ಉಮೇಶ ಕತ್ತಿ ಇನ್ನಿಲ್ಲ..! ರಾಮಯ್ಯ ಆಸ್ಪತ್ರೆ ಮುಂದೆ ಸಂಬಂಧಿಕರು, ಅಭಿಮಾನಿಗಳ ರೋದನೆ
ಸಚಿವ ಉಮೇಶ ಕತ್ತಿ ನಿಧನ
ಬೆಂಗಳೂರಃ ಸಚಿವ ಉಮೇಶ ಕತ್ತಿ ಅವರಿಗೆ ಲಘು ಎದೆ ನೋವು ಕಾಣಿಸಿಕೊಂಡ ಹಿನ್ನೆಲೆ ಅವರ ಸಂಬಂಧಿಕರು ತಕ್ಷಣ ಸಮೀಪದ ರಾಮಯ್ಯ ಆಸ್ಪತ್ರೆಗೆ ದಾಖಲಿಸಿದ್ದರೂ ಆದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಅಸುನೀಗಿದರು.
ಇಲ್ಲಿನ ಡಾಲರ್ಸ ಕಾಲೊನಿ ಅವರ ಮನೆಯಲ್ಲಿದ್ದ ಸಚಿವ ಉಮೇಶ ಕತ್ತಿ ಅವರಿಗೆ ಹೃದಯಾಘಾತವಾದ ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ತೀವ್ರ ನಿಗಾ ಘಟಕದಲ್ಲಿ ಸೂಕ್ತ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಮೃತಪಟ್ಟರು.
ರಾಮಯ್ಯ ಆಸ್ಪತ್ರೆಗೆ ಮುಂದೆ ಸಂಬಂಧಿಕರು, ಅಭಿಮಾನಿಗಳು ಜಮಾವಣೆಗೊಂಡಿದ್ದು, ಸಂಬಂಧಿಕರ ರೋದನೆ ಮುಗಿಲು ಮುಟ್ಟಿದೆ. ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲೆಂದು ವಿವಿ ಬಳಗ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿತು.