ಪ್ರಮುಖ ಸುದ್ದಿ
ಟಿಕ್ ಟಾಕ್ ಭೂಪನಿಗೆ ಚಟೀರ್ ಪಟೀರ್ ಏಟು ಬಿತ್ತು?
ಯಾದಗಿರಿ : ಗೆಳತಿಯ ಜತೆ ಟಿಕ್ ಟಾಕ್ ಮಾಡಿ ವೈರಲ್ ಮಾಡಿದ್ದ ಭೂಪನಿಗೆ ಯುವತಿ ಪೋಷಕರು ಥಳಿಸಿದ ಘಟನೆ ಹಳಿಗೇರ ಗ್ರಾಮದಲ್ಲಿ ನಡೆದಿದೆ. ‘ನಿನ್ನ ತೊಡೆಯ ಮೇಲೆ…’ ಎಂಬ ಜಾನಪದ ಹಾಡಿಗೆ ಟಿಕ್ ಟಾಕ್ ಮಾಡಿರುವ 14ಸೆಕೆಂಡಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ ಯುವಕ ಯುವತಿಯ ಪೋಷಕರ ಆಕ್ರೋಶಕ್ಕೆ ಗುರಿಯಾಗಿದ್ದಾನೆ. ಗ್ರಾಮದ ಆಂಜನೇಯ ದೇಗುಲದ ಬಳಿ ಯುವಕನಿಗೆ ಥಳಿಸಿ ಬುದ್ಧಿವಾದ ಹೇಳಲಾಗಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಯಾದಗಿರಿ ಪೊಲೀಸರು ವಿಚಾರಣೆ ನಡೆಸಿದ ಬಳಿಕವಷ್ಟೇ ಟಿಕ್ ಟಾಕ್ ಸತ್ಯಾಂಶ ಬಯಲಾಗಬೇಕಿದೆ.