ಉಕ್ರೇನ್ ನಿಂದ ರಾಜ್ಯಕ್ಕೆ ಬಂದಿಳಿದ ವಿದ್ಯಾರ್ಥಿಗಳುಃ ಆರ್.ಅಶೋಕ್ ಸ್ವಾಗತ, ಪಾಲಕರಲ್ಲಿ ಖುಷಿ
ಉಕ್ರೇನ್ ನಿಂದ ರಾಜ್ಯಕ್ಕೆ ಬಂದಿಳಿದ ವಿದ್ಯಾರ್ಥಿಗಳುಃ ಆರ್.ಅಶೋಕ್ ಸ್ವಾಗತ, ಪಾಲಕರಲ್ಲಿ ಖುಷಿ
ಬೆಂಗಳೂರಃ ಕಳೆದ ನಾಲ್ಕು ದಿನದಿಂದ ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿದ್ದು,ಉಕ್ರೇನ್ ನಲ್ಲಿ ಮದ್ದು, ಗುಂಡು, ಬಾಂಬ್ ಸ್ಪೋಟ್ ಗಳ ಸದ್ದು, ಜೊತೆಗೆ ದೊಡ್ಡ ದೊಡ್ಡ ಕಟ್ಟಡಗಳ ನೆಲ ಸಮ ಸಾವು ನೋವಿನ ಯುದ್ಧದ ಭೀಕರತೆ ನಡುವೆ ನಮ್ಮ ರಾಜ್ಯ ವಿದ್ಯಾರ್ಥಿಗಳು ತಾಯ್ನಾಡಿಗೆ ವಾಪಾಸ್ ಆಗಲು ಪರದಾಡುವಂತಾಗಿತ್ತು.
ಈ ಮಧ್ಯ ಭಾರತ ಅತ್ಯಂತ ಜಾಗುರಕತೆಯಿಂದ ನಮ್ಮ ದೇಶದ ವಿದ್ಯಾರ್ಥಿಗಳನ್ನು ಕರೆ ತರುವ ಕೆಲಸ ಮಾಡಿದೆ ಇನ್ನೂ ಮುಂದುಬರೆಸಿದೆ.
ಇಂದು ನಮ್ಮ ರಾಜ್ಯದ ವಿದ್ಯಾರ್ಥಿಗಳು ಉಕ್ರೇನ್ ನಿಂದ ಬೆಂಗಳೂರಿಗೆ ಬಂದು ಇಳಿದಿದ್ದು, ಸಚಿವ ಆರ್.ಅಶೋಕ ಸ್ವಾಗತಿಸಿಕೊಂಡರು. ನೆರೆದ ಪಾಲಕರು ತಮ್ಮ ತಮ್ಮ ಮಕ್ಕಳನ್ನು ಆಲಿಂಗಿಸಿ ಕಣ್ಣೀರಬಾಷ್ಪ ಸುರಿಸಿದರು.
ವಿದ್ಯಾರ್ಥಿಗಳು ಯುದ್ಧ ಭೀಕರತೆ ನಡುವೆ ತಾಯ್ನಾಡಿಗೆ ವಾಪಾಸಾಗಿ ಪಾಲಕರನ್ನು ಸೇರಿರುವದು ಎಲ್ಲರಲ್ಲೂ ಸಂತಸ ತಂದಿದೆ.
ಯುದ್ಧ ತಾಂಡವದ ನಡುವೆ ನಾಲ್ಕು ದಿನ ಕಳೆದು ಸೇಫ್ ಆಗಿ ಪಾಲಕರ ಮಡಿಲಿಗೆ ಸೇರಿರುವ ಕಾರಣ ಪಾಲಕರು, ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.
ವಾಪಾಸ್ ತಾಯ್ನಾಡು ಸೇರಿದ ವಿದ್ಯಾರ್ಥಿಗಳು, ಇನ್ನೂ ಎರಡು ಮೂರು ಬ್ಯಾಚ್ ನವರು ಉಕ್ರೇನ್ ನಲ್ಲಿದ್ದು, ಅವರು ಸಹ ಸುರಕ್ಷತಿವಾಗಿ ನಮ್ಮ ದೇಶಕ್ಕೆ ಬರಲು ಎಂದು ವಿದ್ಯಾರ್ಥಿನ ಇಂಚರ ಆಶಿಸಿದರು. ಭಾರತದ ಧ್ವಜ ಹಿಡಿದು ಎಲ್ಲರೂ ಸಂತಸ ಹಂಚಿಕೊಂಡರು.