ಪಾದಯಾತ್ರೆ ನಿಲ್ಲಿಸಲು ಹೈಕಮಾಂಡ್ ಸ್ಪಷ್ಟ ಸೂಚನೆ

ಪಾದಯಾತ್ರೆ ನಿಲ್ಲಿಸಲು ಹೈಕಮಾಂಡ್ ಸ್ಪಷ್ಟ ಸೂಚನೆ
ಬೆಂಗಳೂರಃ ಮೇಕೆದಾಟು ಯೋಜನೆಗೆ ಆಗ್ರಹಿಸಿ ಕರ್ನಾಟಕದಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪಾದಯಾತ್ರೆ ನಿಲ್ಲಿಸಲು ಕಾಂಗ್ರೆಸ್ ಹೈಕಮಾಂಡ್ ಸ್ಪಷ್ಟ ಸಂದೇಶ ನೀಡಿದೆ.
ಕಾಂಗ್ರೆಸ್ ನ ರಣದೀಪ ಸುರ್ಜೆವಾಲ ಮೂಲಕ ರಾಜ್ಯ ಕಾಂಗ್ರೆಸ್ ನಾಯಕರಿಗೆ ಸಂದೇಶ ರವಾನೆ ಮಾಡಿದ್ದಾರೆ. ಹೀಗಾಗಿ ಕಾಂಗ್ರೆಸ್ ನ ಡಿಕೆ ಸಹೋದರರು ಹಾಗೂ ಮಾಜಿ ಸಿಎಂ ಸಿದ್ರಾಮಯ್ಯ ನವರು ಹೈಕಮಾಂಡ್ ಸಂದೇಶ ಪಾಲಿಸಬೇಕಿದೆ. ಆ ಹಿನ್ನೆಲೆ ಪಾದಯಾತ್ರೆಯಲ್ಲಿ ಭಾಗವಹಿಸಿದ ಪ್ರಮುಖರು ಸಭೆ ಸೇರಿದ್ದು ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬುದು ಕಾದು ನೋಡಬೇಕು.
ಕೆಲ ಕಾಂಗ್ರೆಸ್ ನಾಯಕರು ಅಧಿಕೃತ ಕೋರ್ಟ್ ಆದೇಶ ಬರುವವರಿಗೆ ಪಾದಯಾತ್ರೆ ನಿಲ್ಲಿಸಬಾರದು ಎಂಬ ಚರ್ಚೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಒಂದಡೆ ಕೋರ್ಟ್ ನಿನ್ನೆ ಛಾಟಿ ಬಿಸಿ ಮುಟ್ಟಿಸಿದರೂ ಉದ್ಧಟತನ ಸರಿಯಲ್ಲ ಮಾತುಗಳು ಸಹ ಕೇಳಿ ಬರುತ್ತಿವೆ ಎನ್ನಲಾಗಿದೆ.
ಡಿಕೆಶಿ ಕೇವಲ 5 ಜನವಾದರೂ ಪಾದಯಾತ್ರೆ ಮುಂದುವರೆಸುತ್ತೇವೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಹೀಗಾಗಿ ಕಾದು ನೋಡಬೇಕಿದೆ. ಕೋವಿಡ್ ತೀವ್ರತೆ ಹರಡುತ್ತಿರುವ ಸಂದರ್ಭ ಇದು ಬೇಕಿರಲಿಲ್ಲ ಎಂಬ ಮಾತುಗಳು ಎಲ್ಲಡೆ ಪ್ರತಿಧ್ವನಿಸುತ್ತಿರುವದು ಗಮನ ಹರಿಸಬೇಕಾಗಿದೆ.