ಬಸವಭಕ್ತಿ
ವಿನಯವಾಣಿ ‘ವಚನ ಸಿಂಚನ’ : ಇರುಳು ಹಗಲೆಂದರಿಯದ ಅಂಧಕ…
ಇರುಳು ಹಗಲೆಂದರಿಯದ ಅಂಧಕನ ಕೈಯಲ್ಲಿ
ಕೈದೀವಿಗೆ ಇರ್ದಡೇನು, ಪಥಿವ ನೋಡಿ ನಡೆಯಬಲ್ಲನೆ ?
ಗುರುಚರಪರವನರಿಯದ ದುರಾಚಾರಿಯ ಕೈಯಲ್ಲಿ
ಲಿಂಗವಿರ್ದಡೇನು, ಅವ ಸತ್ಯಸದಾಚಾರವನುಳ್ಳ
ಭಕ್ತಿವಂತರಿಗೆ ಸರಿಯಹನೆ ?
ಅವನು ಶಿವಭಕ್ತನಾಗಿ ಕೆಟ್ಟುಹೋದ ತೆರನೆಂತೆಂದಡೆ:
ಭಕ್ತರ ಗೃಹದಲ್ಲಿ ತುಡುಗ ತಿಂದ ನಾಯಿ,
ಮರಳಿ ಮತ್ತೆ ಹೊಲಸಿಂಗೆರಗಿದ ತೆರನಾಯಿತೆಂದಕಲಿದೇವಯ್ಯ.
–ಮಡಿವಾಳ ಮಾಚಿದೇವ