ಯಾದಗಿರಿಯಲ್ಲಿ ಶೆಟರ್ ಮುರಿದು ಕಳ್ಳತನಃ ಸಿಸಿ ಕ್ಯಾಮೆರಾದಲ್ಲಿ ಸೆರೆ
ಯಾದಗಿರಿಯಲ್ಲಿ ಶೆಟರ್ ಮುರಿದು ಕಳ್ಳತನಃ ಸಿಸಿ ಕ್ಯಾಮೆರಾದಲ್ಲಿ ಸೆರೆ ಆಯ್ತು ಕಳ್ಳರ ಕೈಚಳಕ!
ಯಾದಗಿರಿಃ ನಗರದ ಚಿತಾಪುರ ರಸ್ತೆಯಲ್ಲಿರುವ ಕಿರಾಣಿ ಮತ್ತು ಜನರಲ್ ಸ್ಟೋರ ಅಂಗಡಿಯೊಂದರ ಶೆಟರ್ ನ್ನು ಕಬ್ಬಿಣದ ರಾಡ್ ನಿಂದ ಮುರಿದು ಕಳ್ಳತನ ಮಾಡಿದ ಘಟನೆ ಶನಿವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ನಡೆದಿದೆ.
ಅಂಗಡಿಯಲ್ಲಿದ್ದ 50 ಸಾವಿರ ರೂ. ನಗದು ಮತ್ತು ಸಿಗರೇಟ್ ಬಾಕ್ಸ್ ಗಳನ್ನು ಸೇರಿದಂತೆ ಇತರೆ ವಸ್ತುಗಳನ್ನು ಖದೀಮರ ಕದ್ದುಕೊಂಡು ಹೋಗಿದ್ದಾರೆ ಎಂದು ಅಂಗಡಿ ಮಾಲೀಕ ನದೀಮ್ ಎಂಬುವರು ನಗರಠಾಣೆಗೆ ದೂರು ನೀಡಿದ್ದಾರೆ.
ಅಂಗಡಿಯಲ್ಲಿದ್ದ ಹಣದೊಂದಿಗೆ, ಸಿಗರೇಟ್ ಪ್ಯಾಕ್ ಗಳು, ಗುಟ್ಕಾಗಳ ಪಾಕೆಟ್ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಕಳ್ಳರು ತೆಗೆದುಕೊಂಡು ಹೋಗಿದ್ದಾರೆ ಎಂದೂ ಅಂಗಡಿ ಮಾಲೀಕರು ತಿಳಿಸಿದ್ದಾರೆ.
ಅಲ್ಲದೆ ಅಂಗಡಿಗೆ ಅಳವಡಿಸಿದ್ದ ಸಿಸಿ ಕ್ಯಾಮೆರದಲ್ಲಿ ಕಳ್ಳರು ಶೆಟರ್ ಮುರಿಯುತ್ತಿರುವ ದೃಶ್ಯ ಸೆರೆಯಾಗಿದೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಸಿ ಕ್ಯಾಮೆರಾ ದೃಶ್ಯಾವಳಿಯನ್ನು ಪೊಲೀಸರು ಪಡೆದುಕೊಂಡಿದ್ದಾರೆ.
ನಗರ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಕಳುವು ಮಾಡಿ ಪರಾರಿಯಾದ ಖದೀಮರ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ.
Good sir
Thank u..