Homeಅಂಕಣಪ್ರಮುಖ ಸುದ್ದಿಮಹಿಳಾ ವಾಣಿವಿನಯ ವಿಶೇಷ

ಮನೆ ಮದ್ದುಗಳಲ್ಲಿ ಬಳಸುವ ಅರಶಿನದಿಂದ ಏನೆಲ್ಲ ಪ್ರಯೋಜನವಿದೆ ಗೊತ್ತಾ?

ಬಹಳಷ್ಟು ಮನೆ ಮದ್ದುಗಳಲ್ಲಿ ಅರಿಶಿನ ಬಳಕೆಯಾಗುವುದರಿಂದ ಗಿಡದ ಬುಡದಿಂದ ಅಗೆದು ಗೆಡ್ಡೆಗಳನ್ನು  ಚೆನ್ನಾಗಿ ತಂದು ಉಪಯೋಗಿಸುವುದು ಸಾಮಾನ್ಯವಾಗಿ ಕಂಡು ಬರುತ್ತದೆ. ದೇಹದ ಆರೋಗ್ಯ ಮತ್ತು ಚರ್ಮದ ರಕ್ಷಣೆ ಹಾಗೂ ಸೌಂದರ್ಯ ಕಾಪಾಡುವುದರಲ್ಲಿ ಇದರ ಮುಂದೆ ಎಲ್ಲ ಸೌಂದರ್ಯ ವರ್ಧಕಗಳು ಗೌಣ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ.. ಮೊದಲಿನಿಂದಲೂ ಸೌಂದರ್ಯ ವರ್ಧಕವಾಗಿ ಮನೆಯ ಸುತ್ತ ಸಿಗುತ್ತಿದ್ದ ಗಿಡಮೂಲಿಕೆಗಳನ್ನೇ ಮಹಿಳೆಯರು ಬಳಸುತ್ತಾ ಬಂದಿದ್ದಾರೆ.

ಹೆಚ್ಚಿನವರು ಅರಿಶಿನವನ್ನು ಬಳಕೆ ಮಾಡುತ್ತಾ ಬಂದಿದ್ದಾರೆ. ಅಡುಗೆಯಲ್ಲಿ, ಶುಭಸಮಾರಂಭ, ಔಷಧಿ ಹೀಗೆ ಹಲವು ರೀತಿಯಲ್ಲಿ ಇದು ಬಳಕೆಯಾಗುತ್ತಾ ಬಂದಿದೆ. ಅರಿಶಿನವನ್ನು ಉಪಯೋಗಿಸುವುದರ ಮೂಲಕ ಯಾವ ರೀತಿಯ ಉಪಯೋಗ ಪಡೆಯಬಹುದು ಮತ್ತು ಅದು ಸೌಂದರ್ಯ ವರ್ಧಕವಾಗಿ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಆಯುರ್ವೇದದಲ್ಲಿ ಈ ಹಿಂದೆಯೇ ವಿವರಿಸಲಾಗಿದೆ. ಅದರಂತೆ ಅರಿಶಿನವನ್ನು ವಾರಕ್ಕೆ ನಾಲ್ಕು ಬಾರಿ ಮುಖಕ್ಕೆ ಹಚ್ಚಿದರೆ ಮುಖದ ಕಲೆಗಳನ್ನು ಮಾಯವಾಗುತ್ತವೆ. ಅರಿಶಿನದ ತುಂಡನ್ನು ಹಾಲಿನ ಕೆನೆಯಲ್ಲಿ ತೇಯ್ದು ಮುಖಕ್ಕೆ ಪ್ಯಾಕ್ ಹಾಕಿದ್ದರೆ ಮುಖದಲ್ಲಿನ ಮೊಡವೆ ಕಜ್ಜಿಗಳು ಗುಣವಾಗಿ  ಮುಖ ಕಾಂತಿಯುವಾಗುತ್ತದೆ.

ಸೂಕ್ಷ್ಮ ಚರ್ಮದವರು ಹಾಲು ಅಥವಾ ಜೇನಿನೊಂದಿಗೆ ಕಸ್ತೂರಿ ಅರಿಶಿನ ಬೆರೆಸಿ ಉಪಯೋಗಿಸಬಹುದು. ಎಣ್ಣೆ ಚರ್ಮದವರು ಪನ್ನಿರೀನೊಂದಿಗೆ ಅಥವಾ ಗುಲಾಬಿ ಎಸಳಿನೊಂದಿಗೆ  ಅರೆದು ಉಪಯೋಗಿಸಬಹುದು. ಗರ್ಭಿಣಿ ಮಹಿಳೆಯರಿಗೆ ಹೊಟ್ಟೆಯ  ಮೇಲೆ  ಗುರುತುಗಳು, ಕಲೆಗಳು ಮೂಡುವುದು ಸಾಮಾನ್ಯ. ಆಗ ಹಾಲಿನೊಂದಿಗೆ ಅರಿಶಿನ ಅರೆದು ಹೊಟ್ಟೆಗೆ ಹಚ್ಚಿ ಸ್ನಾನದ ಮೊದಲು ತೆಂಗಿನ  ಎಣ್ಣೆಯನ್ನು ಹಚ್ಚುತ್ತಿದ್ದರೆ ಈ ಗುರುತುಗಳು ಮಾಯವಾಗುತ್ತವೆ. ಅರಿಶಿಣವನ್ನು ಮುಖ ಕೈ ಕತ್ತು ಮುಂತಾದ ಕಡೆ ಹಚ್ಚುತ್ತಾ ಬಂದರೆ ಅನಗತ್ಯ ಕೂದಲು ಉದುರುತ್ತವೆ.

ಗುಲಾಬಿ ದಳಗಳು ಮತ್ತು ಒಣಗಿಸಿ ಕುಟ್ಟಿ ಪುಡಿ ಮಾಡಿದ  ಅರಿಶಿನವನ್ನು ಅತ್ಯುತ್ತಮವಾದ  ಸ್ನಾನದ ಪುಡಿಯನ್ನಾಗಿ ಬಳಸಬಹುದು. ಸಾಬೂನಿನ ಬದಲಾಗಿ  ಇದನ್ನೇ ಬಳಸಿದರೆ ಅನೇಕ ಬಗೆಯ ಚರ್ಮರೋಗಗಳು ಗುಣವಾಗುತ್ತವೆ. ಜತೆಗೆ ಚರ್ಮದಲ್ಲಿರುವ ನೈಸರ್ಗಿಕ ಎಣ್ಣೆಯನ್ನು ನಾಶ ಮಾಡದೆ ರಕ್ಷಿಸಿ ಚರ್ಮವನ್ನು ಸುಸ್ಥಿತಿಯಲ್ಲಡುತ್ತದೆ. ಸೊಳ್ಳೆ ಮುಂತಾದ ಕೀಟಗಳು  ಕಚ್ಚಿದಾಗ ಉಂಟಾಗುವ ದದ್ದು  ಬಾವುಗಳು ಅರಿಶಿನದ ಲೇಪನದಿಂದ ಕಡಿಮೆಯಾಗುತ್ತವೆ. ಬಂಗು, ಚಿಬ್ಬು, ಇತ್ಯಾದಿ ಕಲೆಗಳ ನಿವಾರಣೆಗೆ ಹಾಲಿನ ಕೆನೆ, ಅಥವಾ ನಿಂಬೆ ರಸದಲ್ಲಿ ಅರಿಶಿನವನ್ನು ತೇಯ್ದು ಲೇಪಿಸಿ ಎರಡು  ಗಂಟೆಗಳ  ಕಾಲ ಬಿಟ್ಟು ಬಿಸಿ ನೀರಿನಿಂದ ಕಡಲೆ ಹಿಟ್ಟು ಬಳಸಿ ತೊಳೆದರೆ ಮಾಯವಾಗುತ್ತದೆ. ಅರಿಶಿವನ್ನು ಮನೆ ಬಳಿ ಒಂದಿಷ್ಟು ಜಾಗವಿದ್ದರೆ ಯಾರೂ ಬೇಕಾದರೂ ಬೆಳೆಸಿಕೊಂಡು ಉಪಯೋಗಿಸಿಕೊಳ್ಳಬಹುದಾಗಿದೆ. Ad

Related Articles

Leave a Reply

Your email address will not be published. Required fields are marked *

Back to top button