ವಿನಯ ವಿಶೇಷ

ವಾರ ಭವಿಷ್ಯ ಓದಿ ನಿಮ್ಮ ವಿನಯವಾಣಿಯಲ್ಲಿ

ಜ್ಯೋತಿಷ್ಯರು ಗಿರಿಧರ ಶರ್ಮ
(ನಿಮ್ಮ ಸಮಸ್ಯೆಗಳಿಗೆ ಮುಕ್ತ ಸಮಾಲೋಚನೆಗಾಗಿ ಇಂದೇ ಕರೆ ಮಾಡಿ)
9945098262

ಈ ವಾರದ ಭವಿಷ್ಯ ನಿಮ್ಮ ವಿನಯವಾಣಿಯಲ್ಲಿ.

ಮೇಷ ರಾಶಿ
ಸ್ವಾವಲಂಬನೆಯ ಜೀವನದ ಸಾಧನೆಗಾಗಿ ವಿಶೇಷವಾದ ಕಾರ್ಯಗಳನ್ನು ಮಾಡಲು ಇಚ್ಛಿಸುವಿರಿ. ಆರ್ಥಿಕ ವ್ಯವಹಾರಗಳು ಮಧ್ಯಮ ಗತಿಯಲ್ಲಿ ಸಾಗಲಿದೆ. ಕುಟುಂಬದ ಆಂತರಿಕ ಕಲಹಗಳು ಹೆಚ್ಚಾಗುವ ಸಾಧ್ಯತೆ. ಉದ್ಯೋಗದಲ್ಲಿ ಉತ್ತಮ ವಾತಾವರಣ ಇರಲಿದೆ. ನಿಮ್ಮ ಕಚೇರಿ ಕಾರ್ಯಗಳು ಸಕಾರಾತ್ಮಕ ಫಲಿತಾಂಶ ತಂದು ಕೊಡಲಿದೆ. ಸಂಗಾತಿಯ ಮಾತುಗಳನ್ನು ಸ್ವಲ್ಪ ತಾಳ್ಮೆ ಇಟ್ಟು ಕೇಳುವುದು ಒಳ್ಳೆಯದು.
ಅದೃಷ್ಟ ಸಂಖ್ಯೆ 1
ಗಿರಿಧರ ಶರ್ಮ 9945098262

ವೃಷಭ ರಾಶಿ
ನಿಮ್ಮ ಒಡನಾಟಗಳು ಹೆಚ್ಚಾಗುವ ನಿರೀಕ್ಷೆಯಿದೆ. ಕೆಲಸದ ಬಗೆಗಿನ ನಿಮ್ಮ ದೃಷ್ಟಿಕೋನ ಆಲಸ್ಯದಿಂದ ಕೂಡಿರಬಹುದು. ನೀವು ನಿಮ್ಮ ಹಿತಕ್ಕಿಂತ ಪರರ ಕೆಲಸದಲ್ಲಿ ಹೆಚ್ಚಿನ ಆಸಕ್ತಿ ವಹಿಸಲಿದ್ದೀರಿ. ಕುಟುಂಬದ ಜೊತೆ ಕಾಲ ಕಳೆಯುವ ಅವಕಾಶಗಳು ಕಡಿಮೆಯಾಗಬಹುದು. ಚರ್ಚಾಕೂಟ ವಾದಗಳಲ್ಲಿ ನಿಮ್ಮ ಗೆಲುವು ಖಂಡಿತವಾಗಿ ಆಗಲಿದೆ. ನಿರುದ್ಯೋಗಿಗಳಿಗೆ ಅವಕಾಶಗಳು ಹೆಚ್ಚಳ ಆಗಲಿದೆ. ಕೆಲವು ಪರಿಸ್ಥಿತಿಗಳು ನಿಮಗೆ ಒಳ್ಳೆಯ ಅವಕಾಶ ತಂದುಕೊಡುತ್ತದೆ ಅಂತಹ ಸನ್ನಿವೇಶವನ್ನು ಸದುಪಯೋಗಪಡಿಸಿಕೊಳ್ಳಲು ಮುಂದಾಗುವುದು ಒಳಿತು.
ಅದೃಷ್ಟ ಸಂಖ್ಯೆ 6
ಗಿರಿಧರ ಶರ್ಮ 9945098262

ಮಿಥುನ ರಾಶಿ
ಆಕಸ್ಮಿಕವಾದ ವಿಷಯಗಳು ಹೆಚ್ಚು ಕಂಡುಬರುತ್ತದೆ. ನಿಮ್ಮ ಮಾನಸಿಕ ಕ್ಲೇಶಗಳಿಂದ ಹೊರಬರುವ ಸಾಧ್ಯತೆ ಕಾಣಬಹುದು. ಹೊಸದಾದ ಕೆಲಸಗಳನ್ನು ಪ್ರಾರಂಭ ಮಾಡಲು ಮುನ್ನುಡಿ ಬರೆಯಲಿದ್ದೀರಿ. ಶುಭ ಸುದ್ದಿಗಳಿಂದ ಲವಲವಿಕೆ ಹೆಚ್ಚಾಗಲಿದೆ ಹಾಗೂ ದೈವತ್ವಕ್ಕೆ ಧನ್ಯತಾ ಭಾವನೆಯಿಂದ ಬೇಡಿಕೊಳ್ಳುವಿರಿ. ಮೃದು ಮಾತಿನಿಂದ ಎಲ್ಲರ ಮನವನ್ನು ಗೆಲ್ಲಲು ಮುಂದಾಗಿ. ವಿದ್ಯಾರ್ಥಿಗಳಿಗೆ ವಿಪುಲ ಅವಕಾಶಗಳು ಸಿಗಲಿದೆ. ನೀವು ಆದಷ್ಟು ನಿರಾಶಾದಾಯಕ ವ್ಯಕ್ತಿಗಳೊಡನೆ ಸಂಬಂಧ ಕಡಿದುಕೊಳ್ಳುವುದು ಒಳ್ಳೆಯದು.
ಅದೃಷ್ಟ ಸಂಖ್ಯೆ 4
ಗಿರಿಧರ ಶರ್ಮ 9945098262

ಕರ್ಕಾಟಕ ರಾಶಿ
ನಿಮ್ಮ ಯೋಜಿತ ಜೀವನಶೈಲಿಯು ನಿರೀಕ್ಷಿತ ಮಟ್ಟದಲ್ಲಿ ಸುಧಾರಣೆಯಾಗಲಿದೆ. ಸರ್ಕಾರಿ ಕೆಲಸಗಳಲ್ಲಿ ಹೆಚ್ಚಿನ ಒತ್ತಡ ಕಾಣಬಹುದು. ಸಾಮಾಜಿಕ ಚಟುವಟಿಕೆಗಳಿಗೆ ಹೆಚ್ಚಿನ ಮನ್ನಣೆ ನೀಡುವಿರಿ. ಕಷ್ಟಕರವಾದಂತಹ ಕೆಲವು ಸನ್ನಿವೇಶಗಳನ್ನು ಎದುರಿಸಲು ಸಿದ್ಧರಾಗಿ. ಆತ್ಮಬಲ ಹಾಗೂ ಬುದ್ಧಿ ಬಲವನ್ನು ಉಪಯೋಗಿಸಿ ಕೆಲವು ಸಮಸ್ಯೆಗಳಿಗೆ ಪರಿಹಾರ ಹುಡುಕಿ. ವಿಶೇಷ ಸಂಗತಿಗಳಿಂದ ನಿಮ್ಮ ಮನವು ಹೊಸತನದ ಹಾದಿ ಹಿಡಿಯಲಿದೆ. ಲೇವಾದೇವಿ ವ್ಯವಹಾರಗಳು ನಿರೀಕ್ಷಿತ ಮಟ್ಟದಲ್ಲಿ ಕಾಣಸಿಗುವುದಿಲ್ಲ.
ಅದೃಷ್ಟ ಸಂಖ್ಯೆ 2
ಗಿರಿಧರ ಶರ್ಮ 9945098262

ಸಿಂಹ ರಾಶಿ
ನಡೆಯುವ ವಿಷಯಗಳನ್ನು ಸೂಕ್ತವಾಗಿ ವಿಮರ್ಶಿಸಿ. ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಿ. ಧ್ಯಾನ, ಯೋಗ, ವ್ಯಾಯಾಮದಂತಹ ಕ್ರಿಯಾತ್ಮಕ ಚಟುವಟಿಕೆಗಳಿಂದ ದಿನವನ್ನು ಆರಂಭಿಸಿ. ಕೆಲಸದಲ್ಲಿ ವಿಳಂಬ ಹೆಚ್ಚಾಗಲಿದೆ. ನಿಮ್ಮ ಆರಂಭ ಶೂರತ್ವವನ್ನು ಅಂತಿಮ ಕ್ಷಣದವರೆಗೂ ಕಾಯ್ದುಕೊಳ್ಳಲು ಪ್ರಯತ್ನಿಸಿ. ವೃತ್ತಿರಂಗದಲ್ಲಿ ಮಹತ್ವದ ಬದಲಾವಣೆ ಆಗಲಿದೆ. ಆತ್ಮೀಯ ವ್ಯಕ್ತಿಗಳ ಬಗ್ಗೆ ವಿಶೇಷ ಕಾಳಜಿ ವಹಿಸುತ್ತೀರಿ. ಬರಹಗಾರರಿಗೆ ಕವಿಗಳಿಗೆ ವಿಶೇಷ ಆಲೋಚನೆಗಳು ಮೂಡಲಿದೆ.
ಅದೃಷ್ಟ ಸಂಖ್ಯೆ 3
ಗಿರಿಧರ ಶರ್ಮ 9945098262

ಕನ್ಯಾ ರಾಶಿ
ಹೆಚ್ಚುವರಿ ಕೆಲಸದಿಂದ ಮನಸ್ಸಲ್ಲಿ ಬೇಸರ ಮೂಡಬಹುದು, ವಿಶ್ರಾಂತಿ ನಿಮಗೆ ಅಗತ್ಯವಾಗಿದೆ. ಕ್ರೀಡಾ ಚಟುವಟಿಕೆಗಳಲ್ಲಿ ಉತ್ತಮವಾದ ಪ್ರೋತ್ಸಾಹ ದೊರೆಯಲಿದೆ. ಉತ್ತಮ ಮಟ್ಟದ ಜನರ ಸಹವಾಸದಿಂದ ಮುಂದಿನ ಆಶಾದಾಯಕ ಜೀವನದ ಭವಿಷ್ಯವನ್ನು ರೂಪಿಸಿಕೊಳ್ಳುತ್ತೀರಿ. ಕೆಲಸದಲ್ಲಿ ವಿಶ್ವಾಸ ಹಾಗೂ ಪ್ರಗತಿಯ ಚಿಂತನೆಯನ್ನು ಕಾಣಲಿದ್ದೀರಿ. ಧನಲಾಭದ ಯೋಗವು ಸ್ಪಷ್ಟವಾಗಿ ಗೋಚರವಾಗಲಿದೆ. ಪ್ರೀತಿಪಾತ್ರ ರೊಡನೆ ಹೆಚ್ಚಿನ ಸಮಯ ಕಳೆಯಲು ಬಯಸುತ್ತೀರಿ. ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ಸಿಗಲಿದೆ.
ಅದೃಷ್ಟ ಸಂಖ್ಯೆ 2
ಗಿರಿಧರ ಶರ್ಮ 9945098262

ತುಲಾ ರಾಶಿ
ಪ್ರೀತಿ-ಪ್ರೇಮದ ಸಂಗತಿಗಳಲ್ಲಿ ಹೆಚ್ಚಿನ ಆಸಕ್ತಿ ಬರಲಿದೆ. ಪ್ರಯಾಣದ ಒತ್ತಡದಿಂದ ಆಯಾಸ ಹೆಚ್ಚಾಗುವ ಸಾಧ್ಯತೆ ಕಂಡುಬರುತ್ತದೆ. ಉಡುಗೊರೆಗಳು, ಪ್ರಶಸ್ತಿಗಳು ಕೆಲಸದ ನಡೆಯಿಂದ ನಿಮ್ಮ ಪಾಲಾಗಲಿದೆ. ಕುಟುಂಬದ ಕೆಲವು ವಿಷಯಗಳಲ್ಲಿ ಆತಂಕಕಾರಿ ಬೆಳವಣಿಗೆ ಕಂಡುಬರಬಹುದು. ನಿಮ್ಮ ಕೆಲವು ವರ್ತನೆ ಆತ್ಮೀಯರ ಸಂಕಷ್ಟಕ್ಕೆ ಕಾರಣವಾಗಬಹುದು. ಯಾವುದೋ ಹಳೆಯ ವಿಷಯಗಳಲ್ಲಿ ಹೆಚ್ಚಿನ ವಾದ ಮಾಡುತ್ತಾ ಕುಳಿತುಕೊಳ್ಳಬೇಡಿ, ಅನಗತ್ಯ ಚಿಂತನೆಗಳನ್ನು ತೆಗೆದುಹಾಕಿ. ಕೆಲವು ಹೂಡಿಕೆಗಳನ್ನು ಆಲೋಚಿಸಿ ಮಾಡುವುದು ಉತ್ತಮ.
ಅದೃಷ್ಟ ಸಂಖ್ಯೆ 6
ಗಿರಿಧರ ಶರ್ಮ 9945098262

ವೃಶ್ಚಿಕ ರಾಶಿ
ಮಕ್ಕಳ ಪ್ರಗತಿದಾಯಕ ಬೆಳವಣಿಗೆ ಕಂಡು ಹರ್ಷ ಉಲ್ಲಾಸ ಹೆಚ್ಚಾಗಲಿದೆ. ನಿಮ್ಮ ಮಾನಸಿಕ ಖಿನ್ನತೆ ಒತ್ತಡ ಜಂಜಾಟಗಳನ್ನು ತೆಗೆದುಹಾಕಲು ಪ್ರವಾಸದ ಚಿಂತನೆ ಮಾಡುವುದು ಅಗತ್ಯವಿದೆ. ಕೆಲವೊಂದು ಸುಳ್ಳುಗಳು ನಿಮ್ಮ ವ್ಯವಸ್ಥೆಯನ್ನು ಬುಡಮೇಲು ಮಾಡಬಹುದು ಎಚ್ಚರದಿಂದಿರಿ. ಆದಷ್ಟು ವೈಯಕ್ತಿಕ ವಿಷಯಗಳನ್ನು ಜಾಗೃತೆಯಿಂದ ಕಾಪಾಡಿಕೊಳ್ಳಿ. ನಿಮ್ಮ ವೈವಾಹಿಕ ಜೀವನ ಅದ್ಭುತವಾಗಿ ಸಾಗಲಿದೆ. ಪ್ರೀತಿಪಾತ್ರರ ಪ್ರೇಮ ನಿಮ್ಮ ಮೇಲೆ ಎಷ್ಟಿದೇ ಎಂಬುದನ್ನು ಅರಿತುಕೊಳ್ಳುವಿರಿ. ಕ್ರೀಡಾಸ್ಪೂರ್ತಿ ನಿಮ್ಮಲ್ಲಿ ಉತ್ತಮವಾಗಿ ಕಂಡುಬರುತ್ತದೆ.
ಅದೃಷ್ಟ ಸಂಖ್ಯೆ 6
ಗಿರಿಧರ ಶರ್ಮ 9945098262

ಧನಸ್ಸು ರಾಶಿ
ನಿಮ್ಮ ಜೀವನಮಟ್ಟ ಹಾಗೂ ಬುದ್ಧಿಮಟ್ಟವನ್ನು ನೀವೇ ಪರಾಮರ್ಶಿಸಿ ಕೊಳ್ಳುವಿರಿ. ಹಳೆಯ ವಸ್ತುಗಳಲ್ಲಿ ಅಭಿರುಚಿ ಹೆಚ್ಚಾಗಲಿದೆ. ಆಭರಣಗಳ ಹೂಡಿಕೆಗಳಿಂದ ಲಾಭಂಶ ಹೆಚ್ಚುತ್ತದೆ. ಕೆಲಸದಲ್ಲಿ ಹೆಚ್ಚುವರಿ ರಜೆಗಳನ್ನು ತೆಗೆದುಕೊಳ್ಳುವ ಪ್ರಸಂಗ ಬರಬಹುದು. ಪ್ರಣಯದ ಆಸಕ್ತಿ ನಿಮ್ಮನ್ನು ರೋಮಾಂಚನವಾಗಿರಿಸುತ್ತದೆ. ನಿಮ್ಮ ಜೊತೆ ಗಾರರ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕಲಿದ್ದೀರಿ. ಅಧಿಕ ಹಣಕಾಸಿನ ವೆಚ್ಚ ಮಾಡುವುದು ಒಳ್ಳೆಯದಲ್ಲ. ನಿಮ್ಮ ಸೃಜನಾತ್ಮಕ ಚಟುವಟಿಕೆಯಿಂದ ಉತ್ತಮವಾದದ್ದನ್ನು ಸಾಧಿಸಲಿದ್ದೀರಿ. ಹಣಕಾಸಿನ ಸ್ಥಿತಿ ನಿಮ್ಮ ಯೋಜಿತ ಕಾರ್ಯದಂತೆ ನಡೆಯಲಿದೆ. ಕೆಲಸಗಾರರ ಜೊತೆಯಲ್ಲಿ ಜಾಗೃತೆಯಿಂದ ವರ್ತಿಸಿ.
ಅದೃಷ್ಟ ಸಂಖ್ಯೆ 3
ಗಿರಿಧರ ಶರ್ಮ 9945098262

ಮಕರ ರಾಶಿ
ಕಥೆ-ಕವನ, ಹಳೆಯ ಹಾಡುಗಳು ನಿಮಗೆ ಇಷ್ಟವಾದ ಹವ್ಯಾಸ ವಾಗಲಿದೆ ಇವುಗಳು ನಿಮ್ಮ ಮನಸ್ಸನ್ನು ಏಕಾಗ್ರತೆ ಯಲ್ಲಿಡಲು ಸಹಕಾರಿಯಾಗುತ್ತದೆ. ಕೆಲವು ಒಪ್ಪಂದಗಳು ಮೇಲ್ನೋಟಕ್ಕೆ ಲಾಭಾಂಶವಾಗಿ ಕಂಡರು ಆಂತರಿಕವಾಗಿ ಪೊಳ್ಳು ಆಗಿರಬಹುದು ಎಚ್ಚರವಹಿಸಿ. ಸಾಲಕೊಡುವ ಪ್ರಸಂಗ ಬರಬಹುದು ಆದಷ್ಟು ವಿಚಾರಮಾಡಿ, ಆತುರದ ನಿರ್ಧಾರ ಬೇಡ. ನಿಜವಾದ ಪ್ರೀತಿಯ ಭಾವ ಪರವಶತೆಯಲ್ಲಿ ಆನಂದದಾಯಕ ಕ್ಷಣವನ್ನು ಅನುಭವಿಸಲಿದ್ದೀರಿ. ವೈವಾಹಿಕ ಜೀವನದ ಮರೆಯಲಾರದ ಕ್ಷಣಗಳು ನಿಮ್ಮದಾಗಲಿದೆ.
ಅದೃಷ್ಟ ಸಂಖ್ಯೆ 7
ಗಿರಿಧರ ಶರ್ಮ 9945098262

ಕುಂಭ ರಾಶಿ
ನಿಮ್ಮ ಸ್ವಭಾವ ಹಾಗೂ ಗುಣಗಳಿಂದ ಯಾವುದೇ ಸ್ಪರ್ಧೆಗಳಲ್ಲಿ ಉತ್ತಮವಾಗಿ ಹೊರಹೊಮ್ಮುವಿರಿ. ಪ್ರೇಮ ಪ್ರಸಂಗಗಳು ನಿಮ್ಮ ಮನಸ್ಸಿನ ಮೇಲೆ ಪರಿಣಾಮ ಬೀರಬಹುದು. ಸಾಮಾಜಿಕ ಕ್ಷೇತ್ರದಲ್ಲಿ ತೊಡಗುವ ಖಯಾಲಿ ಪ್ರಶಂಸೆ ತರಿಸುತ್ತದೆ. ನಿಮ್ಮ ದೊಡ್ಡಸ್ಥಿಕೆಗಾಗಿ ಇತರರ ಮೇಲೆ ಹೆಚ್ಚು ಖರ್ಚು ಮಾಡುವ ಸ್ವಭಾವವನ್ನು ತೆಗೆದುಹಾಕಿ. ಹಣಕಾಸಿನ ಕೆಲವು ವಿಷಯಗಳಿಗೆ ಮಧ್ಯವರ್ತಿಗಳನ್ನು ಆಹ್ವಾನಿಸುವುದು ತಪ್ಪಾಗಬಹುದು ಎಚ್ಚರವಿರಲಿ.
ಅದೃಷ್ಟ ಸಂಖ್ಯೆ 8
ಗಿರಿಧರ ಶರ್ಮ 9945098262

ಮೀನ ರಾಶಿ
ಸಮೂಹ ಕಾರ್ಯಚಟುವಟಿಕೆಗಳಿಂದ ಹೆಚ್ಚಿನ ಮಿತ್ರರನ್ನು ಸಂಪಾದಿಸುತ್ತೀರಿ. ಅಂದಿನ ಖರ್ಚು ಅಂದೆ ಎಂಬ ಮಟ್ಟಿನ ಸಿದ್ಧಾಂತದ ಜೀವನವನ್ನು ತೆಗೆದುಹಾಕಿ, ಬೆಳವಣಿಗೆಯ ದಾರಿ ಕಂಡುಕೊಳ್ಳಿ. ನಂಬಿಕಸ್ಥ ವ್ಯಕ್ತಿಗಳಿಂದ ಮನಸ್ಸಿಗೆ ಬೇಸರವಾಗುವ ಘಟನೆಗಳು ಜರುಗುವುದು. ತೆರಿಗೆ ಮತ್ತು ಹೂಡಿಕೆಗಳಲ್ಲಿ ವಿಶೇಷ ಗಮನ ನೀಡಬೇಕಾಗಿದೆ. ನಿಮ್ಮಲ್ಲಿನ ವಿಳಂಬ ಧೋರಣೆಯಿಂದ ವೃತ್ತಿ ಹಾಗೂ ಕಾರ್ಯಗಳ ವಿಷಯವಾಗಿ ತೊಂದರೆಯಾಗಬಹುದು ಎಚ್ಚರವಿರಲಿ. ಮನೆಯ ಸಮಸ್ಯೆಗಳಿಗೆ ಜಾಗರೂಕತೆಯಿಂದ ಪರಿಹಾರ ಹುಡುಕಿ. ಕಳೆದು ಹೋದ ವಸ್ತು ಆಕಸ್ಮಿಕವಾಗಿ ಸಿಗುವ ಭಾಗ್ಯ ನಿಮ್ಮದಾಗಿದೆ. ಕನಸಿನ ಹುಡುಗಿಯನ್ನು ಸಂಧಿಸುವ ಸಮಯ ಕಾಣಬಹುದು.
ಅದೃಷ್ಟ ಸಂಖ್ಯೆ 3
ಗಿರಿಧರ ಶರ್ಮ 9945098262

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಸ್ತ್ರೀ ಪುರುಷ ಪ್ರೇಮ ವಿಚಾರ, ಕುಟುಂಬ ಕಲಹ, ದೇಹಾರೋಗ್ಯ, ಮನಶಾಂತಿ, ಶತ್ರುಬಾಧೆ, ಸಾಲಭಾದೆ, ಇನ್ನಿತರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262

Related Articles

Leave a Reply

Your email address will not be published. Required fields are marked *

Back to top button