ಕೊಲೆಸ್ಟ್ರಾಲ್ ಹೆಚ್ಚಾಗುವುದನ್ನು ತಡೆಗಟ್ಟಲು ಈ ಆಹಾರಗಳು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಕಾರಿ

ಕೊಲೆಸ್ಟ್ರಾಲ್ 35 ವರ್ಷದ ದಾಟಿದ ಬಹುತೇಕರನ್ನು ಕಾಡುತ್ತಿರುವ ಸಮಸ್ಯೆಯಾಗಿದೆ, ಈ ಸಮಸ್ಯೆಗೆ ಪ್ರಮುಖ ಕಾರಣ ಜೀವನಸೈಲಿ, ಆಹಾರ ಶೈಲಿ. ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗದಂತೆ ಜಾಗ್ರತೆವಹಿಸಬೇಕು, ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗುವುದನ್ನು ತಡೆಗಟ್ಟಲು ಈ ಆಹಾರಗಳು ಸಹಕಾರಿಯಾಗಿದೆ.
ಪಾಲಾಕ್ : ಪಾಲಾಕ್‌ನಲ್ಲಿ ಲುಟಿನ್, ಕಾರೋಟೆನೊಯ್ಡ್ ಅಂಶ ಅಧಿಕವಿರುವುದರಿಂದ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಕಾರಿ. ಇದನ್ನು ಪ್ರತಿದಿನ ಬಳಸುವುದು ಒಳ್ಳೆಯದು.
ಬ್ರೊಕೋಲಿ: ಬ್ರೊಕೋಲಿಯಲ್ಲಿ ಆ್ಯಂಟಿಆಕ್ಸಿಡೆಂಟ್ ಅಧಿಕವಿರುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ. ಇದನ್ನು ಬೇಯಿಸಿ ತಿನ್ನಿ. ಕೊಲೆಸ್ಟ್ರಾಲ್ ಸಮಸ್ಯೆ ಇರುವವರು ಸ್ವಲ್ಪ ಬ್ರೊಕೋಲಿ ಬೇಯಿಸಿ ಪ್ರತಿದಿನ ತಿನ್ನುವುದು ಒಳ್ಳೆಯದು. ಇದನ್ನು ಚಿಟಿಕೆಯಷ್ಟು ಉಪ್ಪು ಹಾಕಿ ಬೇಯಿಸಿ ತಿನ್ನಬಹುದು. ಒಂದು ಚಮಚ ಎಣ್ಣೆಯನ್ನು ಪಾತ್ರೆಗೆ ಹಾಕಿ ಬಿಸಿ ಮಾಡಿ, ಸ್ವಲ್ಪ ಕತ್ತರಿಸಿದ ಈರುಳ್ಳಿ ಹಾಕಿ ನಂತರ ಬ್ರೊಕೋಲಿ ಹಾಕಿ ನೀರು, ಸ್ವಲ್ಪ ಉಪ್ಪು ಹಾಕಿ ಬೇಯಿಸಿ ತಿಂದರೆ ತುಂಬಾನೇ ರುಚಿಯಾಗಿರುತ್ತದೆ. ಉಪ್ಪು ಸ್ವಲ್ಪವೇ ಸ್ವಲ್ಪ ಹಾಕಬೇಕು, ಇಲ್ಲದಿದ್ದರೆ ಉಪ್ಪುಪ್ಪು ಹೆಚ್ಚಾಗುವುದು.
ಕ್ಯಾರೆಟ್: ಇದರಲ್ಲಿ ನಾರಿನಂಶ ,ಪೆಕ್ಟಿನ್ ಇರುವುದರಿಂದ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಕಾರಿ. ಇದನ್ನು ನೀವು ಬೇಕಿದ್ದರೆ ಹಸಿ ತಿನ್ನಬಹುದು, ಇಲ್ಲದಿದ್ದರೆ, ಸೂಪ್, ಅಡುಗೆಯಲ್ಲಿ ಬಳಸಬಹುದು.
ಸಿಹಿ ಗೆಣಸು: ಸಿಹಿ ಗೆಣಸು ಎಲ್ಲಾ ರೀತಿಯಲ್ಲೂ ಅತ್ಯುತ್ತಮವಾದ ಆಹಾರ, ಇದರಲ್ಲಿ ಆ್ಯಂಟಿಆಕ್ಸಿಡೆಂಟ್ ಅಧಿಕವಿದೆ, ಇದರಲ್ಲಿರುವ ಮೆಟಾದಂಥ ಆ್ಯಂಟಿಆಕ್ಸಿಡೆಂಟ್ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮಧುಮೇಹಿಗಳು ಇದನ್ನು ಧೈರ್ಯವಾಗಿ ಇದನ್ನು ಸೇವಿಸಬಹುದು.
ಕ್ಯಾಬೇಜ್: ಕ್ಯಾಬೇಜ್‌ನಲ್ಲಿ ನೀರಿನಂಶ ಅತ್ಯಧಿಕವಿರಲಿದೆ, ಇದರ ಸೇವನೆಯಿಂದ ಉರಿಯೂತದಂಥ ಸಮಸ್ಯೆ ಕಡಿಮೆಯಾಗುವುದು, ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುವುದು.
ಹಾಗಲಕಾಯಿ: ಹಾಗಾಲಕಾಯಿ ರಕ್ತವನ್ನು ಶುದ್ಧೀಕರಿಸಲು ಸಹಕಾರಿ ದಿನಾ ಹಾಗಲಕಾಯಿ ಜ್ಯೂಸ್ ಮಾಡಿ ಕುಡಿಯುವುದರಿಂದ ಮಧುಮೇಹ ನಿಯಂತ್ರಣದಲ್ಲಿಡಲು ಸಹಕಾರಿ, ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ, ಆರೋಗ್ಯಕರ ಕೊಲೆಸ್ಟ್ರಾಲ್ ಹೆಚ್ಚಿಸುತ್ತದೆ.
ಕರಿಬೇವು: ದಿನಾ ಸ್ವಲ್ಪ ಕರಿಬೇವು ತಿನ್ನುವುದರಿಂದ ತೂಕ ನಿಯಂತ್ರಣಕ್ಕೆ ಸಹಕಾರಿ, ಮೈ ಬೊಜ್ಜು ಕರಗಿಸುತ್ತದೆ, ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಕಾರಿ.