ಪ್ರಮುಖ ಸುದ್ದಿ
ಅಪರಿಚಿತ ಯುವಕನ ಶವ ಪತ್ತೆಃ ಸುಟ್ಟು ಕೊಲೆ ಮಾಡಿರುವ ಶಂಕೆ
ಯಾದಗಿರಿಃ ಅರೆಬರೆ ಸುಟ್ಟ ಯುವಕನೋರ್ವನ ಶವ ತಾಲೂಕಿನ ಬಳಿಚಕ್ರ ಗ್ರಾಮದ ಕಾಳಬೆಳಗುಂದಿ ರಸ್ತೆ ಭಾಗದ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ.
ದೇಹದ ಮುಕ್ಕಾಲು ಭಾಗ ದೇಹ ಸುಟ್ಟಿದೆ. ರವಿವಾರ ತಡ ರಾತ್ರಿ ಶವ ಪತ್ತೆಯಾಗಿದ್ದು, ಶವ ಯಾರದೆಂಬುದು ಗುರು ಸಿಕ್ಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಅಪರಿಚಿತ ಶವ ಇದಾಗಿದ್ದು. ಅರಣ್ಯ ಪ್ರದೇಶಕ್ಕೆ ಕರೆ ತಂದು ಬೆಂಕಿಹಚ್ಚಿ ಕೊಲೆ ಮಾಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸೈದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.