ಪ್ರಮುಖ ಸುದ್ದಿ
ಅಲ್ಲಿ ನೀರಲ್ಲಿ ತೇಲಿ ಬಂದಿತಂತೆ ಹುಲಿರಾಯನ ಶವ!
ಮೈಸೂರು : ಕಬಿನಿ ಜಲಾಶಯದ ಹಿನ್ನೀರಿನಲ್ಲಿ ಹುಲಿ ಶವವೊಂದು ತೇಲಿಬಂದಿದೆ. ಕಬಿನಿ ಅಚ್ಚುಕಟ್ಟು ಪ್ರದೇಶದಲ್ಲಿನ ಜಮೀನಿನೊಂದರಲ್ಲಿ ಹುಲಿ ಶವ ಪತ್ತೆಯಾಗಿದೆ. ಪರಿಣಾಮ ಹುಲಿ ಶವ ಕಂಡ ರೈತರು ಆತಂಕಕ್ಕೀಡಾಗಿದ್ದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಿನ್ನೀರಿನ ಪ್ರವಾಹದಲ್ಲಿ ಕಾಡು ಪ್ರಾಣಿಯ ಶವ ತೇಲಿ ಬಂದಿರುವುದು ಇದೇ ಮೊದಲು ಎನ್ನಲಾಗಿದೆ.
ಮನುಷ್ಯರನ್ನು ಹತ್ಯೆಗೈದು ನೀರಿಗೆ ಬಿಡುವುದು ಅಥವಾ ಈಜಲು ಹೋಗಿದ್ದವರು ಶವವಾಗಿ ತೇಲುವ ಸುದ್ದಿ ತಿಳಿದ ಜನ ಇಂದು ಹುಲಿಯ ಶವ ಕಂಡು ಕಂಗಾಲಾಗಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ಹುಲಿ ಸಾವಿಗೆ ಕಾರಣವೇನುಂಬುದು ಬಯಲುಗೊಳಿಸಬೇಕೆಂದು ಜನ ಆಗ್ರಹಿಸಿದ್ದಾರೆ. ಆ ಮೂಲಕ ಈ ಭಾಗದ ಜನರ ಆತಂಕ ದೂರಾಗಿಸಬೇಕೆಂಬುದು ರೈತರ ಒತ್ತಾಯವಾಗಿದೆ.