ಪ್ರಮುಖ ಸುದ್ದಿ
ಸಂಶೋಧಕ ಎಂ.ಎಂ.ಕಲಬುರಗಿ ಹಂತಕರು ಅರೆಸ್ಟ್ ಆಗೋದ್ಯಾವಾಗ ಸ್ವಾಮಿ?
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಸಫಲರಾಗಿದ್ದಾರೆ. ಅನುಚೇತ್ ನೇತೃತ್ವದ ಎಸ್ ಐಟಿ ಟೀಮ್ ಶ್ರಮವಹಿಸಿ ಕಾರ್ಯ ನಿರ್ವಹಿಸಿದೆ. ಇದೇ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸಂಶೋಧಕ ಎಂ.ಎಂ. ಕಲಬುರ್ಗಿ ಅವರ ಪತ್ನಿ ಉಮಾದೇವಿ ಅವರು ಎಂ.ಎಂ.ಕಲಬುರಗಿ ಅವರ ಹತ್ಯೆ ಮಾಡಿದ ಹಂತಕರನ್ನು ಪೊಲೀಸರು ಪತ್ತೆ ಹಚ್ಚಿ ಶಿಕ್ಷಿಸಬೇಕು ಎಂದಿದ್ದಾರೆ. ಅಂತೆಯೇ ಈಗಿನ ಸರ್ಕಾರ ಕಲಬುರ್ಗಿ ಹಂತಕರನ್ನು ಪತ್ತೆ ಹಚ್ಚುವ ವಿಶ್ವಾಸ ಇದೆ ಎಂದು ಹೇಳಿದ್ದಾರೆ.
ರಾಜ್ಯದ ಹೊಸ ಸರ್ಕಾರ ತಮ್ಮ ಪತಿಯ ಹಂತಕರನ್ನು ಶೀಘ್ರದಲ್ಲೇ ಪತ್ತೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಗೌರಿ ಲಂಕೇಶ್ ಹಂತಕರು ಪತ್ತೆಯಾಗಿರುವುದು ಸಮಾಧಾನ ತಂದಿದೆ. ಎಂ.ಎಂ.ಕಲಬುರಗಿ ಅವರು ಗೃಹಮಂತ್ರಿಯಾಗಿದ್ದ ಡಾ.ಜಿ. ಪರಮೇಶ್ವರ್ ಅವರೇ ಈಗ ಗೃಹಮಂತ್ರಿಯಾಗಿರುವುದರಿಂದ ತನಿಖೆಯನ್ನು ಚುರುಕುಗೊಳಿಸಿ ಹಂತಕರನ್ನು ಬಂಧಿಸಬೇಕು ಎಂದು ಅವರು ಒತ್ತಾಯಿಸಿದರು.