ಪ್ರಮುಖ ಸುದ್ದಿ
ದರ್ಶನಾಪುರ ಗುಣಮುಖವಾಗಲಿ – ದರ್ಗಾದಲ್ಲಿ ಪ್ರಾರ್ಥನೆ
ದರ್ಶನಾಪುರ ಶೀಘ್ರ ಚೇತರಿಸಿಕೊಂಡು ಸೇವೆಗೆ ಮರಳಲಿ
ಶಹಾಪುರಃ ಸ್ಥಳೀಯ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಅವರಿಗೆ ಕೋವಿಡ್ ದೃಢಪಟ್ಟ ಹಿನ್ನೆಲೆ ಕಲಬುರ್ಗಿಯ ಖಾಸಗಿ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಪಡೆಯುತ್ತಿದ್ದು, ಅವರ ಅಭಿಮಾನಿ ಬಳಗ ಆಶ್ರಯ ಕಮೀಟಿ ಅಧ್ಯಕ್ಷ ವಸಂತಕುಮಾರ ಸುರಪುರಕರ್ ಅವರು ನಗರದ ಹಜರತ್ ಸಯ್ಯದ್ ಸಾಲರಾಸಾಬ ದರ್ಗಾದಲ್ಲಿ ಅವರ ನೆಚ್ಚಿನ ನಾಯಕ ದರ್ಶನಾಪುರ ಅವರು ಶೀಘ್ರದಲ್ಲಿ ಗುಣಮುಖರಾಗಿ ಜನ ಸೇವೆಗೆ ಮತ್ತೆ ಮರಳಲಿ ಎಂದು ಪ್ರಾರ್ಥನೆ ಸಲ್ಲಿಸಿದರು.
ಸಾಲಾರಸಾಬ ದರ್ಗಾದಲ್ಲಿ ಹೂ, ಸಕ್ಕರೆ ಧೂಪ, ಗಂಧ ಸಲ್ಲಿಸಿದ ಅವರು, ದರ್ಶನಾಪುರ ಅವರು ಕೋವಿಡ್‍ನಿಂದ ಚೇತರಿಸಿಕೊಂಡು ಗುಣಮುಖರಾಗಲಿ ಎಂದು ಪ್ರಾರ್ಥನೆ ಸಲ್ಲಿಸಿದೆ. ಇತರರು ಅವರ ಜೊತೆಗಿದ್ದರು.