ಯುಪಿಯಲ್ಲಿ ಭರ್ಜರಿ ಕಮಾಲ್ ಮಾಡಿದ ಕಮಲ
ವಿವಿ ಡೆಸ್ಕ್ಃ ಪಂಚರಾಜ್ಯ ಚುನಾವಣೆ ಫಲಿತಾಂಶ ಇಂದು ಹೊರ ಬೀಳುತ್ತಿದ್ದು, ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭಗೊಂಡಿದ್ದು, ಉತ್ತರ ಪ್ರದೇಶದಲ್ಲಿ 250 ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸುವ ಮೂಲಕ ಬಿಜೆಪಿ ಅತ್ಯುತ್ತಮ ಸಾಧನೆಯ ಹಾದಿಯಲ್ಲಿದೆ.
ಅಖಿಲೇಶ ಯಾದವ ಅವರ ಪಕ್ಷ ಎಸ್ಪಿ 107 ಸ್ಥಾನಗಳಲ್ಲಿ ಮುನ್ನಡೆ ಇದ್ದು, ಕಾಂಗ್ರೆಸ್ ಕೇವಲ 4 ಸ್ಥಾನ ಮತ್ತು ಬಿಎಸ್ಪಿ 4 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ.
ಒಟ್ಟಾರೆ ಯುಪಿ ಫಲಿತಾಂಶ ಮತ್ತೊಮ್ಮೆ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುವ ಸಾಧ್ಯತೆ ಕಂಡು ಬರುತ್ತಿದೆ. ಪಂಜಾಬ್ ನಲ್ಲಿ ಆಪ್ ಅಧಿಕಾರ ಹಿಡಿಯುವ ಧಾವಂತದಲ್ಲಿದ್ದರೆ, ಉತ್ತರಾಖಂಡ ಬಿಜೆಪಿ ಪಾಲಾಗಲಿದೆ ಎಂಬ ಸುಳಿವು ದೊರೆತಿದೆ. ಮಣಿಪುರದಲ್ಲೂ ಬಿಜೆಪಿ ಮುಂದಿದ್ದು, ಗೋವಾದಲ್ಲಿ ಕಾಂಗ್ರೆಸ್ ಹೆಚ್ವಿನ ಸ್ಥಾನದಲ್ಲಿ ಮುನ್ನಡೆ ಇದೆ.