‌ ಗ್ರಾಮ ಪಂಚಾಯತಿಗಳನ್ನು ಸಂಪರ್ಕಿಸುವದು ನಮ್ಮ ಗುರಿಯಾಗಿದ್ದು, 2020 ರ ವೇಳೆಗೆ ಭಾರತ್ ನೆಟ್ ಮೂಲಕ ಸಂಪರ್ಕ ಹೊಂದಿದ ಎಲ್ಲಾ ಗ್ರಾಮಗಳಿಗೆ ಉಚಿತ ವೈಫೈ ಕಲ್ಪಿಸಲಾಗುವದು.

ಭಾರತ ವೇಗವಾಗಿ ಡಿಜಿಟಲ್ ಇಂಡಿಯಾ ಆಗಿ ಬದಲಾಗುತ್ತಿದೆ. ಇಂಟರ್ನೆಟ್‌ ಸೇವೆಯನ್ನು ಗ್ರಾಮದಿಂದ ಗ್ರಾಮಕ್ಕೆ ಸಾಗಿಸಲಾಗುತ್ತಿದೆ. ನೆಟ್ ಜನರ ಜೀವನವನ್ನು ಬದಲಾಯಿಸಲಿದೆ ಎಂದು ತಿಳಿಸಿದರು.

Related Articles

Leave a Reply

Your email address will not be published. Required fields are marked *

Back to top button