ಪ್ರಮುಖ ಸುದ್ದಿ
ನಾಳೆಯೇ ಅನರ್ಹರ ಅರ್ಜಿ ವಿಚಾರಣೆ.!
ವಿವಿಡೆಸ್ಕ್ಃ ಕಾಂಗ್ರೆಸ್ ಪರ ವಕೀಲ ಕಪಿಲ್ ಸಿಬಲ್ ಅವರ ಮನವಿ ಮೇರೆಗೆ ಸೋಮವಾರ ಬೆಳಗ್ಗೆ ಅನರ್ಹ ಶಾಸಕರ ಅರ್ಜಿ ವಿಚಾರಣೆಗೆ ಒಂದು ದಿನ ಮುಂದೂಡಲು ಒಪ್ಪಿಗೆ ನೀಡಿತ್ತು. ಆದರೆ ಚುನಾವಣೆ ಆಯೋಗ ಮದ್ಯಾಹ್ನ ಆಕ್ಷೇಪ ಸಲ್ಲಿಸಿರುವ ಕಾರಣ ಮತ್ತೆ ಸುಪ್ರೀಂಕೋರ್ಟ್ ನಾಳೆಯೇ ಅಂದರೆ ಮಂಗಳವಾರವೇ 17 ಅನರ್ಹರ ಅರ್ಜಿ ವಿಚಾರಣೆ ನಡೆಸಲಿದೆ ಎಂದು ತಿಳಿಸಿದೆ.
ಈಗಾಗಲೇ ಚುನಾವಣೆ ಆಯೋಗ ಚುನಾವಣೆ ದಿನಾಂಕ ನಿಗದಿಯಾಗಿರುವದರಿಂದ ವಿಳಂಬ ಬೇಡವೆಂದು ಮನವಿ ಸಲ್ಲಿಸಿರುವ ಹಿನ್ನೆಲೆ, ಎರಡು ಕಡೆ ಮನವಿ ಪರಿಶೀಲಿಸಿದ ಸುಪ್ರೀಂಕೋರ್ಟ್ ಚುನಾವಣೆ ಆಯೋಗದ ಮನವಿ ಪುರಸ್ಕರಿಸಿದೆ ಎನ್ನಲಾಗಿದೆ. ಹೀಗಾಗಿ ನಾಳೆ ಮಂಗಳವಾರವೇ ಅನರ್ಹರ ಅರ್ಜಿ ವಿಚಾರಣೆ ನಡೆಯಲಿದೆ.