ಬಿಜೆಪಿ ಸೋಲಿಸಲು ತುಕ್ಡೆ ಗ್ಯಾಂಗ್ ಒಂದಾಗಿದೆ-ಮೋದಿ ವಾಗ್ದಾಳಿ
ದೇಶದ್ರೋಹಿ ಕಲಂ ರದ್ದು ಎಂದಿರುವ ಕಾಂಗ್ರೆಸ್ ಗೆ ಮೋದಿ ಎಚ್ಚರಿಕೆ
ಬಿಜೆಪಿ ಸೋಲಿಸಲು ಎಲ್ಲಿಲ್ಲದ ಕಸರತ್ತು ನಡೆಸುತ್ತಿರುವ ತುಕ್ಡೆ ಗ್ಯಾಂಗ್, ಯೋಧರು ನಡೆಸಿದ ದಾಳಿ ವಿರುದ್ಧವು ಸಾಕ್ಷಿ ಕೇಳುತ್ತಿದೆ. ನಾವು ಭಯೋತ್ಪಾಧನೆ ವಿರುದ್ಧ ಹೋರಾಡುತ್ತೇವೆ ಎಂದ್ರೆ, ತುಕ್ಟೆ ಗ್ಯಾಂಗ್ ಅದರ ವಿರದ್ದ ಮಾತನಾಡುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು,
ಬಿಹಾರದ ಗಯಾದಲ್ಲಿ ಹೇಳಿಕೆ ನೀಡಿದ ಪ್ರಧಾನಿ ಮೋದಿ, ಮಹಾಘಟ ಬಂಧನ ವಿರುದ್ಧ ವಾಗ್ದಾಳಿ ನಡೆಸಿದರು.
ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ದೇಶ ದ್ರೋಹಿಗಳಿಗೆ ಶಿಕ್ಷೆ ನೀಡುವ ಕಾನೂನನ್ನೆ ಸಂವಿಧಾನದಿಂದ ತೆಗದು ಹಾಕುತ್ತೇವೆ ಎಂದು ಹೇಳುವ ಮಹಾಘಟ್ ಬಂಧನ ಗ್ಯಾಂಗ್ಗೆ ದೇಶದ ಸುಭದ್ರತೆ ಬೇಕಿಲ್ಲ. ಸುರಕ್ಷತೆಯೂ ಬೇಕಿಲ್ಲ ಅನಿಸುತ್ತಿದೆ. ಭಯೋತ್ಪಾದಕರನ್ನು ಮಟ್ಟ ಹಾಕಲು ನಾವು ನಿರಂತರ ಹೋರಾಟ ನಡೆಸಿದರೆ, ಕಾಂಗ್ರೆಸ್ ನವರು ಭಯೋತ್ಪಾದನೆ, ನಕ್ಸಲರನ್ನು ರಕ್ಷಿಸಲು ನಿಂತಿದೆ ಎಂದು ಆರೋಪಿಸಿದರು.
ಅಲ್ಲದೆ ಭಯೋತ್ಪಾದನೆ, ನಕ್ಸಲಟ ಚಟುವಟಿಕೆಗೆ ಶಿಕ್ಷಿಸುವ ದೇಶದ್ರೋಹಿ ಯಡಿ ಬರುವ ಸಂವಿಧಾನದಲ್ಲಿರುವ ಕಲಂನ್ನೆ ರದ್ದು ಪಡಿಸುತ್ತೇವೆ ಎಂದು ಹೇಳಿದ ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಮೋದಿ, ದೇಶದ್ರೋಹಿ ಭಯೋತ್ಪಾದನೆ ವಿರುದ್ಧ ನಮ್ಮ ಹೋರಾಟ ನಿರಂತರ ಮುಂದುವರೆಯಲಿದೆ ಮತ್ತು ಅವರಿಗೆ ಬೆಂಬಲಿಸುವವರನ್ನು ಸಹ ಸದೆ ಬಡೆಯಲಿವೆ ಎಂದು ಹೇಳುವ ಮೂಲಕ ದೇಶದ್ರೋಹಿಗಳಿಗೆ ಬೆಂಬಲಿಸುವವರಿಗೆ ಖಡಕ್ ಎಚ್ಚರಿಕೆಯನ್ನು ಪರೋಕ್ಷವಾಗಿ ಕಾಂಗ್ರೆಸ್ ನಾಯಕರಿಗೆ ನೀಡಿದ್ದಾರೆ ಎನ್ನಲಾಗಿದೆ.




