ಪ್ರಮುಖ ಸುದ್ದಿ
ವೈನ್ಸ್ ಶಾಪ್ ಗೆ ನುಗ್ಗಿದ ಖದೀಮರು, ಗಾರ್ಡ್ ಮೇಲೆ ಮಾರಣಾಂತಿಕ ಹಲ್ಲೆ
ಗಾರ್ಡ್ ಮೇಲೆ ಮಾರಾಣಾಂತಿಕ ಹಲ್ಲೆ, ಹಣ ದೋಚಿ ಪರಾರಿ
ಗಾಣಗಾಪುರಃ ವೈನ್ ಶಾಪ್ ವೊಂದಕ್ಕೆ ನುಗ್ಗಿದ 15 ಜನರ ದರೋಡೆಕೋರರ ತಂಡ, ಅಲ್ಲಿನ ಗಾರ್ಡ್ ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಅಲ್ಲದೆ 11 ಸಾವಿರ ನಗದು ಮತ್ತು ಮಧ್ಯದ ಬಾಟಲಿಗಳನ್ನು ಕದ್ದೊಯ್ದ ಘಟನೆ ಗಾಣಗಾಪುರದ ಮಹಾದೇವ ಗುತ್ತೇದಾರ ಅವರಿಗೆ ಸೇರಿದ್ದ ವೈನ್ಸ್ ಶಾಪ್ ನಲ್ಲಿ ನಿನ್ನೆ ರಾತ್ರಿ ನಡೆದಿದೆ.
ಏಕಾಏಕಿ ರಾತ್ರಿ ವೈನ್ಸ್ ಗೆ ಬಂದ ತಂಡ ಗಾರ್ಡ್ ಗಳ ಮೇಲೆ ಹಲ್ಲೆ ನಡೆಸಿದ್ದು, ದುಡ್ಡು, ಮಧ್ಯದ ಬಾಟಲಿಗಳನ್ನು ತೆಗೆದುಕೊಂಡು ಹೋಗಿದ್ದಾರೆ.
ದರೋಡೆಕೋರರ ಅಟ್ಟಹಾಸ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ.
ಈ ಕುರಿತು ಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.