ಪ್ರಮುಖ ಸುದ್ದಿ

ಭಾರತ – ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಸಂಬಂಧಕ್ಕೆ ಬ್ರೇಕ್!

ನವದೆಹಲಿ : ಭಾರತ ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಬೆನ್ನಲ್ಲೇ ಪಾಕಿಸ್ತಾನ ಸರ್ಕಾರ ವಿಶೇಷ ಅಧಿವೇಶನ ಕರೆದಿತ್ತು. ಅಧಿವೇಶನದಲ್ಲಿ ಜಮ್ಮು-ಕಾಶ್ಮೀರದ ಬಗ್ಗೆ ಭಾರತದ ನಡೆ ಬಗ್ಗೆ ಚರ್ಚಿಸಲಾಗಿದೆ. ಅಂತೆಯೇ ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್​ ನೇತೃತ್ವದಲ್ಲಿ ನಡೆದ ನ್ಯಾಶನಲ್ ಸೆಕ್ಯುರಿಟಿ ಕಮಿಟಿ ಮೀಟಿಂಗ್​ನಲ್ಲಿ ಭಾರತದೊಂದಿಗೆ ಸಂಬಂಧ ಕಡಿತಗೊಳಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ.

ದ್ವಿಪಕ್ಷೀಯ ಸಂಬಂಧವನ್ನು ಕಡಿತಗೊಳಿಸಿರುವ ಪಾಕಿಸ್ತಾನ, ವ್ಯಾಪಾರ ವಹಿವಾಟನ್ನೂ ಬಂದ್ ಮಾಡಿದೆ. ವಾಘಾ ಗಡಿಯನ್ನೂ ಬಂದ್ ಮಾಡಲು ನಿರ್ಧರಿಸಿರುವ ಪಾಕಿಸ್ತಾನ, ಆಗಸ್ಟ್ 14 ರಂದು ಪಾಕಿಸ್ತಾನದಲ್ಲಿ ಬ್ಲ್ಯಾಕ್​ ಡೇ ಆಚರಿಸಲು ನಿರ್ಧರಿಸಿದೆ ಎನ್ನಲಾಗಿದೆ. ಅಲ್ಲದೆ ಭಾರತದಲ್ಲಿರುವ ತನ್ನ ರಾಯಭಾರಿಯನ್ನು ವಾಪಸ್​ ಕರೆಸಿಕೊಂಡು ಪಾಕಿಸ್ತಾನದಲ್ಲಿರುವ ಭಾರತದ ರಾಯಭಾರಿಯನ್ನೂ ಉಚ್ಚಾಟಿಸಲು ನಿರ್ಧರಿಸಿದೆ ಎಂದು ತಿಳಿದು ಬಂದಿದೆ.

Related Articles

Leave a Reply

Your email address will not be published. Required fields are marked *

Back to top button