ಪ್ರಮುಖ ಸುದ್ದಿ
ಟಿಪ್ಪರ್ ಹಾಯ್ದು 60 ಕುರಿಗಳ ದಾರುಣ ಸಾವು
ಟಿಪ್ಪರ್ ಹಾಯ್ದು 60 ಕುರಿಗಳ ದಾರುಣ ಸಾವು
ಯಾದಗಿರಿಃ ಅತಿವೇಗದಿಂದ ಹೊರಟಿದ್ದ ಟಿಪ್ಪರ್ ವೊಂದು ಸಾಲುಸಾಲಾಗಿ ಹೊರಟಿದ್ದ ಕುರಿಗಳ ಮೇಲೆ ಹಾಯ್ದ ಪರಿಣಾಮ 60 ಕುರಿಗಳು ದಾರುಣ ಸಾವುಗೀಡಾದ ಘಟನೆ ಸುರಪುರ ತಾಲೂಕಿನ ತಿಂಥಣಿ ಬ್ರಿಜ್ ಮೇಲೆ ಬೆಳಗಿನಜಾವ ನಡೆದಿದೆ.
ಮೃತ ಕುರಿಗಳು ಸುರಪುರ ತಾಲೂಕಿನ ಕಮಲಾಪುರ ಗ್ರಾಮದ ಕುರಿಗಾಯಿಯೋರ್ವನಿಗೆ ಸೇರಿದವು ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆ ಕುರಿತು ಪ್ರಕರಣ ದಾಖಲಾಗಿದೆ.