ಪ್ರಮುಖ ಸುದ್ದಿ
ಗಂಗಾ ಪರಮೇಶ್ವರಿ, ಗಣಪತಿ ದೇಗುಲಗಳಿಗೆ ಕನ್ನ ಹಾಕಿದ ಕಳ್ಳರು!
ಶಿವಮೊಗ್ಗ : ಜಿಲ್ಲೆಯ ಸಾಗರ ನಗರದಲ್ಲಿ ದೇಗುಲಗಳ ಸರಣಿ ಕಳ್ಳತನ ನಡೆದಿದೆ. ಸಾಗರ ನಗರದ ಬೀಮನಕೋಣೆ ರಸ್ತೆಯಲ್ಲಿರುವ ಗಂಗಾಪರಮೇಶ್ಬರಿ ದೇಗುಲ ಹಾಗೂ ಅದೇ ರಸ್ತೆಯಲ್ಲಿನ ಗಣಪತಿ ದೇವಸ್ಥಾನದ ಹುಂಡಿಯನ್ನು ಹೊಡೆದು ಕಳ್ಳರು ಹಣವನ್ನು ದೋಚಿ ಎಸ್ಕೇಪ್ ಆಗಿದ್ದಾರೆ.
ನಗರದ ಮುಖ್ಯ ರಸ್ತೆಯಲ್ಲಿರುವ ಎರಡು ದೇವಸ್ಥಾನಗಳಿಗೆ ಕಳ್ಳರು ಕನ್ನ ಹಾಕಿದ್ದು ನಾಗರಿಕರಲ್ಲಿ ಆತಂಕ ಮೂಡಿಸಿದೆ. ಸಾಗರ ನಗರ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.