ನೂತನ ಲೆಕ್ಕಾಧಿಕಾರಿಗಳಿಗೆ ಶುಭ ಕೋರಿದ ಡಿಸಿ ಕೂರ್ಮಾರಾವ್
ಲೆಕ್ಕಾಧಿಕಾರಿಗಳು ಶಿಬಿರದಲ್ಲಿ ಭಾಗವಹಿಸಿ ಜವಬ್ದಾರಿ ಅರಿಯಿರಿ- ಡಿಸಿ ಕೂರ್ಮಾರಾವ್
ಯಾದಗಿರಿಃ ನೂತನವಾಗಿ ಗ್ರಾಮ ಲೆಕ್ಕಾಧಿಕಾರಿ ಹುದ್ದೆಗೆ ನೇಮಕಗೊಂಡವರಿಗಾಗಿ ಕರ್ತವ್ಯ ಮತ್ತು ಜವಬ್ದಾರಿ ಸೇರಿದಂತೆ ಇತರೆ ಕಾರ್ಯವೈಖರಿ ತಿಳಿಸಿಕೊಡುವ ಉದ್ದೇಶದಿಂದ ತರಬೇತಿ ಶಿಬಿರ ಆಯೋಜಿಸಲಾಗಿದ್ದು, ನೂತನ ಲೆಕ್ಕಾಧಿಕಾರಿಗಳು ಸಮರ್ಪಕವಾಗಿ ಭಾಗವಹಿಸಿ ಜವಬ್ದಾರಿ ಕರ್ತವ್ಯ ಕುರಿತು ಅರಿತುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ತಿಳಿಸಿದರು.
ಇಲ್ಲಿನ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಮಾ.2 ರಿಂದ 7 ರವರೆಗೆ ಗ್ರಾಮ ಲೆಕ್ಕಾಧಿಕಾರಿಗಳಿಗಾಗಿ ಆಯೋಜಿಸಿದ್ದ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನೂತನವಾಗಿ ನೇಮಕಾತಿ ಹೊಂದಿದ ಗ್ರಾಮ ಲೆಕ್ಕಾಧಿಕಾರಿಗಳು ಇಲ್ಲಿನ ನುರಿತ ಹಿರಿಯ ಅಧಿಕಾರಿಗಳು ನೀಡುವ ಮಾಹಿತಿ, ಕರ್ತವ್ಯ ಅರಿತು ಕೆಲಸ ಮಾಡಬೇಕು. ಕಾನುನು ಅಡಿಯಲ್ಲಿ ಪ್ರಾಮಾಣಿಕವಾಹಿ ಕರ್ತವ್ಯ ನಿರ್ವಹಿಸಬೇಕು ಎಂದು ಕರೆ ನೀಡಿದರು.
ಶಿಬಿದಲ್ಲಿ ಅರ್ಥವಾಗದ ತಿಳಿಯದ ಕೆಲಸದ ಬಗ್ಗೆ ಕೇಳಿ ತಿಳಿದುಕೊಳ್ಳಿ, ನೀವು ಕರ್ತವ್ಯಕ್ಕೆ ಹಾಜರಾದಾಗ ಅಲ್ಲಿನ ಕೆಲಸದ ಬಗ್ಗೆ ಸಂಪೂರ್ಣ ಮಾಹಿತಿ ಸಲಹೆ ಪಡೆದುಕೊಂಡು ನಿರ್ವಹಿಸಿ ಎಂದರು ಅಲ್ಲದೆ ಎಲ್ಲರಿಗೂ ಶುಭ ಕೋರಿದರು.
ಈ ಸಂದರ್ಭ ದಲ್ಲಿ ನೂತನ ಲೆಕ್ಕಾಧಿಕಾರಿಗಳು ಭಾಗವಹಿಸಿದ್ದರು.