ಉಮೇಶ ವಿರುದ್ಧ ಗುಡುಗಿದ ದಿನೇಶ
ಸ್ವಾರ್ಥಕ್ಕಾಗಿ ಉಪಚುನಾವಣೆ-ದಿನೇಶ ಗುಂಡೂರಾವ್
ಚಿಂಚೋಳಿಃ ಸ್ವಾರ್ಥ ರಾಜಕಾರಣದಿಂದಾಗಿ ಚಿಂಚೋಳಿಯಲ್ಲಿ ಉಪಚುನಾವಣೆ ನಡೆಯುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷರಾದ ಶ್ರೀ ದಿನೇಶ್ ಗುಂಡೂರಾವ್ ಹೇಳಿದರು.
ಈ ಕ್ಷೇತ್ರದ ಅಭಿವೃದ್ದಿ ಕೆಲಸಗಳು ಅಂದಿನ ಕಾಂಗ್ರೇಸ್ ಹಾಗೂ ಇಂದಿನ ಮೈತ್ರಿ ಸರಕಾರದಿಂದ ಆಗಿವೆ ಎಂದ ಅವರು ಜಾಧವ್ ಗೆ ಎಲ್ಲ ರೀತಿಯ ಸಹಕಾರ ನೀಡಿದಾಗಲೂ ಮೋಸ ಮಾಡಿ ಬಿಜೆಪಿಗೆ ಸೇರಿದರು ಎಂದು ದೂರಿದರು.
ಬಡವರಪರ ಕೆಲಸಗಳಿಗೆ ಕಾಂಗ್ರೆಸ್ ಬದ್ದವಾಗಿದ್ದು ಎಲ್ಲ ವರ್ಗದ ಜನರಿಗೆ ನ್ಯಾಯಕ್ಕಾಗಿ ಸದಾ ಮಿಡಿಯುತ್ತಿದೆ. ಈಗ ಸುಭಾಷ್ ರಾಠೋಡ್ ನಮ್ಮ ಅಭ್ಯರ್ಥಿಯಾಗಿದ್ದಾರೆ ಅವರನ್ನು ಗೆಲ್ಲಿಸುವ ಮೂಲಕ ಜಾಧವ್ ಗೆ ಪಾಠಕಲಿಸಿ ಎಂದು ಕರೆ ನೀಡಿದರು.
ಬಿಜೆಪಿಯವರು ಸುಳ್ಳಿನ ಪ್ರಚಾರ ನಡೆಸುತ್ತಿದ್ದಾರೆ. ಯಡಿಯೂರಪ್ಪ ಮುಖ್ಯಮಂತ್ರಿ ಆಗುತ್ತಿದ್ದಾರೆ ಎಂದು ಪ್ರಚಾರ ನಡೆಸುತ್ತಿದ್ದಾರೆ. ಆದರೆ, ಜಾಧವ್ ದುಡ್ಡಿಗಾಗಿ ಮಾರಾಟವಾಗಿದ್ದಾರೆ. ಇದನ್ನು ನೀವು ಗಣನೆಗೆ ತೆಗೆದುಕೊಂಡು ಕಾಂಗ್ರೇಸ್ ಪಕ್ಷವನ್ನು ಗೆಲ್ಲಿಸಿ ಎಂದರು.
ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ ಮಾತನಾಡಿ ಕಾಂಗ್ರೇಸ್ ಪಕ್ಷ ಎಲ್ಲ ಕೊಟ್ಟರೂ ಕೂಡಾ ಜಾಧವ್ ನಾಯಕರಿಗೆ ಪಕ್ಷಕ್ಕೆ ಬೆನ್ನಿಗೆ ಚೂರಿಹಾಕಿ ಬಿಜೆಪಿ ಸೇರಿ ಚುನಾವಣೆ ನಡೆಯುವಂತೆ ಮಾಡಿದ್ದಾರೆ ಅವರಿಗೆ ಮನೆಗೆ ಕಳಿಸಿ ಎಂದರು.
ಅಭ್ಯರ್ಥಿ ಸುಭಾಷ್ ರಾಠೋಡ್ ಮಾತನಾಡಿ ಇದು ಇಬ್ಬರು ವ್ಯಕ್ತಿಗಳ ನಡುವಿನ ಚುನಾವಣೆಯಲ್ಲ. ಮೋಸ ಮಾಡಿದ ವ್ಯಕ್ತಿಯ ಹಾಗೂ ಜನಪರ ಪಕ್ಷದ ನಡುವಿನ ಚುನಾವಣೆಯಾಗಿದೆ ಎಂದರು.
ಸಚಿವ ರಹೀಂಖಾನ್ ಮಾತನಾಡಿ ಈ ಭಾಗದ ಅಭಿವೃದ್ದಿಗೆ ಖರ್ಗೆ ಸಾಹೇಬರು ಶ್ರಮಿಸಿದರು. ಬಿಜೆಪಿಯವರು ಸುಳ್ಳು ಮಾತುಗಳಿಂದ ಜನಜೀವನವನ್ನು ಹಾಳುಗೆಡವಿದ್ದಾರೆ ಎಂದರು.
ಕೊನೆಯಲ್ಲಿ ಮಾತನಾಡಿದ ಸಂಸದರಾದ ಎಂ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ ನಾನು ಜಾಧವ್ ನ ಗುರು ಮೋದಿ ಬಗ್ಗೆ ಸಂಸತ್ ನಲ್ಲಿ ಮಾತನಾಡುತ್ತೇನೆ ಇಲ್ಲೇನು ಮಾತನಾಡಲಿ
ಡಿಸಿಎಂ ಡಾ ಜಿ ಪರಮೇಶ್ವರ, ಸಂಸದರಾದ ಎಂಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಕಾರ್ಯದರ್ಶಿ ಸಾಕೆ ಶೈಲೇಶ್ ನಾಥ್, ಸಚಿವರಾದ ರಾಜಶೇಖರ್ ಪಾಟೀಲ್, ಪ್ರಿಯಾಂಕ್ ಖರ್ಗೆ, ರಹೀಂಖಾನ್ ಸೇರಿದಂತೆ ಹಲವರು ವೇದಿಕೆಯ ಮೇಲಿದ್ದರು.