ನೂತನ ವರ್ಷಕ್ಕೆ ವಿವಿಧ ಬಗೆಯ ಕೇಕ್‍ಗಳ ಲಗ್ಗೆ
ನೂತನ ವರ್ಷಾಚಾರಣೆಗೆ ಭರ್ಜರಿ ಕೇಕ್ ಮಾರಾಟ
ಕೇಕ್ ಮಾರಾಟದಲ್ಲಿ ಈ ವರ್ಷ ಹೆಚ್ಚಳ, ಕೇಕ್ ಗುಣಮಟ್ಟದಂತೆ ದರ ನಿಗದಿ
@ ಮಲ್ಲಿಕಾರ್ಜುನ ಮುದ್ನೂರ
ಯಾದಗಿರಿ, ಶಹಾಪುರಃ ನೂತನ ವರ್ಷ 2020ರ ಸ್ವಾಗತಕ್ಕೆ ನಗರದ ಹಲವು ಬೇಕರಿಗಳ ಮುಂದೆ ಸಾಲು ಸಾಲು ಜನ ಕೇಕ್ ಖರೀದಿಗೆ ಮುಗಿ ಬಿದ್ದಿದ್ದಾರೆ. ಸಾವಿರಾರು ವಿವಿಧ ರೂಪದ ಕೇಕ್‍ಗಳು ಮಾರಾಟಕ್ಕೆ ಲಗ್ಗೆ ಇಟ್ಟಿವೆ.
ನೂತನ ವರ್ಷ ಆಚರಣೆಗೆ ಬೇಕಾದ ಕೇಕ್‍ಗಳನ್ನು ಕೆಲವರು ಮುಂಚಿತವಾಗಿ ಆರ್ಡರ್ ಮಾಡಿದರೆ, ಇನ್ನೂ ಕೆಲವರು ಮಂಗಳವಾರ ಬೆಳಗ್ಗೆಯಿಂದ ಆರ್ಡರ್ ನೀಡಿದ್ದಾರೆ ಎನ್ನುತ್ತಾರೆ ಬೇಕರಿ ಮಾಲೀಕರು.
ಅಲ್ಲದೆ ಮುಂಗಡವಾಗಿ ಬೇಕರಿ ವ್ಯಾಪಾರಿಗಳು ಹೊಸ ವರ್ಷಾಚಾರಣೆಗೆ ಭರ್ಜರಿ ಕೇಕ್ ಮಾರಾಟವಾಗುವದನ್ನು ಕಂಡುಕೊಂಡಿದ್ದ ಅವರುಗಳು ವಾರದ ಹಿಂದಿನಿಂದಲೇ ವಿನೂತನ ಬಣ್ಣ ಬಣ್ಣದ ವಿವಿಧ ರೂಪದ ಮಾದರಿ ಕೇಕ್‍ಗಳನ್ನು ಮಾರಾಟಕ್ಕೆ ಪೂರ್ವ ತಯಾರಿ ಮಾಡಿಕೊಂಡಿದ್ದರು.
ಮಂಗಳವಾರ ಸಂಜೆ ಗುಂಪು ಗುಂಪಾಗಿ ಬಂದು ಇಷ್ಟದ ಕೇಕ್‍ಗಳನ್ನು ಜನರು ಖರೀದಿಸುತ್ತಿದ್ದಾರೆ. ನಗರದ ಎಲ್ಲಾ ಬೇಕರಿಗಳಲ್ಲಿ ಭರ್ಜರಿ ವ್ಯಾಪಾರ ವಹಿವಾಟು ನಡೆದಿರುವದು ಕಂಡು ಬಂದಿತು.
ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚಿನ ವಹಿವಾಟು ಕಂಡು ಬಂದಿದೆ ಎನ್ನುತ್ತಾರೆ ಬೇಕರಿ ವ್ಯಾಪಾರಿಗಳು. ಯುವಕರು, ಯುವತಿಯರು ಅಲ್ಲದೆ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ದೊಡ್ಡ ದೊಡ್ಡ ಕೇಕ್‍ಗಳಿಗೆ ಆರ್ಡರ್ ನೀಡಿದ್ದಾರೆ.
ಮಂಗಳವಾರ ರಾತ್ರಿ ಕೇಕ್ ಕಟ್ ಮಾಡಿ ನೂತನ ವರ್ಷ ಸ್ವಾಗತಿಸುವವರು ಹಲವರಿದ್ದರೆ, ಬುಧವಾರ ಬೆಳಗ್ಗೆ ಶಾಲಾ ಕಾಲೇಜುಗಳಲ್ಲಿ ತಮ್ಮ ಶಿಕ್ಷಕರಿಂದ ಕೇಕ್ ಕಟ್ ಮಾಡಿಸಿ ನೂತನ ವರ್ಷವನ್ನು ಸ್ವಾಗತಿಸುವ ಕಾರ್ಯಕ್ರಮಗಳಿಗೆ ಆರ್ಡರ್ ಬಂದಿವೆ.
ಇನ್ನೂ ಕೆಲವರು ಫ್ಯಾಮಿಲಿ ಸಮೇತ ಮನೆಯಲ್ಲಿ ಕೇಕ್ ಕಟ್ ಮಾಡಿ ಚಿಕ್ಕ ಮಕ್ಕಳೊಂದಿಗೆ ಆಚರಿಸಲಿದ್ದಾರೆ ಹೀಗಾಗಿ ಪಾಲಕರು ಕೇಕ್ ಒಯ್ಯುತ್ತಿದ್ದಾರೆ ಎನ್ನುತ್ತಾರೆ ಬೇಕರಿ ಸಿಬ್ಬಂದಿ. ಹೀಗಾಗಿ ನಗರವೊಂದರಲ್ಲಿಯೇ ಲಕ್ಷಾನುಗಟ್ಟಲೇ ಕೇಕ್ ಮಾರಾಟ ವಹಿವಾಟು ನಡೆಯುತ್ತಿದೆ. ಒಂದೊಂದು ಬೇಕರಿಯಲ್ಲಿ ಕನಿಷ್ಟ ಲಕ್ಷ ರೂ.ಗಿಂತ ಹೆಚ್ಚಿನ ವಹವಾಟು ನಡೆಯಲಿದೆ ಎಂದು ಅಂದಾಜಿಸಲಾಗಿದೆ. ಕಳೆದ ವರ್ಷದಲ್ಲಿ ಇದೇ ರೀತಿ ಕೇಕ್‍ಗಳು ಬಿಕರಿಯಾಗಿದ್ದವು. ಈ ವರ್ಷ ಅದಕ್ಕಿಂತ ಹೆಚ್ಚಿನ ವಹಿವಾಟು ನಡೆಯಲಿದೆ ಎಂದು ಹೇಳಲಾಗುತ್ತಿದೆ.
ನಗರದ ಶ್ರೀನಿವಾಸ ಬೇಕರಿ, ಪಾಪ್ಯೂಲರ ಬೇಕರಿ ಮತ್ತು ನಿವ್ ಪಾಪ್ಯುಲರ್, ಕರ್ನಾಟಕ ಬೇಕರಿಗಳಲ್ಲಿ ಜನರು ಕೇಕ್ ಖರೀದಿಗೆ ಮುಗಿ ಬಿದ್ದಿರುವದು ಕಂಡು ಬಂದಿತು. ವೆನಿಲಾ, ಚಾಕಲೇಟ್, ಐಸ್ ಕೇಕ್, ಫ್ರೂಟ್ಸ್ ಕೇಕ್ ಸೇರಿದಂತೆ ಬಗೆ ಬಗೆ ಟೇಸ್ಟಿಯ ಕೇಕ್ ಗಳು ಎಲ್ಲಡೆ ಭ್ಯವಿದೆ. 200, 240 ರಿಂದ 1000 ರೂ.ಕೆಜಿವರೆಗೂ ಕೇಕ್ ಗಳು ಮಾರಾಟಕ್ಕಿವೆ.
ಅದೇ ರೀತಿ ಬಾರ್ ಆಂಡ್ ರೆಸ್ಟೋರೆಂಟ್‍ಗಳಲ್ಲೂ ಹೊಸ ವರ್ಷಾಚಾರಣೆಗೆ ಯುವಕರು ಮುಂಚಿತವಾಗಿ ಟೇಬಲ್‍ಗಳನ್ನು ಕಾಯ್ದಿರಿಸಿದ್ದಾರೆ. ಕೆಲವರು ವಸತಿ ಗೃಹಗಳಲ್ಲಿ ಕೋಣೆಗಳನ್ನು ಬುಕ್ ಮಾಡಿದ್ದು, ಸ್ನೇಹಿತರು ಸೇರಿ ಗುಂಡು ತುಂಡಿನ ಪಾರ್ಟಿಗಳು ಸಹ ನಡೆಯಲಿವೆ. ಒಟ್ಟಾರೆ ಹೊಸ ವರ್ಷ ಶಾಂತವಾಗಿ ಸಂತಸವಾಗಿ ಯಾವುದೇ ಅಹಿಕತರ ಘಟನೆ ನಡೆಯದಂತೆ ಸ್ವಾಗತಿಸಲಿ.
ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಿನ ಕೇಕ್ ಆರ್ಡಗಳು ಬಂದಿವೆ. ಎಲ್ಲಾ ಕಡೆ ನೂತನ ವರ್ಷಾಚಾರಣೆ ಅಂಗವಾಗಿ ಕೇಕ್‍ಗಳನ್ನು ಆರ್ಡರ್ ಮಾಡಿದ್ದಾರೆ. ಕನಿಷ್ಟ ಒಂದು ಕೇಜಿಯಿಂದ ಐದು ಕೆಜಿ 10 ಕೆಜಿ ಕೇಕ್‍ಗಳನ್ನು ಒಯ್ಯುತ್ತಿದ್ದಾರೆ. ಒಂದು ಮತ್ತು ಎರಡು ಕೆಜಿ ಕೇಕ್ ಅತಿ ಹೆಚ್ಚು ಮಾರಾಟ ಇವೆ. ಆಯಾ ಕೇಕ್ ಗುಣಮಟ್ಟದ ಅನುಸಾರ ದರ ನಿಗದಿ ಮಾಡಲಾಗಿದೆ.
-ಶ್ರೀನಿವಾಸ ಶೆಟ್ಟಿ. ಶ್ರೀನಿವಾಸ ಬೇಕರಿ ಮಾಲೀಕ.