ಪ್ರಮುಖ ಸುದ್ದಿ

ಸುದ್ದಿಗೋಷ್ಠಿಗೂ ಮುನ್ನ ಉಪ್ಪಿ ಅಂಗಿ ಬದಲಿಸಿದ್ದೇಕೆ ಗೊತ್ತಾ!

ಅಂಗಿ ಬದಲಿಸಿದಷ್ಟು ಸುಲಭವೇ ‘ಪ್ರಜಾಕೀಯ‘!

ಬೆಂಗಳೂರು: ನಗರದ ರಿಪ್ಪೀಸ್ ಹೋಟೆಲ್ ನಲ್ಲಿ ನಟ, ಸುದ್ದಿಗೋಷ್ಠಿಗೂ ಮುನ್ನ ಉಪ್ಪಿ ಅಂಗಿ ಬದಲಿಸಿದ್ದೇಕೆ!ನಿರ್ದೇಶಕ ಉಪೇಂದ್ರ ಪತ್ರಿಕಾಗೋಷ್ಠಿ ನಡೆಸಿದರು. ಪ್ರಜಾಪ್ರಭುತ್ವ, ರಾಜಕೀಯ, ಜನನಾಯಕ ಎಂಬುದರ ಬಗ್ಗೆ ತಮ್ಮದೇ ಶೈಲಿಯಲ್ಲಿ ವ್ಯಾಖ್ಯಾನ ನೀಡಿದರು. ಪ್ರಜಾಪ್ರಭುತ್ವ ಎಂಬ ಪದದಲ್ಲೇ ಪ್ರಜೆಗಳೇ ಪ್ರಭುಗಳು ಎಂಬರ್ಥವಿದೆ. ಆದರೆ, ರಾಜಕಾರಣ, ರಾಜಕೀಯ ಎಂಬ ಪದಗಳಲ್ಲಿ ‘ರಾಜ’ ಎಲ್ಲಿಂದ ಬಂತು ಎಂದು ಪ್ರಶ್ನಿಸಿದ್ದಾರೆ.

ಅಂತೆಯೇ ಜನನಾಯಕ ಎಂಬ ಪದವೇ ಅರ್ಥಹೀನ. ಜನ ಸೇವಕರಾಗಿ ಕೆಲಸ ಮಾಡಬೇಕಿದೆ. ಜನರ ಮನೆ ಬಾಗಿಲಿಗೆ ಹೋಗಿ ಕೆಲಸ ಮಾಡಿಕೊಡಬೇಕಿದೆ. ಅದರ ಬದಲು ಹಣ ಬಲ, ತೋಳ್ಬಲ, ಜಾತಿ, ಮತಗಳ ಆಧಾರದ ಮೇಲೆ ರಾಜಕಾರಣ ನಡೆಯುತ್ತಿದೆ. ರಾಜಕಾರಣ ಸಂಪೂರ್ಣ ದಿಕ್ಕುತಪ್ಪಿದೆ ಎಂದು ವಿಷಾದಿಸಿದರು.

ಮಾಧ್ಯಮಗಳ ಪ್ರತಿನಿಧಿಗಳಂತೆ ಶಾಸಕರು ಕಾರ್ಯನಿರ್ವಹಿಸಬೇಕು. ಮುಖ್ಯಮಂತ್ರಿ  ಆದವರು ಆಯಾ ಕ್ಷೇತ್ರದ ಶಾಸಕರಿಂದ ಕ್ಷಣಕ್ಷಣದ ಮಾಹಿತಿ ಪಡೆದು ಪರಿಹಾರ ಕ್ರಮ ಕೈಗೊಳ್ಳಬೇಕು. ಬೆಳಿಗ್ಗೆಯಿಂದ ಸಂಜೆವರೆಗೂ ಜನಪ್ರತಿನಿಧಿಗಳು ಕ್ಷೇತ್ರ ಸುತ್ತಬೇಕು. ತಮ್ಮ ಕ್ಷೇತ್ರದ ಸಮಸ್ಯೆಗಳನ್ನು ವಿತ್ ವಿಸುವಲ್ ವಿಧಾನಸೌಧಕ್ಕೆ ತಲುಪಿಸಬೇಕು. ಆ ಮೂಲಕ ಶೀಘ್ರಗತಿಯಲ್ಲಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ವ್ಯವಸ್ಥೆ ಆಗಬೇಕಿದೆ ಎಂದು ಅಭಿಪ್ರಾಯಪಟ್ಟರು.

ಎಲ್ಲರಂತೆ ನಾನೂ ರಾಜಕಾರಣವನ್ನು ದೂಷಿಸುತ್ತ ಕುಳಿತರೆ ಆಗೋದಿಲ್ಲ. ನಾನು ನನ್ನ ನಾಡಿಗೆ ನೀಡುವ ಕೊಡುಗೆಯೇನು. ಹದಗೆಟ್ಟ ಸ್ಥಿತಿಯ ಸುಧಾರಣೆಯಲ್ಲಿ ನನ್ನ ಪಾತ್ರವೇನು ಎಂದು ಪ್ರಶ್ನಿಸಿಕೊಂಡು ನಾನು ಈ ಹೆಜ್ಜೆ ಇಟ್ಟಿದ್ದೇನೆ. ಮಾಧ್ಯಮಗಳ ಮೂಲಕ, ಸಾಮಾಜಿಕ ಜಾಲ ತಾಣಗಖ ಮೂಲಕ ಜನರನ್ನು ತಲುಪುತ್ತೇನೆ. ದುಡ್ಡು ಹಾಕುವುದಿಲ್ಲ, ದುಡ್ಡು ತೆಗೆಯುದಿಲ್ಲ. ದುಡ್ಡು ಹಾಕಿ ದುಡ್ಡು ತೆಗೆಯುವ ಉದ್ಯಮ ರಾಜಕಾರಣ ಅಲ್ಲ ಎಂದು ಅಭಿಪ್ರಾಯಪಟ್ಟರು ಉಪೇಂದ್ರ.

ನಾನು ಸೋಲು, ಗೆಲುವಿನ ಲೆಕ್ಕಾಚಾರ ಹಾಕೋದಿಲ್ಲ. ಗೆಲ್ಲಲೇಬೇಕು, ಸೋಲಬಾರದು ಎಂಬ ಬಿಗುಮಾನವಿಲ್ಲ. ಇದೊಂದು ಪ್ರಯತ್ನ ಉತ್ತಮ ಕೆಲಸಕ್ಕೆ ಕನ್ನಡ ಜನ ಸ್ಪಂದಿಸುತ್ತಾರೆಂಬ ಆಶಾವಾದವಿದೆ. ಮುಂದಿನ ದಿನಗಳಲ್ಲಿ ಪಕ್ಷದ ಹೆಸರು ಮತ್ತು ಚಿಹ್ನೆ ಬಗ್ಗೆ ತಿಳಿಸುತ್ತೇನೆ. ಅಲ್ಲಿವರೆಗೆ ಜನ ನನ್ನೊಂದಿಗೆ ಇಮೇಲ್ ಮೂಲಕ ಸಂಪರ್ಕಿಸಿ ಅಭಿಪ್ರಾಯ ಹಂಚಿಕೊಳ್ಳಲಿ. ಎಲ್ಲರ ಸಲಹೆ, ಸಹಕಾರದೊಂದಿಗೆ ಈ ಜನಪರ ಪಕ್ಷ ಮುನ್ನಡೆಯಲಿದೆ ಎಂದು ತಿಳಿಸಿದರು.

prajakarana1@gmail.com, prajakarana2@gmail.com, prajakarana3@gmail.com ಈ ಇ ಮೇಲ್ ಗಳ ಮೂಲಕ ಸಲಹೆ ನೀಡಬಹುದು ಎಂದು ತಿಳಿಸಿದರು ಉಪೇಂದ್ರ.

ಈ ಮೊದಲು ಸಿನೆಮಾಕ್ಕಾಗಿ ನಿರ್ಮಾಪಕರಿಗೆ ಡೇಟ್ ಕೊಡುತ್ತಿದ್ದೆ ಈಗ ಜನರಿಗೆ ಡೇಟ್ ಕೊಟ್ಟು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೇನೆಂದರು. ಇನ್ನು ಈ ಕೆಲಸವನ್ನು ಯಾರು ಬೇಕಾದರೂ ಮಾಡಬಹುದು. ಜನಸೇವಕರಾಗಿ ಯಾರೇ ಈ ಪ್ರಯತ್ನ ಮಾಡಿದರೂ ಒಳ್ಳೆಯದೇ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಜನನಾಯಕನಾಗಲು ಬಂದಿಲ್ಲ. ಬದಲಾಗಿ ಜನ ಸೇವಕನಾಗಲು ಸಿದ್ಧವಾಗಿದ್ದೇನೆ. ಅದಕ್ಕಾಗಿಯೇ ಈ ಖಾಕಿ ಅಂಗಿ ಧರಿಸಿ ನಿಮ್ಮ ಮುಂದೆ ಬಂದಿದ್ದೇನೆಂದರು.

ಸುದ್ದಿಗೋಷ್ಠಿ ಆರಂಭಕ್ಕೂ ಮುನ್ನ ಬಣ್ಣದ ಚೆಕ್ಸ್ ಅಂಗಿ ಧರಿಸಿದ್ದ ನಟ ಉಪ್ಪಿ ಸುದ್ದಿಗೋಷ್ಠಿ ಆರಂಭಕ್ಕೂ ಕೆಲಕ್ಷಣಗಳ ಮೊದಲಷ್ಟೇ ಅಂಗಿ ಬದಲಿಸಿದರು. ಬಣ್ಣದ ಅಂಗಿ ಬಿಚ್ಚಿಟ್ಟು ಖಾಕಿ ಬಣ್ಣದ ಅಂಗಿ ಧರಿಸಿ ಬಂದರು. ಆ ಮೂಲಕ ನಾನು ಜನ ಸೇವಕ ಎಂಬ ಸಂದೇಶ ನೀಡಲು ಪ್ರಯತ್ನಿಸಿದರು. ಆದರೆ, ಅಂಗಿ ಬದಲಿಸಿದಷ್ಟು ಸುಲಭವೇ ‘ಪ್ರಜಾಕೀಯ’ ಎಂಬುದೇ ಈಗ ಪ್ರಶ್ನೆಯಾಗಿದೆ. ಮುಂದಿನ ದಿನಗಳಲ್ಲಿ ಉಪ್ಪಿ ಜನರನ್ನು ಸೆಳೆಯಲು ಮತ್ತಿನ್ಯಾವ ತಂತ್ರ ಹೂಡಲಿದ್ದಾರೆ. ಜನ ಉಪ್ಪಿ ‘ಪ್ರಜಾಕೀಯ’ವನ್ನು ಹೇಗೆ ಸ್ವೀಕರಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

Related Articles

Leave a Reply

Your email address will not be published. Required fields are marked *

Back to top button