ಪ್ರಮುಖ ಸುದ್ದಿ
ದಾರಿ ಕಾಣದೆ ಹೊಂಡಕ್ಕೆ ಬಿದ್ದು ಮೂವರು ಸಾವು!
ಹೊಂಡದಲ್ಲಿ ಮುಳಗಿ ಮೂವರು ಕೃಷಿಕರು ಸಾವು!
ಬೀದರ: ಅವರೆಲ್ಲಾ ಎಂದಿನಂತೆ ಕೃಷಿ ಕಾಯಕ ಮುಗಿಸಿ ಗ್ರಾಮಕ್ಕೆ ಹಿಂದಿರುಗುತ್ತಿದ್ದರು. ಭಾರೀ ಮಳೆಯಿಂದಾಗಿ ಅವಸರದಲ್ಲಿ ಮನೆ ಸೇರಿಕೊಳ್ಳುವ ತವಕದಲ್ಲಿದ್ದ ಅವರು ದೊಡ್ಡ ಹೆಜ್ಜೆಗಳನ್ನಿಡುತ್ತ ಸಾಗುತ್ತಿದ್ದರು. ಆದರೆ, ಜಲಾವೃತಗೊಂಡ ಕಾಲುದಾರಿಯಲ್ಲಿ ರಸ್ತೆ ಯಾವುದು, ಹೊಂಡ ಯಾವುದು ಎಂಬುದು ಕಾಣದಂತಾಗಿದ್ದು, ನೀರಿನ ಹೊಂಡಕ್ಕೆ ಮೂರು ಜನ ಬಿದ್ದಿದ್ದಾರೆ. ಪರಿಣಾಮ ಮೂರು ಜನ ಹೊಂಡದಲ್ಲಿ ಮುಳುಗಿ ಸಾವಿಗೀಡಾದ ಘಟನೆ ಬಸವಕಲ್ಯಾಣ ತಾಲೂಕಿನ ಲಾಡವಂತಿ ಗ್ರಾಮದ ಬಳಿ ನಡೆದಿದೆ
ನಿನ್ನೆ ಸಂಜೆ ವೇಳೆ ಹೊಲದಿಂದ ಮನೆಗೆ ಹಿಂದಿರುಗುವ ವೇಳೆ ದುರ್ಘಟನೆ ನಡೆದಿದೆ. ಲಾಡವಂತಿ ಗ್ರಾಮದ ಬಾಬುರಾವ್ (40), ಪತ್ನಿ ಸತ್ಯವತಿ(35) ಮತ್ತು ಲಕ್ಷ್ಮೀ (50) ಮೃತ ದುರ್ದೈವಿಗಳು ಎಂದು ತಿಳಿದು ಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಶವಗಳನ್ನು ಹೊರತೆಗೆದಿದೆ. ಈ ಬಗ್ಗೆ ಮಂಠಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.