ಪ್ರಮುಖ ಸುದ್ದಿ
ಯುಪಿ ಶಿಕ್ಷಣ ಸಚಿವೆ ಕೊರೊನಾಗೆ ಬಲಿ.!
ಉತ್ತರ ಪ್ರದೇಶಃ ಕೊರೊನಾ ಆವರಿಸಿದ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದ ಇಲ್ಲಿನ ಶಿಕ್ಷಣ ಸಚಿವೆ, ಮಹಿಳಾ ಹೋರಾಟಗಾರ್ತಿ ಕಮಲದೇವಿ ವರುಣ್ (62) ಚಿಕಿತ್ಸೆಗೆ ಸ್ಪಂಧಿಸದೆ ರವಿವಾರ ಆಸ್ಪತ್ರೆ ಯಲ್ಲಿಯೇ ನಿಧನರಾಗಿದ್ದಾರೆ.
ಜುಲೈ 18 ರಂದು ಕೊರೊನಾ ಟೆಸ್ಟ್ ಮಾಡಲಾಗಿ, ಪಾಸಿಟಿವ್ ರಿಪೋರ್ಟ್ ಬಂದ ಹಿನ್ನೆಲೆ ಲಕ್ನೋದ ಪಿಜಿಐ ಆಸ್ಪತ್ರೆಗೆ ಅವರು ದಾಖಲಾಗಿದ್ದರು.
ಕಮಲದೇವಿ ಅವರು ಮಹಿಳಾ ಹೋರಾಟಗಾರ್ತಿಯಾಗಿ ಖ್ಯಾತಿ ಹೊಂದಿದ್ದರು. ಎರಡು ವಾರಿ ಸಂಸದೆಯಾಗಿಯೂ ಆಯ್ಕೆಯಾಗಿ ಸೇವೆ ಸಲ್ಲಿಸಿದ ಅವರು ಪ್ರಸ್ತುತ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರದಲ್ಲಿ ಕ್ಯಾಬಿನೆಟ್ (ಶಿಕ್ಷಣ) ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಸಚಿವೆ ನಿಧನದಿಂದಾಗಿ ಸೋಮವಾರ ಅಯೋಧ್ಯ ಭೇಟಿಯನ್ನು ಸಿಎಂ ಆದಿತ್ಯನಾಥ್ ರದ್ದುಗೊಳಿಸಿದ್ದಾರೆ. ಜುಲೈ 5 ರಂದು ಶ್ರೀರಾಮ ಮಂದಿರ ಅಡಿಗಲ್ಲು ಸಮಾರಂಭ ತಯ್ಯಾರಿ ಹಿನ್ನೆಲೆ ಸಿಎಂ ಅಯೋಧ್ಯಗೆ ತೆರಳುತ್ತಿದ್ದರು ಎನ್ನಲಾಗಿದೆ.