ಪ್ರಮುಖ ಸುದ್ದಿ
ಜೇಟ್ಲಿ ಬಜೆಟ್ನಲ್ಲಿ 2022ರ ಲಾಭದಾಯಕ ಯೋಜನೆಗಳಿವೆ – ಮಲ್ಲಿಕಾರ್ಜುನ ಖರ್ಗೆ
ನವದೆಹಲಿ: ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಮಂಡಿಸಿರುವ ಮೋದಿ ಸರ್ಕಾರದ ಬಜೆಟ್ ಚುನಾವಣಾ ದೃಷ್ಟಿಯ ಬಜೆಟ್ ಆಗಿದೆ. 2019 ಕ್ಕೆ ಬಜೆಟ್ ನಲ್ಲಿ ಯಾವುದೇ ಉತ್ತಮ ಯೋಜನೆಗಳಿಲ್ಲ. ಬದಲಾಗಿ 2022ಕ್ಕೆ ಲಾಭದಾಯಕ ಯೋಜನೆಗಳಿವೆ. ತೆರಿಗೆ ನೀತಿ ಹೊರತು ಪಡಿಸಿ ಇದು ವರ್ಷದ ಬಜೆಟ್ ಅಲ್ಲ ಎಂದು ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಬಜೆಟ್ ನಲ್ಲಿ ಹಲವು ಭರವಸೆಗಳನ್ನು ನೀಡಿದೆ. ರೈತರ ಆದಾಯ ದ್ವಿಗುಣದ ಹುಸಿ ಭರವಸೆಯನ್ನೂ ನೀಡಲಾಗಿದೆ. ಪ್ರಾಥಮಿಕ ಶಿಕ್ಷಣಕ್ಕೆ ಸರಿಯಾದ ಅನುದಾನ ನೀಡಿಲ್ಲ ಎಂದು ಕಾಂಗ್ರೆಸ್ಸಿನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದಾರೆ.