ಪ್ರಮುಖ ಸುದ್ದಿ
ಈಜಲು ತೆರಳಿದ್ದ ಮೂವರು ಬಾಲಕರು ನೀರುಪಾಲು!
ವಿಜಯಪುರ: ಜಿಲ್ಲೆಯ ಸಿಂದಗಿ ತಾಲೂಕಿನ ದೇವರಹಿಪ್ಪರಗಿ ಪಟ್ಟಣದ ಬಳಿಯ ಕೆರೆಯಲ್ಲಿ ಈಜಲು ತೆರಳಿದ್ದ ಮೂವರು ಬಾಲಕರು ನೀರು ಪಾಲಾಗಿರುವ ದುರ್ಘಟನೆ ನಡೆದಿದೆ. ಇಂದು ಬೆಳಗ್ಗೆಯೇ ಈಜಾಡಲೆಂದು ಬಾಲಕರು ಕೆರೆಗೆ ತೆರಳಿದ್ದರು. ಆದರೆ, ಬಾಲಕರ ಪೋಷಕರಿಗೆ ಈ ಬಗ್ಗೆ ಸರಿಯಾದ ಮಾಹಿತಿ ಇರಲಿಲ್ಲ. ಹೀಗಾಗಿ, ಪೋಷಕರು ಅನೇಕ ಕಡೆ ಮಕ್ಕಳನ್ನು ಹುಡುಕಿದ್ದಾರೆ. ಆದರೆ, ಸಂಜೆ ಹೊತ್ತಿಗೆ ಕೆರೆಯಲ್ಲಿ ಮುಳುಗಿದ್ದ ಬಾಲಕರು ಶವವಾಗಿ ಪತ್ತೆಯಾಗಿದ್ದಾರೆ.
ದೇವರಹಿಪ್ಪರಗಿ ಪಟ್ಟಣದ ಸಲ್ಮಾನ (05), ಹರ್ಭಜ್(06) ಹಾಗೂ ಜುಬೇರ್(05) ಮೃತ ಬಾಲಕರು ಎಂದು ಗುರುತಿಸಲಾಗಿದೆ. ಮೃತ ಬಾಲಕರ ಆಕ್ರಂದನ ಮುಗಿಲು ಮುಟ್ಟಿದೆ. ಕೆರೆ ಬಳಿ ಜನ ಜಾತ್ರೆಯೇ ಸೇರಿದ್ದು ಪ್ರತಿಯೊಬ್ಬರೂ ಮುಗ್ದ ಕಂದಮ್ಮಗಳ ಸಾವು ಕಂಡು ಮರಗುತ್ತಿದ್ದಾರೆ. ಮೃತ ಬಾಲಕರ ಪೋಷಕರಿಗೆ ಸಮಾಧಾನ ಮಾಡುವಲ್ಲಿ ಸೋಲುತ್ತಿದ್ದಾರೆ. ದೇವರಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.