ಪ್ರತಾಪ ಸಿಂಹರನ್ನು ಬೇಷರತ್ ಬಿಡುಗಡೆ ಮಾಡದಿದ್ದರೆ ಹುಷಾರ್ -ಬಿಎಸ್ ವೈ ಎಚ್ಚರಿಕೆ?
ಕಲಬುರಗಿ: ನಿಷೇದಾಗ್ನೆ ಉಲ್ಲಂಘಿಸಿ ಮೈಸೂರು ಜಿಲ್ಲೆಯ ಹುಣಸೂರು ಪಟ್ಟಣದಲ್ಲಿ ಹನುಮ ಜಯಂತಿ ಪ್ರಯುಕ್ತ ಮೆರವಣಿಗೆ ಮಾಡಲು ಸಿದ್ಧವಾಗಿದ್ದಾರೆ ಎಂಬ ಆರೋಪದ ಮೇಲೆ ಪೊಲೀಸರು ಮೈಸೂರು ಸಂಸದ ಪ್ರತಾಪ ಸಿಂಹರನ್ನು ಬಂಧಿಸಿದ್ದಾರೆ. ಆದರೆ, ಮುಖ್ಯಮಂತ್ರಿ ಸಿದ್ಧರಾಮಯ್ಯ ರಾಜಕೀಯ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡು ಸಂಸದ ಪ್ರತಾಪ ಸಿಂಹರನ್ನು ಬಂಧಿಸಿದ್ದಾರೆ ಎಂದು ಅಫಜಲಪುರದಲ್ಲಿ ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯದ್ಯಕ್ಷ ಬಿ.ಎಸ್.ಯಡಿಯೂರಪ್ಪ ಆರೋಪಿಸಿದ್ದಾರೆ.
ಅಫಜಲಪುರದಲ್ಲಿ ನಡೆದ ಬಿಜೆಪಿ ನವಕರ್ನಾಟಕ ಪರಿವರ್ತನಾ ಯಾತ್ರೆಯಲ್ಲಿ ಬಿಎಸ್ ವೈ ರಾಜ್ಯ ಸರ್ಕಾರದ ವಿರುದ್ಧ ಗುಡುಗಿದ್ದಾರೆ. ಸಂಜೆಯೊಳಗೆ ಸಂಸದ ಪ್ರತಾಪ ಸಿಂಹ ಅವರನ್ನು ಬೇಷರತ್ ಬಿಡುಗಡೆ ಮಾಡಬೇಕು. ಇಲ್ಲವಾದಲ್ಲಿ ನಾಳೆ ಹುಣಸೂರು ಪಟ್ಟಣ ಬಂದ್ ಮಾಡುತ್ತೇವೆ. ರಾಜ್ಯದಾದ್ಯಂತ ಸಿದ್ಧರಾಮಯ್ಯ ಅವರ ತುಘಲಕ್ ದರ್ಬಾರ್ ವಿರುದ್ಧ ಪ್ರತಿಭಟನೆ ಆರಂಭಿಸಬೇಕಾಗುತ್ತದೆಂದು ಸಿದ್ಧರಾಮಯ್ಯ ಅವರಿಗೆ ಈ ಮೂಲಕ ಎಚ್ಚರಿಕೆ ನೀಡುತ್ತೇನೆ ಎಂದು ಬಿಎಸ್ ವೈ ಕಿಡಿಕಾರಿದ್ದಾರೆ.