ಶಾಲಾ ಗೋಡೆಗಳ ಮೇಲೆ ಬರಹ ವಿದ್ಯಾರ್ಥಿನಿಯರಿಗೆ ಕಿರುಕುಳ
ವ್ಯಾಲೆಂಟೆನ್ಸ್-ಡೇ ಪ್ರಭಾವ- ಪ್ರೀತಿ ಪ್ರಭಾವಳಿ ತಂದ ಆತಂಕ
ಯಾದಗಿರಿಃ ವಿದೇಶಿ ಮೂಲಕ ಬರಮಾಡಿಕೊಂಡ ಪ್ರೇಮಿಗಳೆಂಬ ದಿನಾಚರಣೆ ಇಂದು ಪುಂಡಾಟಿಕೆಗೆ ಕಾರಣವಾಗುತ್ತಿದೆ. ಸರ್ಕಾರಿ ಪ್ರೌಢ ಶಾಲೆವೊಂದರಲ್ಲಿ ಬುಧವಾರ ಪ್ರೇಮಿಗಳ ದಿನಾಚರಣೆ ದಿನ ಶಾಲೆಯ ಗೋಡೆ ಮೇಲೆ ಹುಡುಗರು ವಿದ್ಯಾರ್ಥಿನಿಯರ ಹೆಸರುಗಳನ್ನು ಬರೆಯುವ ಮೂಲಕ ಅಷ್ಟೆ ಅಲ್ಲದೆ ಪ್ರಪೋಜ್ ಮಾಡುವ ಮೂಲಕ ಮುಜುಗರಕ್ಕೆ ಒಳಗಾಗುವಂತೆ ಮಾಡಿದ ಘಟನೆ ಜಿಲ್ಲೆಯ ಶಹಾಪುರ ತಾಲೂಕಿನ ಸಗರ ಗ್ರಾಮದಲ್ಲಿ ನಡೆದಿದೆ.
ಶಾಲೆಯ ಒಳ ಭಾಗದ ಕೋಣೆಯ ಗೋಡೆಗಳ ಮೇಲೆ ಶೌಚಾಲಯದ ಗೋಡೆಗಳ ಮೇಲೆ ಪ್ರೇಮಿಗಳ ದಿನಾಚರಣೆ ಅಂಗವಾಗಿ ಐ ಲವ್ ಯು ಎಂದು ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರ ಹೆಸರಗಳು ಅಸಹ್ಯವಾಗಿ ಬರೆದಿರುವ ಕಾರಣ ಈ ವಿಷಯ ಸಾಕಷ್ಟು ಚರ್ಚೆಗೆ ಮತ್ತು ಪಾಲಕರ ಚಿಂತೆಗೆ ಕಾರಣವಾಗಿದೆ ಎಂದರೆ ತಪ್ಪಿಲ್ಲ. ಅಲ್ಲದೆ ವಿದ್ಯಾರ್ಥಿಗಳು ಕೆಲ ವಿದ್ಯಾರ್ಥಿನಿಯರಿಗೆ ಪ್ರಪೋಸ್ ಮಾಡಿದ್ದಾರಂತೆ. ಇದರಿಂದ ವಿದ್ಯಾರ್ಥಿನಿಯರು ಗಲಿಬಿಲಿಗೊಂಡ ಘಟನೆಯೂ ಜರುಗಿದೆ.
ಇನ್ನೂ ಎಂಟರಿಂದ ಹತ್ತನೇ ತರಗತಿಯಲ್ಲಿ ಅಭ್ಯಾಸ ಮಾಡುವ ವಿದ್ಯಾರ್ಥಿಗಳಲ್ಲಿ ಇಂತಹ ಭಾವನೆ ಬರಲು ಕಾರಣವಾದರೂ ಏನು ಎಂಬುದು ಶಾಲಾ ಶಿಕ್ಷಕರಲ್ಲದೆ ಪಾಲಕರು ಯೋಚಿಸುವುದು ಬಹು ಮುಖ್ಯವಿದೆ. ಪ್ರೀತಿ ಪ್ರೇಮ ಹೆಸರಿನಲ್ಲಿ ಬದುಕಿನ ಬಗ್ಗೆ ಒಂದಂಶವು ಗೊತ್ತಿರದ ಮುಗ್ಧ ಮಕ್ಕಳು ಹಾಳಾಗುತ್ತಿವೆ. ಶಾಲೆಯಲ್ಲಿ ವಿದ್ಯಾರ್ಥಿಯೋರ್ವ ತನ್ನ ಸಹಪಾಠಿ ವಿದ್ಯಾರ್ಥಿನಿಗೆ ಇಂದು ನಾ ನಿನ್ನ ಪ್ರೀತಿಸುವೆ ಎಂದು ಪ್ರಪೋಜ್ ಮಾಡಿದ್ದಾನೆನಂತೆ, ಇದನ್ನು ಕೇಳಿ ಪಾಲಕರು ಮನಸ್ಸು ಹೇಗಾಗಿರಬಾರದು. ಇದು ಮಕ್ಕಳಾಟವಲ್ಲ. ಗಂಡಿರಲಿ ಹೆಣ್ಣಿರಲಿ ಅವರವರ ಪಾಲಕರು ಇಂತಹ ವಿಷಯಗಳ ಬಗ್ಗೆ ಸಮರ್ಪಕ ನೀತಿ ಬೋಧನೆ ಅಗತ್ಯವಿದೆ.
ಇದಕ್ಕೆಲ್ಲ ಸಿನಿಮಾ, ಟಿವಿ ಮೊಬೈಲ್‍ಗಳೇ ಮುಖ್ಯ ಕಾರಣವೆನ್ನಬಹುದು. ಆದರೆ ಶಾಲೆಯಲ್ಲಿ ನೀತಿ ಪಾಠ ಮಾಡುವುದು ಅಷ್ಟೆ ಮುಖ್ಯವಾಗಿದೆ. ಪ್ರೇಮಿಗಳ ದಿನಾಚರಣೆ ಹೆಸರಲ್ಲಿ ಸಾಕಷ್ಟು ಮಕ್ಕಳು ಹಾಳಾಗುತ್ತಿವೆ. ಮನೆಯಲ್ಲಿ ಪಾಲಕರು ಶಾಲೆಯಲ್ಲಿ ಶಿಕ್ಷಕರು ಉತ್ತಮ ಸಂಸ್ಕೃತಿ ಸಂಸ್ಕಾರ ಕಲಿಸುವುದು ಬಹುಮುಖ್ಯವಿದೆ.
ರಾತ್ರಿಯಾದಂತೆ ಪುಂಡಪೋಕರಿಗಳ ತಾಣ ಈ ಶಾಲೆ
ತಾಲೂಕಿನ ಸಗರ ಗ್ರಾಮದ ಸರ್ಕಾರಿ ಪ್ರೌಢ ಶಾಲೆ ರಾತ್ರಿಯಾಗುತ್ತಿದ್ದಂತೆ ಪುಂಡಪೋಕರಿಗಳ ತಾಣವಾಗುತ್ತಿದೆ. ನಿತ್ಯ ಬೆಳಗ್ಗೆ ಶಾಲೆಗೆ ಬರುವ ಮಕ್ಕಳು ಶಾಲಾ ಆವರಣದಲ್ಲಿ ಕುಡಿದು ಎಸೆದ ಮಧ್ಯದ ಬಾಟಲಿಗಳನ್ನು ತೆಗೆದು ಬಿಸಾಕಿಯೇ ಶಾಲಾ ಕೋಣೆಗಳಗೆ ತೆರಳಬೇಕು. ಅಂತಹ ಸ್ಥಿತಿ ಗ್ರಾಮದ ಶಾಲೆಗಳಲ್ಲಿ ನಿರ್ಮಾಣವಾಗಿದೆ.
ಹಿಂದೆಯಲ್ಲಿ ರಾತ್ರಿ ಶೌಚವು ಮಾಡಿದ ಘಟನೆಗಳು ನಡೆದಿವೆ. ಸಾಕಷ್ಟು ಬಾರಿ ಈ ಕುರಿತು ಗ್ರಾಮದಲ್ಲಿ ತಿಳಿ ಃಏಳೀದರು ಪೋಕರಿಗಳು ತಮ್ಮ ಆಟ ಬಿಟ್ಟಿಲ್ಲ. ಅಲ್ಲದೆ ನಿತ್ಯ ಈ ಶಾಲೆ ಮುಂದೆ ಪುಂಡರ ಕಾಟ ಜಾಸ್ತಿಯಾಗುತ್ತಿದೆ. ಎಸ್ಸೆಸ್ಸೆಲ್ಸಿಗೆ ಶಾಲೆ ಬಿಟ್ಟು ಮನೆ ಸೇರಿದ ಬಹುತೇಕರು ಈ ಶಾಲೆ ಬಳಿ ಜಮಾಯಿಸಿ ವಿದ್ಯಾರ್ಥಿನಿಯರಿಗೆ ಇಲ್ಲದ ಕಿರಿಕಿರಿ ನೀಡುವುದು ಸಾಮಾನ್ಯವಾಗಿದೆ.
ಹೀಗಾಗಿ ಸ್ಥಳೀಯ ಪೊಲಿಸರು ಈ ಕುರಿತು ಕ್ರಮಕೈಗೊಳ್ಳಬೇಕಾಗಿದೆ. ಶಾಲಾ ಕಾಲೇಜಿಗೆ ವಿದ್ಯಾರ್ಥಿನಿಯರನ್ನು ಕಳುಹಿಸಲು ಪಾಲಕರು ಆತಂಕ ಪಡುವ ಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ಪಾಲಕರು.