ತೊಗರಿ ಖರೀದಿ ಕೇಂದ್ರ ಪುನಾರಂಭಕ್ಕೆ ಆಗ್ರಹಿಸಿ ಪ್ರತಿಭಟನೆ
ಜೇವರ್ಗಿಯ ಕೆಲ್ಲೂರಲ್ಲಿ ರೈತರಿಂದ ಮಿಂಚಿನ ರಸ್ತೆ ತಡೆ
ಕಲಬುರ್ಗಿಃ ತೊಗರಿ ಖರೀದಿ ಕೇಂದ್ರ ಪುನಾರಂಭ ಮತ್ತು ರೈತರ ಸಂಪೂರ್ಣ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿ ಜಿಲ್ಲೆಯ ಜೇವರ್ಗಿ ತಾಲೂಕಿನ ಕೆಲ್ಲೂರ ಗ್ರಾಮದ ಬಳಿ ಸಾಮೂಹಿಕ ಸಂಘಟನೆಗಳ ಒಕ್ಕೂಟದಿಂದ ರೈತರು ಎತ್ತಿನ ಬಂಡಿ, ಎತ್ತುಗಳ ಸಮೇತ ಹೆದ್ದಾರಿ ತಡೆದು ಬುಧವಾರ ಮದ್ಯಾಹ್ನ ಪ್ರತಿಭಟನೆ ನಡೆಸಿದರು.
ತಾಲೂಕು ಸೇರಿದಂತೆ ಇತರಡೆ ತೊಗರಿ ಖರೀದಿ ಕೇಂದ್ರಗಳನ್ನು ಸರ್ಕಾರ ಸ್ಥಗಿತಗೊಳಿಸಿದ್ದರು, ಸಾವಿರಾರು ರೈತರ ತೊಗರಿ ಕೊಳೆಯುವಂತೆ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ವರ್ಷಕ್ಕೆ ಹೋಲಿಸಿದ್ದಲ್ಲಿ ಈ ಭಾಗದಲ್ಲಿ ಶೇ.50 ರಷ್ಟು ತೊಗರೆ ಬೆಳೆ ಬೆಳೆಯವುದನ್ನು ರೈತರು ಕಡಿಮೆ ಮಾಡಿದ್ದಾರೆ. ಕಾರಣ ಸೂಕ್ತ ಬೆಲೆ ಸಿಗದ ಕಾರಣ, ರೈತರು ಉತ್ಪಾದನೆಗೆ ಅತಿ ಹೆಚ್ಚು ಹಣ ಖರ್ಚು ಮಾಡಿ ಸಮರ್ಪಕ ಬೆಲೆ ದೊರೆಯದ ಕಾರಣ ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಹೀಗಾಗಿ ತೊಗರಿ ಬೆಳೆ ಬೆಳೆಯವುದು ಮೂಂಬರುವ ದಿನಗಳಲ್ಲಿ ಇನ್ನಷ್ಟು ಕಠಿಣವಾಗಲಿದೆ. ಹತ್ತಿ ಬೆಲೆಗೂ ಸಮರ್ಪಕ ಬೆಲೆ ಇಲ್ಲ. ಹೀಗಾಗಿ ರೈತರು ನಿತ್ಯ ಒಂದಿಲ್ಲೊಂದು ನಷ್ಟ ಎದುರಿಸುವಂತಾಗಿದೆ. ಕೂಡಲೇ ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರ ಸಂಪೂರ್ಣ ಸಾಲ ಮಾಡಬೇಕೆಂದು ಆಗ್ರಹಿಸಿದರು.
ತೊಗರಿ ಖರೀದಿ ಕೇಂದ್ರದಲ್ಲಿ ನೋಂದಾವಣೆ ಮಾಡಿದ ಸಾವಿರಾರು ರೈತರಿಗೆ ಕೇಂದ್ರ ಸ್ಥಗಿತಗೊಳಿಸದ ಪರಿಣಾಮ ಅನ್ಯಾಯವಾಗಿದೆ. ಸರ್ಕಾರ ಕೂಡಲೇ ರೈತಪರ ಕಾಲಜಿ ಇದ್ದಲ್ಲಿ ನೋಂದಾವಣಿ ಮಾಡಿದ ರೈತರಿಗೆ ಕೂಡಲೆ ಬೆಂಬಲ ಬೆಲೆ ನೀಡಬೇಕು. ಮತ್ತು ತೊಗರಿ ಖರೀದಿ ಕೇಂದ್ರ ನಿರಂತರ ಚಾಲನೆಯಲ್ಲಿಡಬೇಕೆಂದು ಒತ್ತಾಯಿಸಿದರು.
ನಂತರ ಸ್ಥಳಕ್ಕೆ ಆಗಮಿಸಿದ ಜೇವರ್ಗಿ ತಹಸೀಲ್ದಾರರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಶ್ರೀರಾಮ ಸೇನೆಯ ಸಚಿನ್ ಮದರಿ, ಅಲ್ಪಸಂಖ್ಯಾತ ಹೋರಾಟ ಸಮಿತಿಯ ಲಾಳೇಸಾಬ ಉಸ್ತಾದ, ರೈತ ಸಂಘದ ಸುಭಾಷ ಹೊಸಮನಿ, ವೆಂಕೋಬರಾವ್ ವಾಗಣಗೇರಿ, ಪ್ರಕಾಶ ನಾಯಕ, ನಾಗಣ್ಣ ಟಣಕೆದಾರ, ಪರುಶುರಾಮ ಯಾಳವಾರ, ಚಂದ್ರಶೇಖರ ಕಡಕಲ್ ಮತ್ತು ಶಿವು ಪಾಟೀಲ್ ಕೆಲ್ಲೂರ ಸೇರಿದಂತೆ ಇತರರು ಭಾಗವಹಿಸಿದ್ದರು. ರಸ್ತೆ ತಡೆಯಿಂದ ಕೆಲಹೊತ್ತು ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು.