ಪ್ರಮುಖ ಸುದ್ದಿ

ರೈಲಿಗೆ ತಲೆಕೊಟ್ಟವಾ ಎರಡು ಕಾಡುಕೋಣ!

ಬೆಳಗಾವಿ: ಜಿಲ್ಲೆಯ ಖಾನಾಪುರ ತಾಲ್ಲೂಕಿನ ಹಾರೂರಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಎರಡು ಕಾಡು ಕೋಣ ಸಾವಿಗೀಡಾಗಿವೆ. ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಅಕ್ಷರಶ: ಶಾಕ್ ಆಗಿದೆ. ಕಾರಣ ರೈಲು ಹಳಿ ಮೇಲೆ ಜೋಡಿ ಕಾಡು ಕೋಣಗಳ ಮೃತ ದೇಹಗಳು ಪತ್ತೆ ಆಗಿವೆ. ಜೀವನದಲ್ಲಿ ಜಿಗುಪ್ಸೆ ಹೊಂದಿದ ಜೋಡಿ ರೈಲಿಗೆ ತಲೆಕೊಟ್ಟ ಘಟನೆಗಳು ನೆನಪಾಗಿ ಒಂದುಕ್ಷಣ ಅಧಿಕಾರಿಗಳು ಬೆಚ್ಚಿಬಿದ್ದಿದ್ದಾರೆ.

ಜೋಡಿ ಕಾಡುಕೋಣಗಳು ರೈಲಿನ ಸದ್ದು ಕೇಳಿ ಗಾಬರಿಯಿಂದ ಓಡಿಹೋದ ಪರಿಣಾಮ ರೈಲಿಗೆ ಸಿಲುಕಿ ಸಾವನ್ನಪ್ಪಿವೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಅಧಿಕಾರಿಗಳು  ಪರಿಶೀಲನೆ ನಡೆಸಿದ್ದಾರೆ. ಬಳಿಕ ಅರಣ್ಯ ಇಲಾಖೆಯ ನಿಯಮದಂತೆ ಕಾಡುಕೋಣಗಳ ಅಂತ್ಯ ಸಂಸ್ಕಾರ ಮಾಡಲಾಗಿದೆ ಎಂದು ತಿಳಿದು ಬಂದಿದೆ.

Related Articles

Leave a Reply

Your email address will not be published. Required fields are marked *

Back to top button