Home
ಟೆಂಪೋ ಪಲ್ಟಿ 20 ಕ್ಕೂ ಹೆಚ್ಚು ಕುರಿ, ಮೇಕೆಗಳ ದಾರುಣ ಸಾವು
ಟೆಂಪೋ ಪಲ್ಟಿ 20 ಕ್ಕು ಹೆಚ್ಚು ಕುರಿ, ಮೇಕೆಗಳ ಸಾವು
ಚಿತ್ರದುರ್ಗಃ ರಸ್ತೆ ಬದಿಯಲ್ಲಿ ಹೊರಟಿದ್ದ ಕುರಿ, ಮೇಕೆಗಳ ಗುಂಪಿನ ಮೇಲೆ ಆಯಾ ತಪ್ಪಿದ ಟೆಂಪೊವೊಂದು ಹರಿದು ಹೋದ ಪರಿಣಾಮ ಸ್ಥಳದಲ್ಲಿಯೇ 20 ಕ್ಕೂ ಹೆಚ್ಚು ಕುರಿ, ಮೇಕೆಗಳು ಮೃತಪಟ್ಟ ಘಟನೆ ಹೊಸದುರ್ಗ ತಾಲೂಕಿನ ಶಿರನಕಟ್ಟೆ ಗ್ರಾಮ ಬಳಿ ನಡೆದಿದೆ.
ರಸ್ತೆ ಬದಿ ಹೊರಟಿದ್ದ ಕುರಿ, ಮೇಕೆಗಳ ಮೇಲೆ ಟೆಂಪೊ ಹರಿದ ಹಿನ್ನೆಲೆ ರಸ್ತೆ ಮೇಲೆಯೇ ಪಲ್ಟಿಯಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೊಸದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.