ಪ್ರಮುಖ ಸುದ್ದಿ
ಶಹಾಪುರಃ ವಿದ್ಯುತ್ ತಂತಿ ತಗುಲಿ ಯುವತಿ ಸಾವು
ಕುರಿ ರಕ್ಷಿಸಲು ಹೋಗಿ ಪ್ರಾಣತೆತ್ತ ಶಿಲ್ಪಾ
ಯಾದಗಿರಿ: ಹರಿಯುತ್ತಿರುವ ವಿದ್ಯುತ್ ತಂತಿ ತಗುಲಿ ಯುವತಿ ಜೊತೆಗೆ ಒಂದು ಕುರಿ ಸಹ ಮೃತಪಟ್ಟ ಘಟನೆ ಜಿಲ್ಲೆಯ ಶಹಾಪುರ ತಾಲೂಕಿನ ಸಿಂಗನಳ್ಳಿ ಗ್ರಾಮದಲ್ಲಿ ನಡೆದಿದೆ.
ಕುರಿ ಮೇಯಿಸಲು ಹೋದಾಗ ಗ್ರಾಮದ ಹೊರ ಭಾಗದಲ್ಲಿ ಹರಿಯುತ್ತಿರುವ ವಿದ್ಯುತ್ ತಂತಿ ಕಡಿದು ಬಿದ್ದಿತ್ತು, ಮೇಯಲು ಹೋದ ಕುರಿ ವಿದ್ಯುತ್ ತಂತಿ ಸ್ಪರ್ಶಿಸಿದ್ದು, ಕುರಿಯನ್ನು ಅಪಾಯದಿಂದ ರಕ್ಷಿಸಲು ತೆರಳಿದ ಯುವತಿ ಶಿಲ್ಪಾ (18) ಳಿಗೂ ವಿದ್ಯುತ್ ಸ್ಪರ್ಶವಾದ ಕಾರಣ ಸ್ಥಳದಲ್ಲೆ ಸಾವನಪ್ಪಿದ್ದಾಳೆ.
ಸ್ಥಳಕ್ಕೆ ಗೋಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಸಿಪಿಐ ವೀರಣ್ಣ ದೊಡ್ಮನಿ ತಿಳಿಸಿದ್ದಾರೆ.