ಹೆಸರುಬೇಡ ಅಂದಿದ್ದ ಕೇಂದ್ರ ಸಚಿವ ಇಂದು ಟಿಪ್ಪು ಜಯಂತಿಯಲ್ಲಿ ಪಾಲ್ಗೊಳ್ಳುತ್ತೇನೆ ಅಂದಿದ್ದೇಕೆ ಗೊತ್ತಾ?
ಸಿಎಂಗೆ ತಾಕತ್ತು ಇದ್ದರೆ ಟಿಪ್ಪು ಕಾರ್ಯಕ್ರಮದಲ್ಲಿ ನನ್ನ ಹೆಸರು ಹಾಕಲಿ- ಸವಾಲೆಸೆದ ಅನಂತ್
ಕಳೆದ ಬಾರಿಯೂ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ನನ್ನ ಹೆಸರು ಹಾಕದಂತೆ ನಾನು ಹೇಳಿದ್ದೇನು. ಆದರೆ, ಸಂಸದ ಎಂಬ ಕಾರಣಕ್ಕೆ ಶಿಷ್ಟಾಚಾರಕ್ಕಾಗಿ ನನ್ನ ಹೆಸರು ಹಾಕಿದ್ದರು. ಆದರೆ, ಈಸಲ ಮುಂಚಿತವಾಗಿಯೇ ನಾನು ನನ್ನ ಹೆಸರು ಟಿಪ್ಪು ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಹಾಕುವ ಅಗತ್ಯವಿಲ್ಲ ಎಂದು ಸರ್ಕಾರಕ್ಕೆ ತಿಳಿಸಿದ್ದೇನೆ. ಆದಾಗ್ಯೂ ಒಂದೊಮ್ಮೆ ನನ್ನ ಹೆಸರನ್ನು ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ಹಾಕಿದರೆ ನಾನು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತೇನೆ ಎಂದು ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದಲ್ಲಿ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ್ ಹೆಗಡೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಆದರೆ, ಸಿಎಂ ಸಿದ್ಧರಾಮಯ್ಯ ಅವರೇ ಇರುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅದೇ ವೇದಿಕೆಯಲ್ಲಿ ಟಿಪ್ಪುವಿನ ನಿಜವಾದ ಇತಿಹಾಸ ಎಳೆಎಳೆಯಾಗಿ ಬಿಚ್ಚಿಟ್ಟು ಧಿಕ್ಕಾರ ಹೇಳಿ ಬರುತ್ತೇನೆ. ಆಮಂತ್ರಣ ಪತ್ರಿಕೆಯಲ್ಲಿ ಜನಪ್ರತಿನಿಧಿಯ ಹೆಸರು ಹಾಕುವುದು ಶಿಷ್ಟಾಚಾರ. ವಿರೋಧಿಸುವುದು ಸರಿಯಲ್ಲ ಎಂದೆಲ್ಲಾ ಮಾತನಾಡುತ್ತಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ತಾಕತ್ತು ಇದ್ದರೆ ಎದುರಿಸಲಿ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಕಿಡಿಕಾರಿದ್ದಾರೆ.