ಪ್ರಮುಖ ಸುದ್ದಿ

ಪ್ರೀತಿ ತಂದ ಆಪತ್ತುಃ ತಾಯಿ, ಮಗನ ನಿಗೂಢ ಸಾವು, ಅಂತ್ಯ ಕಂಡ ಮೌನ ಈಶನ ದುರಂತ ಬದುಕು.!

ಯುವತಿಯ ಪ್ರೀತಿಗೆ ಬಸ್ ಕಂಡಕ್ಟರ್ ಬಲಿ..? ಚಟ್ನಳ್ಳಿ ಗ್ರಾಮದಲ್ಲಿ ಮಡುಗಟ್ಟಿದ ದುಖಃ

ಯಾದಗಿರಿಃ ಜಿಲ್ಲೆಯ ಶಹಾಪುರ ತಾಲೂಕಿನ ಚಟ್ನಳ್ಳಿ ಗ್ರಾಮ ನಿವಾಸಿ, ನಗರದಲ್ಲಿ ಬಸ್ ಕಂಡಕ್ಟರ್ ಆಗಿ ಕರ್ತವ್ಯ ನಿಭಾಯಿಸುತ್ತಿದ್ದ ಮೌನೇಶ ಬಡಿಗೇರ(36) ಮತ್ತು ಆತನ ತಾಯಿ ಸುಂದರಮ್ಮ ಗಂಡ ಕಾಳಪ್ಪ ಬಡಿಗೇರ (55)  ಇಬ್ಬರು ಬೆಂಗಳೂರಿನ ಒಂದು ಅಪಾರ್ಟ್‍ಮೆಂಟ್ ಮೇಲಿಂದ ಬಿದ್ದು ಸಾವನ್ನಪ್ಪಿರುವ ಘಟನೆ ಮಂಗಳವಾರ ನಡೆದಿರುವ ವರದಿಯಾಗಿದೆ.

ಆದರೆ ಇಬ್ಬರು ಸಾವು ನಿಗೂಢವಾಗಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ. ಯುವಕ ಮೌನೇಶ ಬಡಿಗೇರ ತಾಲೂಕಿನ ಚಟ್ನಳ್ಳಿ ಗ್ರಾಮ ನಿವಾಸಿ, ಆದರೆ ಕಳೆದ ಹಲವು ವರ್ಷಗಳಿಂದ ಶಹಾಪುರ ನಗರದ ಪಾಲಕಮ್ಮ ದೇವಸ್ಥಾನದ ಬಳಿ ಬಾಡಿಗೆ ಮನೆಯೊಂದರಲ್ಲಿ ತಾಯಿಯೊಂದಿಗೆ ವಾಸವಿದ್ದ ಎನ್ನಲಾಗಿದೆ.
ಆತ ಕಳೆದ ವಾರದ ಹಿಂದೆ ಅಷ್ಟೆ, ಮೇಲಧಿಕಾರಿಗಳಿಂದ ಏಳು ದಿನಗಳ ರಜೆ ಪಡೆದು ಬೆಂಗಳೂರಿಗೆ ತೆರಳಿದ್ದ ಎನ್ನಲಾಗಿದ್ದು, ಆಗ ಈ ದುರ್ಘನೆ ನಡೆದಿದೆ. ಘಟನೆ ಏಕೆ ನಡೆಯಿತು ಹೇಗೆ ನಡೆಯಿತು ಕಾರಣವೇನು ಎಂಬುದು ಸ್ಪಷ್ಟನೆ ಇಲ್ಲ.

ಆತ ಈ ಹಿಂದೆ ಬೆಂಗಳೂರಿನ ಬಿಎಂಟಿಸಿ ಬಸ್ ಕಂಡಕ್ಟರ್ ಆಗಿಯೂ ಕೆಲಸ ಮಾಡಿದ್ದಾನೆ. ಆ ವೇಳೆ ಪರಿಚಿತಳಾಗಿದ್ದ ಓರ್ವ ಯುವತಿಯನ್ನು ಆತ ಮತ್ತು ಆಕೆ ಪರಸ್ಪರ ಪ್ರೀತಿಸುತ್ತಿದ್ದರೂ ಎನ್ನಲಾಗಿದೆ. ಇತ್ತ ಈ ಮೊದಲೇ ಮದುವೆ ಮಾಡಿಕೊಂಡಿದ್ದ ಮೌನೇಶ ಒಂದು ಮಗು ಕೂಡ ಹೊಂದಿದ್ದ. ಆದಾಗ್ಯು ಬೆಂಗಳೂರಿನ ಯುವತಿ ಜತೆ ಪ್ರೀತಿ ಮುಂದುವರೆದಿತ್ತು ಎಂದು ತಿಳಿದು ಬಂದಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಹೆಂಡತಿ ಜೊತೆ ಜಗಳವು ನಡೆದಿತ್ತು.
ಆಗ ಚಟ್ನಳ್ಳಿ ಗ್ರಾಮ ಬಿಟ್ಟು ಶಹಾಪುರ ನಗರದಲ್ಲಿ  ತನ್ನ ತಾಯಿ ಸುಂದರಮ್ಮಳ ಜತೆಗೆ  ವಾಸವಿದ್ದ, ಬೆಂಗಳೂರಿನ ಯುವತಿ ಆಗಾಗ ಈತನ ಬಳಿ ಬಂದು ಹೋಗುತ್ತಿದ್ದಳು ಎಂಬ ಮಾಹಿತಿ ಕೇಳಿ ಬರುತ್ತಿದೆ.

ಒಂದು ದಿನ ಯುವತಿಯ ಸಂಬಂಧಿಕರಿಗೆ ವಿಷಯ ತಿಳಿದು ಬೆಂಗಳೂರಿನಿಂದ ಹಲವು ಜನರು ಶಹಾಪುರ ನಗರಕ್ಕೆ ಬಂದು ನಗರದಲ್ಲಿದ್ದ ಮೌನೇಶನ ಜತೆ ಗಲಾಟೆ ಶುರು ಮಾಡಿ ಹೊಡೆದು ವಾರ್ನಿಂಗ್ ಮಾಡಿ ಹೋಗಿದ್ದರು ಎಂಬ ಸುದ್ದಿಯೂ ಇದೆ.

ಇಲ್ಲಿನ ಬಸ್ ಡಿಪೋದಲ್ಲಿ ಹಲವರಿಗೆ ಈ ಕುರಿತು ಮಾಹಿತಿ ಇದೆ. ಈ ಮೊದಲೊಮ್ಮೆ ಯುವತಿಯ ಪ್ರೀತಿಗೆ ಸಂಬಂಧಿಸಿದಂತೆ ಮನೆಯಲ್ಲಿ ನಡೆದ ಗಲಾಟೆಗೆ, ಶಹಾಪುರ ಗುಡ್ಡದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ ಘಟನೆಯು ಜರುಗಿದೆಯಂತೆ. ಆಗ ಸಹದ್ಯೋಗಿಗಳು ಇದನ್ನು ತಡೆದಿದ್ದಾರೆ ಎನ್ನಲಾಗಿದೆ.
ಆತನ ಸ್ನೇಹಿತರು ಹೇಳಿದ ಪ್ರಕಾರ ಆತ ಸಂಭಾವಿತ ಮನುಷ್ಯ ಆದರೆ, ಯುವತಿ ಪ್ರೀತಿಯೇ ಆತನಿಕೆ ಕಂಟಕವಾಗಿದೆ. ಆಗಾಗ ಯುವತಿ ಕಡೆಯಿಂದ ಬೆದರಿಕೆ ಬರುತ್ತಿದೆ ಎಂದು ಇತ್ತೀಚೆಗೆ ಸ್ನೇಹಿತರ ಮುಂದೆ ದುಖಃ ತೋಡಿಕೊಂಡಿದ್ದ ಎನ್ನಲಾಗಿದೆ.

ಹೆಸರು ಹೇಳಲು ಇಚ್ಚಿಸದ ಆತನ ಸ್ನೇಹಿತರು ಮೌನೇಶ ಸಭ್ಯಸ್ಥ, ಸಂಭಾವಿತ ಕೆಟ್ಟ ಮನುಷ್ಯನಂತು ಅಲ್ಲ. ಆದರೆ ಯುವತಿಯ ಮೋಹಕ್ಕೆ ಬಿದ್ದಿದ್ದ, ಅದರಿಂದ ತನ್ನ ಬದುಕೆ ಹಾಳುಗೆಡವಿಕೊಂಡ ಎಂದು ಕನಿಕರ ಪಡುವ ಆತನ ಸ್ನೇಹಿತರು ಹೆಸರು ಹಾಕಬೇಡಿ ಎಂದು ನಾಜೂಕಾಗಿ ಎಲ್ಲಾ  ಮಾಹಿತಿ ನೀಡಿ, ಹಲವು ಸಂಗತಿಗಳನ್ನು ನೆನಪಿಸಿಕೊಂಡರು.

ಯುವತಿಯ ಪ್ರೀತಿ ಚಕ್ಕರ್ ದಲ್ಲಿ ಹೆಂಡತಿಯಿಂದಲೂ ದೂರಾದ ಮೌನೇಶ, ಯುವತಿ ಕಡೆಯವರಿಂದ ಟಾರ್ಚರ್ಗೂ ಬೇಸತ್ತಿದ್ದ. ಇಷ್ಟಾದ ಮೇಲೆ ರಜೆ ಹಾಕಿ ತಾಯಿಯೊಂದಿಗೆ  ಬೆಂಗಳೂರಿಗೆ ಯಾವ ಕಾರಣಕ್ಕೆ ತೆರಳಿದ್ದ, ಅಥವಾ ಮೌನೇಶ ಮತ್ತು ತಾಯಿ ಸುಂದರಮ್ಮಳನ್ನು ಯುವತಿ ಕಡೆಯವರು ಪುಸಲಾಯಿಸಿ, ಅಥವಾ ಬೆದರಿಸಿ ಕರೆದುಕೊಂಡು ಹೋಗಿದ್ದರೋ ಗೊತ್ತುಲ್ಲ.? ಹಾಗೂ ತನ್ನ ತಾಯಿಯೊಂದಿಗೆ ಅಪಾರ್ಟಮೆಂಟನಲ್ಲಿ ಏಕೆ ಇದ್ದ.?  ಆ ಅಪಾರ್ಟಮೆಂಟ್ನಲ್ಲಿ ಮನೆ ಬಾಡಿಗೆ ಪಡೆದಿದ್ದನೇ.? ಅದರ ಮೇಲಿಂದ ಹೇಗೆ ಬೀಳಲು ಸಾಧ್ಯ.. ಯಾವ ಕಾರಣಕ್ಕೆ ಬಿದ್ದು ಸಾವನ್ನಪ್ಪಿದ್ದರು.? ಪ್ರೀತಿಸಿದ ಯುವತಿ ಕಡೆಯಿಂದ ತೊಂದರೆ ಕೊಟ್ಟವರಾರು.? ಆತ್ಮಹತ್ಯೆಯೋ ಅಥವಾ ಕೊಲೆಯೋ ಇದಕ್ಕೆಲ್ಲ ಕಾರಣವೇನು.? ಎಲ್ಲವೂ ನಿಗೂಢವಾಗಿದೆ. ಘಟನೆ ಕುರಿತು ಪೊಲೀಸರ ತನಿಖೆಯಿಂದಲೇ ಸತ್ಯಾಸತ್ಯತೆ ಹೊರಬರಬೇಕಿದೆ. ಈ ಘಟನೆಯಿಂದ ಚಟ್ನಳ್ಳಿ ಗ್ರಾಮಸ್ಥರು ವಿಚಲಿತಗೊಂಡಿದ್ದು, ಮೃತ ದೇಹದ ಹಾದಿ ಕಾಯುತ್ತಿದ್ದಾರೆ. ಗ್ರಾಮ, ಅವರ ಸಂಬಂಧಿಕರಲ್ಲಿ ದುಖಃ ಮಡುಗಟ್ಟಿದೆ.

Related Articles

Leave a Reply

Your email address will not be published. Required fields are marked *

Back to top button