ಹಿಂದಿನ ಸರ್ಕಾರದಲ್ಲಿ ಕೊಲೆ, ಅತ್ಯಾಚಾರ, ಭ್ರಷ್ಟತೆ ವ್ಯಾಪಾಕ – ಈಶ್ವರಪ್ಪ
ಹಿಂದಿನ ಸರ್ಕಾರದಲ್ಲಿ ಕೊಲೆ, ಅತ್ಯಾಚಾರ, ಭ್ರಷ್ಟತೆ ವ್ಯಾಪಾಕ – ಈಶ್ವರಪ್ಪ
ವಿವಿ ಡೆಸ್ಕ್ಃ ಈ ಹಿಂದಿನ ಸರ್ಕಾರ ವ್ಯಾಪಕವಾಗಿ ಕೊಲೆ, ಸುಲಿಗೆ, ಅತ್ಯಾಚಾರ, ಭ್ರಷ್ಟಾಚಾರ ನಡೆಸುವ ಮೂಲಕ ರಾಜ್ಯದಲ್ಲಿ ಅಶಾಂತಿಗೆ ಕಾರಣವಾಗಿತ್ತು ಎಂದು ಬಿಜೆಪಿ ಹಿರಿಯ ಮುಖಂಡ ಸಚಿವ, ಈಶ್ವರಪ್ಪ ಆರೋಪಿಸಿದರು.
ಮಾಜಿ ಸಚಿವ ವಿನಯ ಕುಲಕರ್ಣಿ ಬಂಧನ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ವಿನಯ ಕುಲಕರ್ಣಿ ಯೋಗೇಶಗೌಡ ಹತ್ಯಾ ಪ್ರಕರಣದಲ್ಲಿ ಆರೋಪ ಬಂದಿರುವ ಹಿನ್ನೆಲೆ ಸಿಬಿಐ ಕುಲಕರ್ಣಿ ಅವರನ್ನು ವಶಕ್ಕೆ ಪಡೆದಿದ್ದಾರೆ.
ವಿನಯ್ ಕುಲಕರ್ಣಿ ಈ ಪ್ರಕರಣದಲ್ಲಿ ನಿರ್ದೋಷಿಯಾಗಿ ಹೊರ ಬಂದರೆ ಸಂತೋಷ. ಹಿಂದಿನ ಸರ್ಕಾರ ಇಂತಹ ಸಾಕಷ್ಟು ಪ್ರಕರಣದಲ್ಲಿ ಪ್ರಭಾವ ಬೀರಿರುವ ಕಾರಣ ಸಿಬಿಐ ಗಮನಕ್ಕಿದ್ದು, ಅವರು ಎಲ್ಲಾ ಸಂಗತಿ ಕುರಿತು ಪಾರದರ್ಶಕವಾಗಿ ತನಿಖೆಗೊಳ್ಳಲಿದ್ದಾರೆ. ಸತ್ಯಾಂಶ ಹೊರ ಬೀಳಲಿದೆ. ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಲಿ.
ಯೋಗೇಶಗೌಡ ಕುಟುಂಬಕ್ಕೆ ನ್ಯಾಯ ದೊರೆಯಲಿ. ಆದರೆ ವಿನಯ್ ಕುಲಕರ್ಣಿ ಬಿಜೆಪಿ ಸೇರಲಿದ್ದಾರೆ ಎಂಬುದು ಸುಳ್ಳು ಅವರು ಬಿಜೆಪಿ ಸೇರಲು ಬಂದ್ರೂ ನಾವು ಕರೆದುಕೊಳ್ಳುವದಿಲ್ಲ ಎಂದು ಸ್ಪಷ್ಟ ಪಡಿಸಿದರು.