ಮೋದಿಗೆ ನೊಬೆಲ್ ಪ್ರಶಸ್ತಿ ನೀಡಿ-ಉಗ್ರಪ್ಪ ವ್ಯಂಗ್ಯ
ಪಿಎಂ ಮೋದಿ ಆಧುನಿಕ ದುರ್ಯೋಧನ- ಉಗ್ರಪ್ಪ
ಹುಬ್ಬಳ್ಳಿಃ ಪಿಎಂ ಮೋದಿ ಆಧುನಿಕ ದುರ್ಯೋಧನ ಇದ್ದಂತೆ. ಬರಿ ಸುಳ್ಳು ಹೇಳುವದೊಂದೆ ಕರಗತ ಮಾಡಿಕೊಂಡಿದ್ದಾರೆ. ಚುನಾವಣೆಯಲ್ಲಿ ಸುಳ್ಳು ಹೇಳಿಕೆ ನೀಡಿ ಮತದಾರರನ ಗಮನ ಸೆಳೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ ಹೇಳಿದರು.
ಕುಂದಗೋಳ ಉಪ ಚುನಾವಣೆ ಹಿನ್ನೆಲೆಯಲ್ಲಿ ಕ್ಷೇತ್ರದ ಅದರಗುಂಚಿ ಗ್ರಾಮದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಪ್ರಚಾರಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಮೋದಿಯವರು ಮತ್ತೊಮ್ಮೆ ಪ್ರಧಾನಿ ಆಗಲಿದ್ದಾರೆಂದು ಬಿಜೆಪಿಯವರು ತಿಳಿದುಕೊಂಡಿದ್ದಾರೆ, ಅದು ತಿಪ್ಪರಲಾಗ ಹಾಕಿದರೂ ಆಗದ ಮಾತು ಎಂದು ಅವರು ಕುಟುಕಿದರು.
ಸುಳ್ಳು ಹೇಳುವಲ್ಲಿ ಮೋದಿ ನಿಸ್ಸೀಮ ಅವರಿಗೆ ನೊಬೆಲ್ ಪ್ರಶಸ್ತಿ ಕೊಡಬೇಕು. ಬಿಜೆಪಿ ಕಾರ್ಯಕರ್ತರಿಗೆ ಸಭ್ಯತೆ ಎಂಬುದು ಇಲ್ಲ. ಶ್ರೀರಾಮುಲು ಅವರಿಗೆ ಮನುಷ್ಯತ್ವವೇ ಇಲ್ಲ.
ಬಿಜೆಪಿ ನಾಯಕ ಶ್ರೀರಾಮುಲು ಅವರು ಚಿತ್ರದುರ್ಗದಲ್ಲಿ ನೀಡಿದ ಹೇಳಿಕೆಯನ್ನು ಖಂಡಿಸಿದ ಅವರು, ಮತ ಪಡೆಯಲೇಬೇಕು ಎಂದು ಬಾಯಿಗೆ ಬಂದಂತೆ ಮಾತನಾಡುವದು ಸರಿಯಲ್ಲ.
ಈ ಕುರಿತು ರಾಜ್ಯದಾದ್ಯಂತ ಈಗ ಚರ್ಚೆ ನಡೆದಿರುವಾಗಲೇ ಉಗ್ರಪ್ಪ ಅವರು ಶ್ರೀರಾಮುಲು ನೀಡಿದ ಹೇಳಿಕೆ ಕೇಳಿ ಕೆಂಡಮಂಡಲವಾಗಿದ್ದಾರೆ.