ಸತೀಶ ಜಾರಿಕಿಹೊಳಿ ಅವರು ಸೋತರೂ ಗೆದ್ದಂತೆ- ಗೋಗಿ
ಸತೀಶ ಜಾರಿಕಿಹೊಳಿ ಅವರು ಸೋತರೂ ಗೆದ್ದಂತೆ- ಗೋಗಿ
ಯಾದಗಿರಿ : ಬೆಳಗಾವಿ ಲೋಕಸಭಾ ಚುನಾವಣೆಯಲ್ಲಿ ಸತೀಶ ಜಾರಿಕಿಹೊಳಿಯವರು ತೀವ್ರ ಸ್ಪರ್ಧೆವೊಡ್ಡಿದ್ದು, ದಿ.ಸುರೇಶ ಅಂಗಡಿ ಅವರು ಸ್ಪರ್ಧಿಸಿ ಸುಮಾರು 4 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಬಿಜೆಪಿ ಆಗ ಗೆದ್ದಿತ್ತು. ಆದರೆ ಈ ಬಾರಿ ಅನುಕಂಪದ ನಡುವೆಯೂ ಬಿಜೆಪಿ ಕೇವಲ 5 ಸಾವಿರ ಮತಗಳಿಂದ ಗೆದ್ದಿರುವದು ಗೆದ್ದು ಸೋತಂತಿದೆ. ಆದರೆ ಕಾಂಗ್ರೆಸ್ ಸೋತರೂ ಗೆದ್ದಂತೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಮಲ್ಲಪ್ಪ ಗೋಗಿ ತಿಳಿಸಿದ್ದಾರೆ.
ಕಾಂಗ್ರೆಸ್ ಹಿರಿಯ ನಾಯಕ ಸತೀಶ ಜಾರಕಿಹೊಳಿ ಅವರು ತೀವ್ರ ಸ್ಪರ್ದೆವೊಡ್ಡಿದ್ದು, ಅವರ ಶಕ್ತಿ ಎಷ್ಟಿದೆ ಎಂಬುದು ಬಿಜೆಪಿ ಅವರಿಗೆ ಈಗ ಅರಿವಿಗೆ ಬಂದಂತಿದೆ. ಸತೀಶ ಜಾರಕಿಹೊಳಿ ಸೋತರೂ ಗೆದ್ದಂತೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸತೀಶ ಜಾರಕಿಹೊಳಿ ಅವರು ಬೆಳಗಾವಿ ಜಿಲ್ಲೆಯಲ್ಲಿ ಉತ್ತಮ ಹೆಸರು ಹೊಂದಿದ್ದು, ಅವರ ಜಾತ್ಯತೀತ ತತ್ವ, ಸದಾ ಜನರೊಂದಿಗೆ ಬೆರೆಯುವ ಅವರ ಗುಣವೇ ಈ ಮಟ್ಟದಲ್ಲಿ ಮತಗಳಿಕೆ ಪಡೆಯುವಲ್ಲಿ ಅವರು ಯಶಸ್ವಿಯಾಗಿದ್ದಾರೆ.
ರಾಜ್ಯದಲ್ಲಿ ಚಿರಪರಿಚಿತರಾಗಿರುವ ಸತೀಶ ಜಾರಿಕಿಹೊಳಿಯವರು ತೀರ ಕಡಿಮೆ ಅಂತರದಲ್ಲಿ ಸೋಲು ಕಂಡಿರುವುದು ಆಶ್ಚರ್ಯವಾಗಿದ್ದರೂ ಜನತೆಯ ತೀರ್ಪಿಗೆ ಕಾಂಗ್ರೆಸ್ ತಲೆಬಾಗಲಿದೆ ಎಂದು ಅವರು ತಿಳಿಸಿದ್ದಾರೆ. ಈ ಬಾರಿ ಅನುಕಂಪದ ನಡುವೆಯೂ ಗೆಲ್ಲಲು ಒದ್ದಾಡಿರುವ ಬಿಜೆಪಿ ಮುಂದಿನ ಚುನಾವಣೆಯಲ್ಲಿ ಧೂಳಿಪಟವಾಗುವುದು ನಿಶ್ಚಿತವಾಗಿದೆ. ಸತೀಶ ಜಾರಕಿಹೊಳಿ ಎಂತಹ ಶಕ್ತಿ ಎಂಬುದು ಬಿಜೆಪಿಗೆ ಅರ್ಥವಾಗಿದೆ ಎಂದು ತಿಳಿಸಿದ್ದಾರೆ.