ಧರ್ಮ ವೀರಶೈವ ಲಿಂಗಾಯತ, ಜಾತಿ ವೀರಶೈವ ಅಥವಾ ಲಿಂಗಾಯತ ಬರೆಸಲು ಆರಬೋಳ, ಮಡ್ನಾಳ ಜಂಟಿ ಕರೆ
ಜಾತಿಗಣತಿಃ ಸಮುದಾಯ ಸಮರ್ಪಕವಾಗಿ ಭಾಗಿಯಾಗಿ ಸೂಚಿತ ಹೆಸರುಗಳನ್ನೆ ತುಂಬಿ

ಧರ್ಮ ವೀರಶೈವ ಲಿಂಗಾಯತ, ಜಾತಿ ವೀರಶೈವ ಅಥವಾ ಲಿಂಗಾಯತ ಬರೆಸಲು ಆರಬೋಳ, ಮಡ್ನಾಳ ಜಂಟಿ ಮನವಿ
ವಿನಯವಾಣಿ
ಶಹಾಪುರಃ ಸೆ.22 ಜಾತಿ ಗಣತಿ ಆರಂಭವಾಗಲಿದ್ದು, ನಮ್ಮ ಸಮುದಾಯದ ಸರ್ವರೂ ಎಚ್ಚೆತ್ತುಕೊಂಡು ಧರ್ಮದ ಕಾಲಂನಲ್ಲಿ ವೀರಶೈವ ಲಿಂಗಾಯತ ಮತ್ತು ಜಾತಿ ಕಾಲಂನಲ್ಲಿ ವೀರಶೈವ ಅಥವಾ ಲಿಂಗಾಯತ ಎಂದು ಬರೆಸಬೇಕು ಅಲ್ಲದೆ ಉಪ ಜಾತಿ ಕಾಲಂನಲ್ಲಿ ತಮ್ಮ ಉಪಜಾತಿ ನಮೂದಿಸಬೇಕೆಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭಾದ ತಾಲೂಕು ಅಧ್ಯಕ್ಷ ಸಿದ್ದು ಆರಬೋಳ ಮತ್ತು ಯುವ ಘಟಕ ಅಧ್ಯಕ್ಷ ರಾಜೂ ಪಾಟೀಲ್ ಮಡ್ನಾಳ ಜಂಟಿಯಾಗಿ ಮನವಿ ಮಾಡಿದ್ದಾರೆ.
ಸ್ಪಷ್ಟವಾಗಿ ಧರ್ಮದ ಕಾಲಂನಲ್ಲಿ ವೀರಶೈವ ಲಿಂಗಾಯತ (ಇತರೆ) ಎಂದು ಬರೆಸಬೇಕು. ಜಾತಿ ಕಾಲಂ ಕೋಡ್ 0832 ಅಥವಾ 1522 ಪರೀಕ್ಷಿಸಿ ಬರೆಸಬೇಕು. ಜಾತಿ ಗಣತಿಯಲ್ಲಿ ಈ ಕುರಿತು ಸ್ಪಷ್ಟ ಸಂದೇಶ ನೀಡಬೇಕಿದೆ. ಉಪ ಜಾತಿ ಕಾಲಂನಲ್ಲಿ ಜಾತಿಗಳಾದ ರಡ್ಡಿ, ಜಂಗಮ, ಕುಂಬಾರ, ಬಣಜಿಗ, ಹೂಗಾರ ಇತರೆ ಉಪಜಾತಿಗಳನ್ನು ನಮೂದಿಸಬೇಕು. ಆ ನಿಟ್ಟಿನಲ್ಲಿ ವೀರಶೈವ ಲಿಂಗಾಯತ ಧರ್ಮದ ಜನ ಸಂಖ್ಯೆ ನಿಖರವಾಗಿ ತಿಳಿಯಲು ಅನುಕೂಲ ವಾಗಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.