ಮನುಷ್ಯನಿಗೆ ಆರೋಗ್ಯ ಬಹು ಮುಖ್ಯ ಮುನ್ನೆಚ್ಚರಿಕೆ ಅತ್ಯಗತ್ಯ- ಡಾ. ಶೇಖರ ಪಾಟೀಲ್
ಫೆ. 8 ರಂದು ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ
![](https://vinayavani.com/wp-content/uploads/2025/02/IMG_20250206_175025-780x470.jpg)
ಮನುಷ್ಯನಿಗೆ ಆರೋಗ್ಯ ಬಹು ಮುಖ್ಯ ಮುನ್ನೆಚ್ಚರಿಕೆ ಅತ್ಯಗತ್ಯ- ಡಾ. ಶೇಖರ ಪಾಟೀಲ್
ಫೆ. 8 ರಂದು ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ
ಶಹಾಪುರಃ ಆರೋಗ್ಯ ಪ್ರತಿಯೊಬ್ಬರ ಆಸ್ತಿ ಯಾರೂ ಕಳೆದುಕೊಳ್ಳಬೇಡಿ. ಮನುಷ್ಯನಿಗೆ ಆರೋಗ್ಯ ಮುಖ್ಯ ಆ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ವಹಿಸಬೇಕೆಂದು ಖ್ಯಾತ ಹಿರಿಯ ಕ್ಯಾನ್ಸರ್ ತಜ್ಞ ಡಾ.ಶೇಖರ ಪಾಟೀಲ್ ಹೇಳಿದರು.
ಇದೇ ಫೆ.8 ರಂದು ತಾಲೂಕಿನ ಉಕ್ಕಿನಾಳ ಗ್ರಾಮದಲ್ಲಿ ಬಸನಗೌಡ ಮಾಲಿಪಾಟೀಲ್ ಉಕ್ಕಿನಾಳ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿದ ಹಿನ್ನೆಲೆ ಗುರುವಾರ ನಡೆದ ಸುದ್ದಿಗೋಷ್ಟಿಯಲಿ ಅವರು ಮಾತನಾಡಿದರು.
ಆರೋಗ್ಯದ ಹಿತ ದೃಷ್ಠಿಯಿಂದ ಆಧುನಿಕ ತಂತ್ರಜ್ಞಾನದ ಮುಖಾಂತರ ಕ್ಯಾನ್ಸರ್ ರೋಗವನ್ನು ಪರೀಕ್ಷಿಸಲಾಗುವುದು ಮತ್ತು ಸಕ್ಕರೆ ಖಾಯಿಲೆ, ರಕ್ತದ ಒತ್ತಡ, ಕಿವಿ, ಮೂಗು, ಗಂಟಲು, ನರರೋಗ, ಚಿಕ್ಕಮಕ್ಕಳ ಮೂತ್ರಪಿಂಡ ರೋಗ, ಕಣ್ಣಿನ ತಪಾಸಣೆ, ಹೃದಯರೋಗವನ್ನು ಸಹ ತಪಾಸಣೆ ಮಾಡಲಾಗುವುದು.
ಎಚ್.ಸಿ.ಜಿ. ಆಸ್ಪತ್ರೆ ಬೆಂಗಳೂರು ಮತ್ತು ಅನುಗ್ರಹ ಕಣ್ಣಿನ ಆಸ್ಪತ್ರೆ ಕಲಬುರ್ಗಿ ಇವುಗಳ ಸಹಯೋಗದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ.
ಕೊಪ್ಪಳದ ಗವಿಮಠದ ಗವಿ ಸಿದ್ಧೇಶ್ವರ ಮಹಾಸ್ವಾಮೀಜಿಯವರು ಹಾಗೂ ಸೊನ್ನದ ಡಾ. ಶಿವಾನಂದ ಮಹಾಸ್ವಾಮೀಜಿಯವರು ಸಾನಿಧ್ಯವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಅವರು ಮುಖಸದುಪಯೋಗಪಡಿಸಿಕೊಳ್ಳಬೇಕೆಂದರು.
ಟ್ರಸ್ಟಿನ ಅಧ್ಯಕ್ಷ ಡಾ. ಮಲ್ಲಣಗೌಡ ಮಾಲಿಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ. ಮಹಿಳಾ ಸಬಲೀಕರಣ ಕುರಿತು ಡಾ. ಬಿ.ಎಸ್. ಅಜಯಕುಮಾರ ಹಾಗೂ ಕ್ಯಾನ್ಸರ್ ಕುರಿತು ಡಾ. ಯು.ಎಸ್. ವಿಶಾಲರಾವ್ ಮತ್ತು ರೈತ ಚಿಂತನೆ ಕುರಿತು ಕೈಲಾಶ್ ಮೂರ್ತಿ ಅವರು ಉಪನ್ಯಾಸ ನೀಡಲಿದ್ದಾರೆ.
ಬಾಗಲಕೋಟೆಯ ಗೌರಿ ಗಣೇಶ, ಸಾಂಸ್ಕೃತಿಕ ಕಲಾತಂಡದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ನಾಡಿನ ಕ್ಯಾನ್ಸರ್ ತಜ್ಞರಾದ ಡಾ. ನಂದೀಶಕುಮಾರ, ಡಾ. ಶಾಂತಲಿಂಗ ನಿಗ್ಗೂಡಗಿ, ಡಾ. ಶರಣು ಹತ್ತಿ, ಡಾ. ಶಶಿಧರ ಎಚ್.ಪಿ., ಡಾ. ಲೇಖಾ ಎಸ್. ಪಾಟೀಲ ಹಾಗೂ ನೇತ್ರ ತಜ್ಞರಾದ ಡಾ. ಬಿ.ಎಲ್. ಪ್ರಭುಗೌಡ, ಡಾ. ಮಾಲಿನಿ, ಡಾ. ಭೀಮರಡ್ಡಿ ಪಾಟೀಲ ಮತ್ತು ಸ್ತ್ರೀರೋಗ ತಜ್ಞರಾದ ಡಾ. ಸೃತಿಕಾ, ಡಾ. ಅನ್ನಪೂರ್ಣ, ಕೀಲು ಮತ್ತು ಮೂಳೆ ತಜ್ಞರಾದ ಡಾ. ಪುನೀತ ಚಮಕೇರಿ, ಡಾ. ಎಸ್. ಎನ್. ಪಾಟೀಲ, ಡಾ. ಶರಣು ಚನ್ನೂರ, ಡಾ. ರಾಹುಲ, ಕಿವಿ ಮತ್ತು ಮೂಗು, ಗಂಟಲು ತಜ್ಞರಾದ ಡಾ. ಯು.ಎಸ್.ವಿಶಾಲರಾವ, ಡಾ. ರಾಜಶೇಖರ ಹಾಲಕುರ, ಮಕ್ಕಳ ತಜ್ಞರಾದ ಡಾ. ಶಿವಪ್ರಸಾದ ಮೈತ್ರಿ, ಡಾ. ಪ್ರಕಾಶ ಯಾಳಗಿ, ಜನರಲ್ ತಜ್ಞರಾದ ಡಾ. ಸಂಗ್ರಾಮ ಬಿರಾದಾರ, ಡಾ. ರೇಣುಕಾಪ್ರಸಾದ ಚಿಕ್ಕಮಠ, ಡಾ. ಸಾಗರ ಬಿರಾದಾರ, ಡಾ. ಶ್ರೇಯಸ್ ಪಾಟೀಲ, ಡಾ. ರಾಜಕುಮಾರ ಮುಂತಾದ ವಿವಿದ ರೋಗಗಳ ತಜ್ಞರಿಂದ ಈ ತಪಾಸಣಾ ಶಿಬಿರದಲ್ಲಿ ಮುಂತಾದ ಎಲ್ಲಾ ಸಾಮಾನ್ಯ ಕಾಯಿಲೆಗಳ ತಪಾಸಣೆ ಮಾಡಲಾಗುವುದು. ಸುತ್ತಮುತ್ತಲಿನ ಹಳ್ಳಿಗಳ ಜನರು ಈ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರದ ಸದುಪಯೋಗಪಡಿಸಿಕೊಳ್ಳಬೇಕೆಂದರು. ಡಾ.ಮಲ್ಲನಗೌಡ ಪಾಟೀಲ ಉಕ್ಕಿನಾಳ, ಶಾಂತಗೌಡ, ರಾಜೂಗೌಡ ಉಕ್ಕಿನಾಳ ಉಪಸ್ಥಿತರಿದ್ದರು.
ಹೆಚ್ಚಿನ ಮಾಹಿತಿಗಾಗಿ ಮತ್ತು ನೊಂದಣಿ ಮಾಡಿಕೊಳ್ಳಲು ೮೦೭೩೫೮೪೩೮೦, ೯೬೬೩೩೨೭೫೭೧, ೯೪೪೮೫೦೭೯೦೨, ೯೯೧೬೨೬೫೫೫೫ ಈ ನಂಬರುಗಳಿಗೆ ಸಂಪರ್ಕಿಸಲು ಕೋರಲಾಗಿದೆ.