ನಿರುದ್ಯೋಗಿ ಯುವಕರಿಗೆ ಸದಾವಕಾಶಃ ಉಚಿತ ಸಿಸಿಟಿವಿ ಸರ್ವೀಸ್ ತರಬೇತಿ ಶಿಬಿರ
ಗ್ರಾಮೀಣ ಭಾಗದ ನಿರುದ್ಯೋಗಿ ಯುವಕರಿಗೆ ಸದಾವಕಾಶ

13 ದಿನ ಸಿಸಿಟಿವಿ ಸೇರ್ವಿಸ್ ತರಬೇತಿ ಶಿಬಿರ
ಯಾದಗಿರಿ : ಏಪ್ರಿಲ್ 18, (ಕ.ವಾ) : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ ಯಾದಗಿರಿ ವತಿಯಿಂದ 2025-26 ಸಾಲಿನ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ ಯಾದಗಿರಿ ಈ ಸಂಸ್ಥೆಯಲ್ಲಿ 13 ದಿನಗಳವರೆಗೆ ಸಿಸಿಟಿವಿ ಸೇರ್ವಿಸ್ ತರಬೇತಿ (Installation & Servicing of CCTV Camera, Security Alarm & Smoke Detector) ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಭಾರತೀಯ ಸ್ಟೇಟ್ ಬ್ಯಾಂಕ್ ನಿರ್ದೇಶಕರು ನರೇಂದ್ರಕುಮಾರ ಅವರು ತಿಳಿಸಿದ್ದಾರೆ.
ವಿಶೇಷಸೂಚನೆ : ಗ್ರಾಮೀಣ ಭಾಗದವರು ಆಗಿರಬೇಕು, ಬಿಪಿಎಲ್, ಎಎಪಿ, ಪಿಹೆಚ್‌ಹೆಚ್ ರೇಷನ್ ಕಾರ್ಡ್ ಕಡ್ಡಾಯವಾಗಿ ಸಲ್ಲಿಸಬೇಕು, ಊಟ ವಸತಿ ಸಹಿತ ಉಚಿತ ವಾಗಿರುತ್ತದೆ, 18 ರಿಂದ 45 ವರ್ಷ ಒಳಗಿರಬೇಕು, ಸಂಸ್ಥೆಯ ಸಮವಸ್ತç ಮತ್ತು ನೋಟು ಬುಕ್ ಪೆನ್ ಉಚಿತವಾಗಿ ನೀಡಲಾಗುತ್ತದೆ, SBI RSETI ಯಿಂದ ವಸ್ತç ಸಿಸಿಟಿವಿ ಸೇರ್ವಿಸ್ ತರಬೇತಿ (Installation & Servicing of CCTV Camera, Security Alarm & Smoke Detector) ತರಬೇತಿ ಪ್ರಮಾಣ ನೀಡಲಾಗುತ್ತದೆ, ನ್ಯಾಷನಲ್ ಅಕಾಡಮಿ ಕಡೆಯಿಂದ ಕೂಡ ಸಿಸಿಟಿವಿ ಸೇರ್ವಿಸ್ ತರಬೇತಿ (Installation & Servicing of CCTV Camera, Security Alarm & Smoke Detector) ತರಬೇತಿ ಪ್ರಮಾಣ ಪತ್ರ ನೀಡಲಾಗುತ್ತದೆ (ಕೇಂದ್ರ ಸರ್ಕಾರದ ಪ್ರಮಾಣ ಪತ್ರ ನೀಡಲಾಗುತ್ತದೆ), 2025ರ ಏಪ್ರಿಲ್ 28ರ ಒಳಗೆ ಅರ್ಜಿಸಲ್ಲಿಸಬೇಕು, ದಾಖಲಾತಿಗಳು, ಬಿಪಿಎಲ್, ಎಎಪಿ, ಪಿಹೆಚ್‌ಹೆಚ್ ರೇಷನ್ ಕಾರ್ಡ ಆಧಾರ ಕಾರ್ಡ ಅಂಕಪಟ್ಟಿ ಪ್ರಮಾಣ ಪತ್ರ ಲಗತ್ತಿಸಬೇಕು, ಟಿಸಿ ಪ್ರಮಾಣ ಪತ್ರ ಲಗತ್ತಿಸಬೇಕು, ಪಾಸ್ಫೋಟೋ ಸೈಜ್ 4, ಮೊದಲು ಬಂದ 35 ಅರ್ಜಿಗಳು ಮಾತ್ರ ತರಬೇತಿಗೆ ತೆಗೆದುಕೊಳ್ಳಲಾಗುವುದು, 2025ರ ಮೇ 2 ರಂದು ತರಬೇತಿ ಪ್ರಾರಂಭ. ಹೆಚ್ಚಿನ ಮಾಹಿತಿಗಾಗಿ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ ಭಾರತೀಯ ಸ್ಟೇಟ್ ಬ್ಯಾಂಕ್ ನಿರ್ದೇಶಕರು ಮೊ.ನಂ.9880666117, 8088235941, 9483236840, 9008423316ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ