ಆಲೋಚಿಸಿ ಕಡ್ಡಾಯವಾಗಿ ಮತದಾನ ಮಾಡಿ
ನಿರ್ಲಕ್ಷ್ಯ ಬಿಡಿ ಮತದಾನ ಮಾಡಿ
ನಾನು ಮತದಾನ ಮಾಡದಿದ್ದರೇನಂತೆ ಮತ್ಯಾರೋ ಮಾಡುತ್ತಾರಲ್ಲವೇ ಎಂದು ಯೋಚಿಸುವುದು ತರವಲ್ಲ
ಅಸಲಿಗೆ ಪ್ರತಿಯೊಬ್ಬರೂ ಹಾಗೇಯೇ ಯೋಚಿಸಿದರೆ…?
ಆಗ ಆ ಮತ ಹಾಗೇ ಉಳಿದು ಹೋಗಬಹುದು ಅಥವಾ ಆ ಮತವನ್ನು ಇನ್ನೂಬ್ಬ ವ್ಯಕ್ತಿ ತನಗಿಷ್ಟವಾದ ಪಕ್ಷಕೆ ಚಲಾಯಿಸುವ ಮೂಲಕ ದುರ್ಬಬಳಿಕೆ ಯಾದರು ಅಚ್ಚರಿ ಪಡುವಂತಿಲ್ಲ.
ಆಗ ಭ್ರಷ್ಟ ಪಕ್ಷವು ಅಧಿಕಾರಕ್ಕೆ ಬರುತ್ತದೆ ಎಲ್ಲಾ ರಾಜಕೀಯ ಪಕ್ಷಗಳು ಒಂದೇ. ಯಾರು ಕೆಲಸ ಮಾಡೋಲ್ಲ ಅಂತ ಯೋಚಿಸಿ ಮತ ಚಲಾಯಿಸದೆ ಉಳಿದುಬಿಡಬೇಡಿ.
ಇದು ಪೂರ್ತಿ ಸತ್ಯವಲ್ಲ. ಇಲ್ಲಿ ಕೆಲಸಗಾರರು
ನಮ್ಮ ದೇಶದಲ್ಲಿ ಮಾಡಬೇಕಾದ ಸಾಧನೆಗಳು ಬಹಳಷ್ಟಿವೆ.
ಹಾಗಾಗಿ ಹಣದ ಆಮಿಷವೂಡ್ಡಿ ಗೆಲ್ಲಲು ಪ್ರಯತ್ನಿಸುವ ಅಭ್ಯರ್ಥಿಗಳ ಪೂರ್ವಪರವನ್ನು ತಿಳಿದು ಕೊಂಡು ಯಾರು ದೇಶವನ್ನು ಮುನ್ನಡೆಸುತ್ತಾರೆ ಎಂಬ ಅಂಶವನ್ನು ಮನದಲ್ಲಿಟ್ಟುಕೊಂಡೆ ಮತ ಚಲಾಯಿಸಬೇಕ್ಕು.
ಬುದ್ಧಿವಂತರ ದೃಷ್ಟಿಯಲ್ಲಿ ಸಮಾಜಸೇವೆಗೆ ರಾಜಕೀಯವೊಂದೇ ಮಾರ್ಗವಲ್ಲ. ಆದರೆ ಅವರು ತರಬೇಕೆನ್ನುವ ಬದಲಾವಣೆಗೆ ರಾಜಕೀಯವೂ ಬೇಕಾಗುತ್ತದೆ.
ಹಾಗಾಗಿ ನಮ್ಮ ಮತ ಅಮೂಲ್ಯವಾದದು ಜಾತಿ ಆಧಾರದ ಮೇಲೆ ತಮ್ಮ ಜನಪ್ರತಿನಿಧಿಗಳನ್ನು ಆರಿಸಬಾರದು ಸಾಮಾನ್ಯವಾಗಿ ಮೊದಲು ಮತದಾನ ಮಾಡುವವರು ತಮ್ಮ ಸ್ನೇಹಿತರು ಹಾಗೂ ಮನೆಯ ಹಿರಿಯರ ಮಾತುಗಳನ್ನು ಅನುಸರಿಸಿ ಅವರು ಹೇಳಿದ ವ್ಯಕ್ತಿಗೆ ಮತ ಚಲಾಯಿಸುತ್ತಾರೆ.
ಆದರೆ ಇದಾವುದೂ ದೇಶವನ್ನು ಮುನ್ನಡೆಸುವ ನಿರ್ಣಯ ಹೇಳಲಾಗುವುದಿಲ್ಲ. ಇದು ಅರ್ಹನೊಬ್ಬನ ಸೋಲಿಗೆ ಅಂತೂ ಖಂಡಿತವಾಗಿಯೂ ಕಾರಣವಾಗುತ್ತದೆ.
ಮತದಾರರು ಮತದಾನದ ಅವಶ್ಯಕತೆ ಏನು ಎಂದು ತಿಳಿದು ಅದು ನನ್ನ ಜವಾಬ್ದಾರಿಯೆಂದು ಅರಿತು ಸಕ್ರಿಯವಾಗಿ ಪಾಲ್ಗೊಳ್ಳಬೇಕು.
ದೇಶದ ಪ್ರಗತಿಯನ್ನು ತೋರುವ ರಾಜಕೀಯ ಪಕ್ಷ ಗುರುತಿಸೋಣ ಮತ್ತು ನಮ್ಮ ಹಕ್ಕನ್ನು ಮರೆಯದೆ ಚಲಾಯಿಸೋಣ.
–ಗೀತಾ ಬಾಬುರಾವ್ S B COLLEGE
ಪತ್ರಿಕೋದ್ಯಮ ವಿದ್ಯಾರ್ಥಿನಿ.